ಉಪಚುನಾವಣೆ ಕದನದಲ್ಲಿ ಜಾತಿ ಬ್ರಹ್ಮಾಸ್ತ್ರ: ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಯ್ತು ಬಿಜೆಪಿ ಮಾತಿನ ತಂತ್ರ!

ಉಪಚುನಾವಣೆ ಅಖಾಡದಲ್ಲಿ ಜಾತಿ ರಾಜಕೀಯ ಜೋರಾಗಿ ನಡೆಯುತ್ತಿದೆ.  ಬಿಜೆಪಿಯ ಚುನಾವಣಾ ತಂತ್ರ ಸದ್ಯ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಉಪಚುನಾವಣೆ ಅಖಾಡದಲ್ಲಿ ಜಾತಿ ರಾಜಕೀಯ ಜೋರಾಗಿ ನಡೆಯುತ್ತಿದೆ.  ಬಿಜೆಪಿಯ ಚುನಾವಣಾ ತಂತ್ರ ಸದ್ಯ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ಬಿಜೆಪಿ ವಿರೋಧ ಪಕ್ಷಗಳ ನಾಯಕರ ವಿರುದ್ಧ ಜಾತಿ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿದೆ, ಕಾಂಗ್ರೆಸ್ ಮತ್ತು ಜೆಡಿಎಸ್ ಸುಮ್ಮನೆ ಕುಳಿತಿಲ್ಲ.  ಬಿಜೆಪಿಯನ್ನು ಟೀಕಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಅದೇ ಜಾತಿಯ ಅಥವಾ ಸಮುದಾಯದ ನಾಯಕರನ್ನು ಬಳಸಿಕೊಂಡು ತಿರುಗೇಟು ನೀಡುತ್ತಿದೆ.

ಕುರುಬ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಿದಾಗ ಸಾಮಾನ್ಯವಾಗಿ ಮತ್ತೊಬ್ಬ ಕುರುಬ ನಾಯಕ ಕೆ.ಎಸ್.ಈಶ್ವರಪ್ಪ ಅವರೇ ಟಾರ್ಗೆಟ್ ಆಗುತ್ತಾರೆ, ಅದೇ ರೀತಿ ಒಕ್ಕಲಿಗರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿದಾಗ, ಸಚಿವರಾದ ಆರ್.ಅಶೋಕ, ಡಾ.ಸಿ.ಎನ್.ಅಶ್ವಥ್ ನಾರಾಯಣ ಅಥವಾ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಂತಹ ಒಕ್ಕಲಿಗರೇ ನೇತೃತ್ವ ವಹಿಸುತ್ತಾರೆ. ಜೆಡಿಎಸ್‌ನ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅಥವಾ ಇತರ ನಾಯಕರ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದಾಗಲೂ ಇದೇ ರೀತಿಯಾಗಿದೆ ಎಂದುಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಆಡಳಿತ ಪಕ್ಷದ ಈ ತಂತ್ರವನ್ನು ಮೊದಲು ಎತ್ತಿ ತೋರಿಸಿದರು. ಪ್ರತಿಪಕ್ಷಗಳೊಂದಿಗೆ ವ್ಯವಹರಿಸುವಾಗ ಬಿಜೆಪಿಯು ಜಾತಿ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

ತಮ್ಮದೇ ಸಮುದಾಯದ ಸದಸ್ಯರಲ್ಲಿ ಹೆಚ್ಚು ನೋವುಂಟುಮಾಡುವ  ಹೇಳಿಕೆಗಳನ್ನು ನೀಡುವಾಗ ಬಿಜೆಪಿ ಇದನ್ನು ಪ್ರತ್ಯಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಹೇಳಿದ್ದಾರೆ.

ಇದು ಅವರ ಸಾಮಾನ್ಯ ತಂತ್ರವಾಗಿದೆ. ಯಾರಾದರೂ ಬಿಜೆಪಿ ಅಥವಾ ಆರೆಸ್ಸೆಸ್ ಅನ್ನು ಟೀಕಿಸಿದರೆ, ಅವರು ಅದೇ ಜಾತಿ ಅಥವಾ ಸಮುದಾಯದ ನಾಯಕರನ್ನು ಬಳಸಿಕೊಂಡು ಹಿಮ್ಮೆಟ್ಟಿಸಲು ನಿಯೋಜಿಸುತ್ತಾರೆ. 2008-9ರಲ್ಲಿ ನಾನು ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದಾಗಲೂ ಇದನ್ನು ನೋಡಿದ್ದೇನೆ.  ಅವರ ತಂತ್ರವು ಎಂದಿಗೂ ವಿಷಯವನ್ನು ತಿಳಿಸುವುದಿಲ್ಲ, ಆದರೆ ಅವರು ವ್ಯಕ್ತಿಯನ್ನು ದೂಷಿಸಲು ಬೇರೆ ಯಾವುದಾದರೂ ವಿಷಯದ ಬಗ್ಗೆ ಮಾತನಾಡುತ್ತಾರೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

‘ಬೇರೆ ಪಕ್ಷದ ನಾಯಕರ ಬಗ್ಗೆ ಮಾತನಾಡುವಾಗ ವ್ಯಕ್ತಿಯ ರಾಜಕೀಯ ನಿಲುವು ಮುಖ್ಯವಾಗುತ್ತದೆಯೇ ಹೊರತು ಜಾತಿ ಅಲ್ಲ ಎಂಬುದಾಗಿ ನಾನು ನಂಬಿದ್ದೇನೆ ಎಂದು ವಿಧಾನಸಭೆ ಜೆಡಿಎಸ್ ಉಪನಾಯಕ ಬಂಡೆಪ್ಪ ಕಾಶೆಂಪೂರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com