ಉದಾಸಿ ನೀಡಿರುವ ಕೊಡುಗೆ ಮರೆಯಲು ಸಾಧ್ಯವೇ ಇಲ್ಲ: ವಿಧಾನಸಭೆಯಲ್ಲಿ ಸಿಎಂ ಬೊಮ್ಮಾಯಿ

ರಾಜ್ಯದ ರೈತರಿಗೆ ಬೆಳೆ ವಿಮೆ ಸೌಲಭ್ಯಪಡೆದುಕೊಳ್ಳುವ ಪಾಠ ಹೇಳಿಕೊಡುವ ಮೂಲಕ ರೈತಾಪಿ ಸಮುದಾಯದ ಅಭಿವೃದ್ಧಿಗೆ ಮಾಜಿ ಸಚಿವ ಸಿ.ಎಂ. ಉದಾಸಿ ನೀಡಿರುವ ಕೊಡುಗೆ ಮರೆಯಲು ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯದ ರೈತರಿಗೆ ಬೆಳೆ ವಿಮೆ ಸೌಲಭ್ಯಪಡೆದುಕೊಳ್ಳುವ ಪಾಠ ಹೇಳಿಕೊಡುವ ಮೂಲಕ ರೈತಾಪಿ ಸಮುದಾಯದ ಅಭಿವೃದ್ಧಿಗೆ ಮಾಜಿ ಸಚಿವ ಸಿ.ಎಂ. ಉದಾಸಿ ನೀಡಿರುವ ಕೊಡುಗೆ ಮರೆಯಲು ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಧಾನಸಭೆಯಲ್ಲಿಂದು ಸಂತಾಪ ನಿರ್ಣಯ ಬೆಂಬಲಿಸಿ ಮಾತನಾಡಿದ ಅವರು , ಉದಾಸಿ ಆಗಲಿಕೆ ನನ್ನ ಪಾಲಿಗೆ ಬಹಳ ದೊಡ್ಡ ನಷ್ಟವಾಗಿದೆ. ತಂದೆ ಸಮಾನ ರಾಗಿದ್ದ ಉದಾಸಿ ನನ್ನ ರಾಜಕೀಯ ಜೀವನದ ಬೆಳವಣಿಗೆಯಲ್ಲೂ ಬಹಳ ಪ್ರಮುಖ ಪಾತ್ರ ವಹಿಸಿದ್ದಾರೆ ಅವರು ನಾಡು-ನುಡಿಗೆ ಸಲ್ಲಿಸಿದ ಸೇವೆಯನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಕೊಂಡಾಡಿದರು.

ಹಾವೇರಿ ಜಿಲ್ಲೆಯ ಸ್ಥಾಪನೆಯಲ್ಲಿ ಅವರು ನಿರ್ವಹಿಸಿದ ಪಾತ್ರವನ್ನು ಮರೆಯಲಾಗದು ಸಾಧ್ಯವಿಲ್ಲ. 7 ಭಾಷೆಗಳ ಮೇಲೆ ಹಿಡಿತ ಹೊಂದಿದ್ದ ಅವರು ನಿರಂತರವಾಗಿ ಕಲಿಯುವ ಮತ್ತು ಅಧ್ಯಯನ ಆಸಕ್ತಿಯನ್ನು ಹೊಂದಿದ್ದರು ಅವರ ಕೈ ಬರವಣಿಗೆ, ಹಸ್ತಾಕ್ಷರ, ಬಹಳ ಸುಂದರವಾಗಿತ್ತು ನೇರವಾಗಿ ಹೇಳಬೇಕೆಂದರೆ ಮುತ್ತು ಜೋಡಿಸಿದಂತೆ ಕಾಣುತ್ತಿತ್ತು ಅವರ ಹಸ್ತಾಕ್ಷರ ವೇ ಅವರ ಬದುಕಿನ ಮುಖ ಪರಿಚಯ ತೆರೆದಿಡುತ್ತದೆ ಎಂಬ ಮಾತನ್ನು ಮುಖ್ಯಮಂತ್ರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com