
ಸಾಂದರ್ಭಿಕ ಚಿತ್ರ
ಬೆಂಗಳೂರು: ಅಕ್ಟೋಬರ್ 30 ರಂದು ನಡೆಯುವ ಹಾನಗಲ್ ಸಿಂದಗಿ ಉಪಚುನಾವಣೆಯಲ್ಲಿ ಮೂರು ರಾಜಕೀಯ ಪಕ್ಷಗಳು ಸಿದ್ಧತೆ ನಡೆಸುತ್ತಿವೆ,
ಪಕ್ಷಗಳು ಮತ್ತು ಘಟಾನುಘಟಿ ನಾಯಕರುಗಳ ಇಮೇಜ್ ಹೊರತಾಗಿಯೂ, ಅಭ್ಯರ್ಥಿಗಳ ಆಯ್ಕೆ ಹಾನಗಲ್ ಮತ್ತು ಸಿಂದಗಿ ವಿಧಾನಸಭೆ ಕ್ಷೇತ್ರಗಳ ಪ್ರಭಾವ ಬೀರಲಿದೆ, ಅಭ್ಯರ್ಥಿಗಳು 2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅದೃಷ್ಟ ಬದಲಾಯಿಸಬಹುದು. ಜೊತೆಗೆ ತಮ್ಮ ಕೆರಿಯರ್ ಅನ್ನು ತಾವೇ ನಿರ್ಧರಿಸಿಕೊಳ್ಳಬಹುದು.
ಹಾನಗಲ್ ನಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಒಬ್ಬ ಹಿರಿಯ ನಾಯಕ ಮತ್ತು ಮಾಜಿ ಸಚಿವ ದಿವಂಗತ ಸಿಎಂ ಉದಾಸಿ ಅವರ ಕುಟುಂಬ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯ ಈ ಕ್ಷೇತ್ರವನ್ನು ಪ್ರತಿನಿಧಿಸಲು ಪಕ್ಷವು ಅವರನ್ನು ಆರಿಸಿಕೊಂಡಿತು.
ಇದನ್ನೂ ಓದಿ: ಹಾನಗಲ್-ಸಿಂದಗಿ ಉಪಚುನಾವಣೆ: ಇಂದಿನಿಂದ ಕಾಂಗ್ರೆಸ್ ಘಟಾನುಘಟಿ ನಾಯಕರ ಪ್ರಚಾರ
ಹಾಲಿ ಕಾಂಗ್ರೆಸ್ ಎಂಎಲ್‌ಸಿ ಶ್ರೀನಿವಾಸ ಮಾನೆ ಅವರು 2018 ರ ವಿಧಾನಸಭಾ ಚುನಾವಣೆಯಲ್ಲಿ ಮರಾಠ ಸಮುದಾಯದವರಾಗಿದ್ದರೂ ರನ್ನರ್ ಅಪ್ ಆಗಿದ್ದರು. ಅವರಿಗೆ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಬೆಂಬಲವಿದೆ.
ಜೆಡಿಎಸ್ ನ ನಿಯಾಜ್ ಶೇಖ್ ಅನನುಭವಿ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಆಯ್ಕೆಯಾಗಿದೆ. ಆಶ್ಚರ್ಯಕರ ರೀತಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ 'ಬಿ' ಫಾರಂ ಪಡೆದ ಮೊದಲ ವ್ಯಕ್ತಿ ಅವರಾಗಿದ್ದು, ಕುಮಾರಸ್ವಾಮಿ ತೀವ್ರವಾಗಿ ಪ್ರಚಾರ ನಡೆಸಿದ್ದಾರೆ.
ಸಿಂದಗಿಯಲ್ಲಿ, ಕಾಂಗ್ರೆಸ್ ಪಕ್ಷದ ಅಶೋಕ್ ಮನಗೂಳಿ, ಮಾಜಿ ಜೆಡಿಎಸ್ ಮಂತ್ರಿ ದಿವಂಗತ ಎಂ ಸಿ ಮನಗೂಳಿ ಅವರ ಮಗನಾಗಿದ್ದು, ಪಂಚಮಸಾಲಿ ಲಿಂಗಾಯತ, ಗಮನಹರಿಸಲು ನಾಯಕನಾಗಿ ಹೊರಹೊಮ್ಮಿದ್ದಾರೆ. ಅನುಕಂಪದ ಅಲ ಅವರ ಪರವಾಗಿ ಕಾರ್ಯನಿರ್ವಹಿಸುತ್ತದೆಯೇ ಎಂದು ನೋಡಬೇಕು.
ಬಿಜೆಪಿಯ ರಮೇಶ್ ಭೂಸನೂರು, ಗಾಣಿಗ ಲಿಂಗಾಯತ ನಾಯಕ, 2018 ರ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದರು, ಈ ಅನುಕಂಪದ ಅಲೆ ಮೇಲೆ ಸವಾರಿ ಮಾಡಬಹುದು. ಆದರೆ ಬೊಮ್ಮಾಯಿ ಹಾನಗಲ್ ಮೇಲೆ ಕೇಂದ್ರೀಕರಿಸುವುದರಿಂದ, ಭೂಸನೂರ್ ಅಷ್ಟು ಪ್ರಾಮುಖ್ಯತೆಯನ್ನು ಪಡೆಯದಿರಬಹುದು.
ಜೆಡಿಎಸ್ ಅಭ್ಯರ್ಥಿ ನಾಜಿಯಾ ಶಕೀಲ್ ಅಹ್ಮದ್ ಅಂಗಡಿ, ವಿದ್ಯಾವಂತ ಯುವತಿ, ಮುಸ್ಲಿಂ ಮತದಾರರೊಂದಿಗೆ, ವಿಶೇಷ ಸಂಬಂಧ ಹೊಂದಿದ್ದಾರೆ. ಸಿಂಧಗಿಗೆ ದೇವೇಗೌಡರನ್ನು ಹೊರತು ಪಡಿಸಿ ಬೇರೆ ಯಾವ ನಾಯಕರು ಪ್ರಚಾರ ನಡೆಸಲು ಬರುವ ಸಾಧ್ಯತೆಯಿಲ್ಲ.