ಬಿಜೆಪಿಯಿಂದ ಹಣದ ಆಫರ್ ಹೇಳಿಕೆ: ಶ್ರೀಮಂತ ಪಾಟೀಲ್ ಯೂಟರ್ನ್!
ಬಿಜೆಪಿ ಸೇರುವಾಗ ನನಗೆ ಹಣದ ಆಫರ್ ಬಂದಿತ್ತು. ಆದರೆ, ನಾನು ಒಳ್ಳೆಯ ಸ್ಥಾನಮಾನ ಕೇಳಿದ್ದೆ’ ಎಂದು ಹೇಳಿದ್ದ ಮಾಜಿ ಸಚಿವ ಶ್ರೀಮಂತ ಪಾಟೀಲ್ ಅವರು ಇದೀಗ ಯೂಟರ್ನ್ ಹೊಡೆದಿದ್ದಾರೆ.
Published: 13th September 2021 10:29 AM | Last Updated: 13th September 2021 12:56 PM | A+A A-

ಶ್ರೀಮಂತ ಪಾಟೀಲ್
ಬೆಳಗಾವಿ: ಬಿಜೆಪಿ ಸೇರುವಾಗ ನನಗೆ ಹಣದ ಆಫರ್ ಬಂದಿತ್ತು. ಆದರೆ, ನಾನು ಒಳ್ಳೆಯ ಸ್ಥಾನಮಾನ ಕೇಳಿದ್ದೆ’ ಎಂದು ಹೇಳಿದ್ದ ಮಾಜಿ ಸಚಿವ ಶ್ರೀಮಂತ ಪಾಟೀಲ್ ಅವರು ಇದೀಗ ಯೂಟರ್ನ್ ಹೊಡೆದಿದ್ದಾರೆ.
ನಿನ್ನೆಯಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಅಪೇಕ್ಷೆ ಇಲ್ಲದೆ ಬಿಜೆಪಿ ಸೇರ್ಪಡೆಯಾಗಿದ್ದೇನೆ. ಸರ್ಕಾರ ರಚನೆಯಾದ ನಂತರ ಸೂಕ್ತ ಸ್ಥಾನಕ್ಕಾಗಿ ಮಾತ್ರ ಬೇಡಿಕೆ ಇಟ್ಟಿದ್ದೆ. ಮೊನ್ನೆ ನಾನು ನೀಡಿದ ಹೇಳಿಕೆ ತಪ್ಪಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ಸೇರಲು ಹಣದ ಆಫರ್ ಬಂದಿತ್ತು: ವಿಧಾನಸಭೆ ಅಧಿವೇಶನಕ್ಕೂ ಮುನ್ನ ಶ್ರೀಮಂತ ಪಾಟೀಲ್ ಹೇಳಿಕೆ
ಬಿಜೆಪಿಯಿಂದ ನನಗೆ ಹಣದ ಆಫರ್ ಇರಲಿಲ್ಲ. ಪ್ರಧಾನಿ ಮೋದಿ ಅವರ ಆಡಳಿತ ಮತ್ತು ಬಿಜೆಪಿಯ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ನನಗೆ ಸಚಿವ ಸ್ಥಾನ ಸಿಗುವ ಭರವಸೆ ಇತ್ತು. ಆದರೆ, ಸಿಕ್ಕಿಲ್ಲ. ಎಲ್ಲ ಜನಾಂಗದವರು ನನಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮರಾಠಾ ಜನರು ಬಿಜೆಪಿಗೆ ಬೆಂಬಲ ನೀಡಿ ಅಭೂತ ಪೂರ್ವ ಗೆಲುವು ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.