ಚುನಾವಣೆಗೆ ಮುನ್ನ ಜಾತಿ ಜಪ, ಹತ್ತಿರ ಬರುತ್ತಿದ್ದಂತೆ ಪ್ರಕೃತಿ ಚಿಕಿತ್ಸೆ: ಪಕ್ಷ ಸಂಘಟನೆಗೆ ಎಷ್ಟೇ ಬೆವರು ಹರಿಸಿದರೂ ಫಲಿತಾಂಶ ಶೂನ್ಯ!
ಹುಬ್ಬಳ್ಳಿ– ಧಾರವಾಡ, ಬೆಳಗಾವಿ ಮತ್ತು ಕಲಬುರ್ಗಿ ಮಹಾನಗರ ಪಾಲಿಕೆಗಳ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಕಾಂಗ್ರೆಸ್ ನಾಯಕರ ನಡೆ ಕುರಿತು ಬಿಜೆಪಿ ಟೀಕಿಸಿದೆ.
Published: 08th September 2021 10:38 AM | Last Updated: 08th September 2021 01:06 PM | A+A A-

ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ
ಬೆಂಗಳೂರು: ಹುಬ್ಬಳ್ಳಿ– ಧಾರವಾಡ, ಬೆಳಗಾವಿ ಮತ್ತು ಕಲಬುರ್ಗಿ ಮಹಾನಗರ ಪಾಲಿಕೆಗಳ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಕಾಂಗ್ರೆಸ್ ನಾಯಕರ ನಡೆ ಕುರಿತು ಬಿಜೆಪಿ ಟೀಕಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ‘ಡಿ.ಕೆ.ಶಿವಕುಮಾರ್ ಅವರೇ, ಪಕ್ಷ ಸಂಘಟನೆಗೆ ನೀವು ಎಷ್ಟೇ ಬೆವರು ಹರಿಸಿದರೂ ಫಲಿತಾಂಶ ಶೂನ್ಯ ಎಂಬುದು ಈಗಲಾದರೂ ಅರ್ಥವಾಯ್ತೇ? ಚುನಾವಣೆಗೆ ಮುನ್ನ ಜಾತಿ ಜಪ, ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಕೃತಿ ಚಿಕಿತ್ಸೆ. ಒಟ್ಟಿನಲ್ಲಿ ಡಿ.ಕೆ.ಶಿವಕುಮಾರ್ ಅವರ ಬಗಲಿನಲ್ಲೇ ಶತ್ರು ಪಡೆ ಬೇರೂರಿರುವುದು ಮತ್ತೊಮ್ಮೆ ಸಾಬೀತಾಗಿದೆ’ ಎಂದು ವ್ಯಂಗ್ಯವಾಡಿದೆ.
ಇದನ್ನೂ ಓದಿ: ನಾಯಕರ ಜೊತೆ ಸಮನ್ವಯ ಸಾಧಿಸುವುದು ಖಾಲಿ ಇರುವ ಜಾಗಕ್ಕೆ ಬೇಲಿ ಹಾಕುವಷ್ಟು ಸುಲಭವಲ್ಲ, ವಿಫಲಾಧ್ಯಕ್ಷರೇ!
‘ಸಿದ್ದರಾಮಯ್ಯನವರೇ, ನೀವು ಕಾಂಗ್ರೆಸ್ ಪಕ್ಷದ ಗೆಲುವಿಗೆ ತಂತ್ರಗಾರಿಕೆ ರೂಪಿಸುತ್ತೀದ್ದೀರೋ ಅಥವಾ ಭ್ರಷ್ಟಾಧ್ಯಕ್ಷ ಡಿಕೆಶಿ ಪದಚ್ಯುತಿಗೆ ಪ್ರಯತ್ನಿಸುತ್ತಿದ್ದೀರೋ? ನಿಮ್ಮ ಉದ್ದೇಶ ಸ್ಪಷ್ಟಪಡಿಸಿ’ ಎಂದು ಬಿಜೆಪಿ ಮತ್ತೊಂದು ಟ್ವೀಟ್ ಮಾಡಿದೆ.
ಸೆ.3 ರಂದು ನಡೆದ ಪಾಲಿಕೆಗಳ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಅಲ್ಪತೃಪ್ತಿಗೆ ಸಮಾಧಾನ ಹೊಂದಿದ್ದರೆ, ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ. ಜೆಡಿಎಸ್ ಆಘಾತ ಅನುಭವಿಸಿದೆ.
ಡಿ.ಕೆ. ಶಿವಕುಮಾರ್ ಅವರೇ,
— BJP Karnataka (@BJP4Karnataka) September 7, 2021
ಪಕ್ಷ ಸಂಘಟನೆಗೆ ನೀವು ಎಷ್ಟೇ ಬೆವರು ಹರಿಸಿದರೂ ಫಲಿತಾಂಶ ಶೂನ್ಯ ಎಂಬುದು ಈಗಲಾದರೂ ಅರ್ಥವಾಯ್ತೇ?
ಚುನಾವಣೆಗೆ ಮುನ್ನ ಜಾತಿ ಜಪ, ಚುನಾವಣೆ ಹತ್ತಿರ ಬರುತ್ತಿದ್ದಂತೆ ಪ್ರಕೃತಿ ಚಿಕಿತ್ಸೆ.
ಒಟ್ಟಿನಲ್ಲಿ @DKShivakumar ಅವರ ಬಗಲಿನಲ್ಲೇ ಶತ್ರು ಪಡೆ ಬೇರೂರಿದೆ.#CongressVsCongress pic.twitter.com/Y1E4mK6l5N