ಪ್ರಧಾನಿ ಮೋದಿಯನ್ನು ಹೆಬ್ಬೆಟ್ ಗಿರಾಕಿ ಎಂದ ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ!

ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ರಾಜ್ಯ ಕಾಂಗ್ರೆಸ್ ಹೆಬ್ಬೆಟ್ಟು ಗಿರಾಕಿ ಮೋದಿ ಎಂದು ಹೇಳಿದ್ದು, ಕಾಂಗ್ರೆಸ್'ನ ಈ ವರ್ತನೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. 
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ರಾಜ್ಯ ಕಾಂಗ್ರೆಸ್ ಹೆಬ್ಬೆಟ್ಟು ಗಿರಾಕಿ ಮೋದಿ ಎಂದು ಹೇಳಿದ್ದು, ಕಾಂಗ್ರೆಸ್'ನ ಈ ವರ್ತನೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದ ರಾಜ್ಯ ಕಾಂಗ್ರೆಸ್, ಕಾಂಗ್ರೆಸ್ ಶಾಲೆಗಳನ್ನು ಕಟ್ಟಿಸಿತ್ತು. ಆದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಓದಲಿಲ್ಲ. ವಯಸ್ಕರಿಗೆ ಶಿಕ್ಷಣ ಯೋಜನೆಯನ್ನೂ ಮಾಡಿತ್ತು. ಆದರೂ ಓದಲಿಲ್ಲ. ಹೆಬ್ಬೆಟ್ಟು ಗಿರಾಕಿ ಮೋದಿಯಿಂದ ದೇಶ ನರಳುತ್ತಿದೆ ಎಂದು ಹೇಳಿತ್ತು.

ಇದಕ್ಕೆ ರಾಜ್ಯ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಹೇಳಿಕೆ ಕುರಿತು ಕಾಂಗ್ರೆಸ್'ಗೆ ಬಿಜೆಪಿ ತಿರುಗೇಟು ನೀಡಿದ್ದು, ದೇಶದಲ್ಲಿ ಸಾಕಷ್ಟು ಶಾಲೆಗಳಿದ್ದವು. ಆದರೆ, 50 ವರ್ಷ ಮೇಲ್ಪಟ್ಟ ಅತಿ ಹಿರಿಯ ಯುವ ನಾಯಕ ಭಾರತದಲ್ಲಿ ಓದಲೇ ಇಲ್ಲ. ಭಾರತದಲ್ಲಿ ವಯಸ್ಕರ ಶಿಕ್ಷಣ ಯೋಜನೆಯಿಂದ್ದರೂ ಪಪ್ಪುವಿನ ಬುದ್ಧಿ ಬೆಳೆಯಲೇ ಇಲ್ಲ ಎಂದು ಹೇಳಿತು. 

ಈ ನಡುವೆ ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಅವರು ಟ್ವೀಟ್ ನ್ನು ಸಮರ್ಥಿಸಿಕೊಂಡಿದ್ದು, ಬಿಜೆಪಿಯವರ ಟ್ವೀಟ್ ಗಳೂ ಕೂಡ ಅತ್ಯಂತ ಕ್ರೂರವಾಗಿರುತ್ತವೆ. ಆ ಬಗ್ಗೆ ನಾವು ಮಾತನಾಡಿದ್ದೇವೆಯೇ? ಎಂದು ಪ್ರಶ್ನಿಸಿದ್ದಾರೆ.  

ರಾಜ್ಯ ಬಿಜೆಪಿಯ ಮಾಜಿ ರಾಜ್ಯ ಮಾಧ್ಯಮ ಸಂಚಾಲಕ ಎಸ್ ಶಾಂತಾರಾಮ್ ಅವರು ಮಾತನಾಡಿ, ಯಾವುದೇ ರಾಜಕೀಯ ಪಕ್ಷದ ಸಾಮಾಜಿಕ ಮಾಧ್ಯಮ ತಂಡವು ಅನುಭವ ಹೊಂದಿಲ್ಲದೇ ಇದ್ದರೆ, ಅವರು ಮಾತುಗಳನ್ನು ಅಸಭ್ಯ ಭಾಷೆಗೆ ಅನುವಾದಿಸುತ್ತಾರೆ. ಇಂತಹ ಟ್ವೀಟ್‌ಗಳು ಮತ್ತು ಸಂವಹನವು ದೀರ್ಘಾವಧಿಯಲ್ಲಿ ಜನರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರಾಜಕೀಯವನ್ನು ಎಂದರೆ ಕೇವಲ ಟೀಕಿಸುವುದಲ್ಲ ಎಂಬುದನ್ನು ಸಾಮಾಜಿಕ ಮಾಧ್ಯಮ ತಂಡಗಳು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. 

ಬ್ರಾಂಡ್ ಸ್ಟ್ರಾಟಜಿ ಸ್ಪೆಷಲಿಸ್ಟ್ ಹರೀಶ್ ಬಿಜೂರ್ ಅವರು ಮಾತನಾಡಿ, ಪ್ರತಿ ಪಕ್ಷಗಳು ತಮ್ಮ ಟ್ವೀಟ್‌ಗಳ ಮೂಲಕ ಆಡಳಿತ ಪಕ್ಷದ ಮೇಲೆ ದಾಳಿ ಮಾಡುತ್ತವೆ. ಆಟದಲ್ಲಿ ವೇಗದ ಬೆರಳು ಮೊದಲಾಗುತ್ತದೆ. ಚೌಕಾಶಿಯಲ್ಲಿ ಭಾಷೆ ಮುಖ್ಯವಾಗುತ್ತದೆ. ಈ ವೇಳೆ ನಾಗರೀಕತೆ ಮರೆಯಾಗುತ್ತದೆ. ಈ ರೀತಿಯ ಟ್ವೀಟ್‌ಗಳನ್ನು ನೋಡಿದಾಗ, ಇದು ಸಾಮಾಜಿಕ ಮಾಧ್ಯಮವೇ ಅಥವಾ ಸಮಾಜವಿರೋಧಿ ಮಾಧ್ಯಮವೇ ಎಂಬ ಪ್ರಶ್ನೆಗಳು ಮೂಡುತ್ತವೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com