ಆಂತರಿಕ ಕಿತ್ತಾಟ, ಡಕೋಟ ಬಿಜೆಪಿ ಸರ್ಕಾರ: ಕಾಂಗ್ರೆಸ್ ಕಿಡಿ

ಜನರಿಗೆ ಮೂಲ ಸೌಲಭ್ಯಗಳನ್ನು ಒದಗಿಸಿಕೊಡುವ ವಲಯದಲ್ಲೂ ನಿಗದಿಪಡಿಸಿದ ಅನುದಾನವನ್ನು ಕಾಲಮಿತಿಯಲ್ಲಿ ಉಪಯೋಗ ಮಾಡಿಕೊಳ್ಳದಿದ್ದರೆ, ಇಂತಹ ಸರ್ಕಾರವನ್ನು ಏನೆಂದು ಕರೆಯಬೇಕೆಂದು ಕಾಂಗ್ರೆಸ್ ಪಕ್ಷ ವಾಗ್ದಾಳಿ ನಡೆಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಜನರಿಗೆ ಮೂಲ ಸೌಲಭ್ಯಗಳನ್ನು ಒದಗಿಸಿಕೊಡುವ ವಲಯದಲ್ಲೂ ನಿಗದಿಪಡಿಸಿದ ಅನುದಾನವನ್ನು ಕಾಲಮಿತಿಯಲ್ಲಿ ಉಪಯೋಗ ಮಾಡಿಕೊಳ್ಳದಿದ್ದರೆ, ಇಂತಹ ಸರ್ಕಾರವನ್ನು ಏನೆಂದು ಕರೆಯಬೇಕೆಂದು ಕಾಂಗ್ರೆಸ್ ಪಕ್ಷ ವಾಗ್ದಾಳಿ ನಡೆಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಜನತೆಗೆ ಮೂಲಸೌಲಭ್ಯ ಒದಗಿಸಿಕೊಡುವಲ್ಲಿ ಬಿಜೆಪಿ ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂದು ಟೀಕಾ ಪ್ರಕಾರ ಮಾಡಿದೆ.

ಆಂತರಿಕ ಕಿತ್ತಾಟ, ಖಾತೆ ರಂಪಾಟ, ನಾಯಕತ್ವ ಬದಲಾವಣೆ,  ಉಪ ಚುನಾವಣೆಯ ಸಮರದಲ್ಲಿ ಕಾಲಹರಣ,  ಹೀಗೆ ತನ್ನ ವೈಫಲ್ಯಗಳ ಕಾರಣದಿಂದ ಅಭಿವೃದ್ಧಿ ಕಾರ್ಯಗಳ ಜಾರಿಯಲ್ಲಿ ಬಿಜೆಪಿ ಸರ್ಕಾರ ಗಂಭೀರ ಲೋಪ ಎಸಗಿದೆ. ವಸತಿ, ಆರೋಗ್ಯ ಸೇರಿದಂತೆ ಹಲವು ಇಲಾಖೆಗಳಲ್ಲಿ 21. 331 ಕೋಟಿ ರೂಪಾಯಿ ಅನುದಾನ ಬಳಕೆಯಾಗಲಿಲ್ಲ, ಯಾವ ಯೋಜನೆಯಲ್ಲೂ ಪ್ರಗತಿ ಇಲ್ಲ. ಇದನ್ನು ಡಕೋಟಾ ಸರ್ಕಾರ ಎನ್ನದೆ ಇನ್ನೇನು ಹೇಳಬೇಕು ಎಂದು ಕಾಂಗ್ರೆಸ್  ಟೀಕೆ ನಡೆಸಿದೆ.

ಪೆಟ್ರೋಲ್, ಡೀಸೆಲ್, ಎಲ್ ಪಿಜಿ ನಿರಂತರ ಏರಿಕೆ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಗಗಕ್ಕೇರುತ್ತಿದೆ. ಈ ಬೆಲೆ ಏರಿಕೆ ಪ್ರಹಾರ ಜನರನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಕೇಂದ್ರ -ರಾಜ್ಯ ಬಿಜೆಪಿ ಸರ್ಕಾರಗಳಿಗೆ ಕನಿಷ್ಠ ಬದ್ದತೆ ಇದ್ದರೆ ಇಂಧನ ತೈಲಗಳ ಮೇಲಿನ ತೆರಿಗೆ ಕಡಿತಗೊಳಿಸಿ, ಬೆಲೆಯೇರಿಕೆಗೆ ಕಡಿವಾಣ  ಹಾಕಲಿ ಎಂದು ಕಾಂಗ್ರೆಸ್  ಒತ್ತಾಯಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com