ದೇಶವನ್ನು ಖಾಸಗಿಯವರಿಗೆ ಮಾರಲು ಬಿಜೆಪಿ ಹುನ್ನಾರ: ಸಚಿನ್ ಪೈಲಟ್

ದೇಶದ ಜನರ ತೆರಿಗೆ ಹಣದಲ್ಲಿ  ನಿರ್ಮಿಸಲಾದ ಸರ್ಕಾರದ ಆಸ್ತಿಗಳನ್ನು ಮೋದಿ ಸರ್ಕಾರ ಖಾಸಗಿಯವರ ಕೈಗಿಡುವ ಮೂಲಕ ದೇಶವನ್ನು ಮಾರಾಟ ಮಾಡುವ  ಹುನ್ನಾರ ಮಾಡುತ್ತಿದೆ ಎಂದು ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.
ಸುದ್ದಿಗೋಷ್ಠಿಯಲ್ಲಿ ಸಚಿನ್ ಪೈಲಟ್, ಡಿಕೆ ಶಿವಕುಮಾರ್
ಸುದ್ದಿಗೋಷ್ಠಿಯಲ್ಲಿ ಸಚಿನ್ ಪೈಲಟ್, ಡಿಕೆ ಶಿವಕುಮಾರ್

ಬೆಂಗಳೂರು: ದೇಶದ ಜನರ ತೆರಿಗೆ ಹಣದಲ್ಲಿ  ನಿರ್ಮಿಸಲಾದ ಸರ್ಕಾರದ ಆಸ್ತಿಗಳನ್ನು ಮೋದಿ ಸರ್ಕಾರ ಖಾಸಗಿಯವರ ಕೈಗಿಡುವ ಮೂಲಕ ದೇಶವನ್ನು ಮಾರಾಟ ಮಾಡುವ  ಹುನ್ನಾರ ಮಾಡುತ್ತಿದೆ ಎಂದು ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.

ಕಾಂಗ್ರೆಸ್ ಕಚೇರಿಯಲ್ಲಿ ಜರುಗಿದ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಮಾಜಿ ಕೇಂದ್ರ ಸಚಿವ,   ಕಾಂಗ್ರೆಸ್ ಯುವ ನಾಯಕ ಸಚಿನ್ ಪೈಲಟ್,   ಮೋದಿ ಸರ್ಕಾರದ ರೀತಿ ನೀತಿಗಳನ್ನು ಬಲವಾಗಿ ಟೀಕಿಸಿದರು. ಸರ್ಕಾರದ ಈ ಕ್ರಮ ವಿರೋಧಿಸಿ ಕಾಂಗ್ರೆಸ್  ದೇಶಾದ್ಯಂತ ಹೋರಾಟ ನಡೆಸಲಿದೆ ಎಂದು ಗುಡುಗಿದರು.

ರಸ್ತೆ, ಹೆದ್ದಾರಿ, ಗ್ಯಾಸ್ ಪೈಪ್ ಲೈನ್, ಆಹಾರ ದಾಸ್ತಾನು, ಟೆಲಿಫೋನ್ ಸಂಪರ್ಕ, ಬಂದರು, ವಿಮಾನ ನಿಲ್ದಾಣ, ರಾಷ್ಟ್ರೀಯ ಕ್ರೀಡಾಂಗಣ ಹಾಗೂ ರೈಲ್ವೆಯನ್ನು ಕಳೆದ 6 ದಶಕಗಳಿಂದ ತೆರಿಗೆದಾರರ ಬೆವರಿನ ಹಣದಲ್ಲಿ ನಿರ್ಮಿಸಲಾಗಿದ್ದು, ಇವುಗಳನ್ನು ಖಾಸಗೀಕರಣ ಮಾಡಲು ಬಿಜೆಪಿ ಹೊರಟಿದೆ ಎಂದು ದೂರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com