ಬಿಜೆಪಿ ಶಾಸಕರ ದೂರು-ದುಮ್ಮಾನಗಳಿಗೆ ಕಿವಿಯಾಗಲಿರುವ ಸಿಎಂ ಬೊಮ್ಮಾಯಿ: ವಾರದಲ್ಲಿ ನಾಲ್ಕು ಗಂಟೆ ಮೀಸಲು

ವಾರದಲ್ಲಿ ನಾಲ್ಕು ಗಂಟೆ ಪಕ್ಷದ ಶಾಸಕರಿಗೆ ಮೀಸಲಿಟ್ಟು ಅವರ ದೂರು-ದುಮ್ಮಾನಗಳು, ಕಷ್ಟಗಳು, ಸಮಸ್ಯೆಗಳನ್ನು ಆಲಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಾಗಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆ
ಬೆಂಗಳೂರಿನಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆ

ಬೆಂಗಳೂರು: ವಾರದಲ್ಲಿ ನಾಲ್ಕು ಗಂಟೆ ಪಕ್ಷದ ಶಾಸಕರಿಗೆ ಮೀಸಲಿಟ್ಟು ಅವರ ದೂರು-ದುಮ್ಮಾನಗಳು, ಕಷ್ಟಗಳು, ಸಮಸ್ಯೆಗಳನ್ನು ಆಲಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಾಗಿದ್ದಾರೆ. 2019ರಲ್ಲಿ ಬಿಜೆಪಿ ಪಕ್ಷ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಆಪರೇಷನ್ ಕಮಲ ಮೂಲಕ ಉರುಳಿಸಿ ಅಧಿಕಾರಕ್ಕೆ ಬಂದ ಮೇಲೆ ಹಲವು ಶಾಸಕರಲ್ಲಿ ಅಸಮಾಧಾನ, ಆರೋಪಗಳು ಕೇಳಿಬರುತ್ತಲೇ ಇದ್ದವು.

ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳು ತಮ್ಮ ಕ್ಷೇತ್ರದ ಸಮಸ್ಯೆಗಳು, ಆಗಬೇಕಾದ ಕೆಲಸಗಳ ಬಗ್ಗೆ ಹೇಳಿಕೊಳ್ಳಲು, ಮಾತನಾಡಲು ಸಿಗುವುದಿಲ್ಲ ಎಂದು ಹೇಳಿಕೊಂಡು ಬರುತ್ತಲೇ ಇದ್ದರು. ಇದಕ್ಕೆಲ್ಲಾ ಪೂರ್ಣವಿರಾಮ ಹಾಕಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ನಿರ್ಧಾರಕ್ಕೆ ಬಂದಿದ್ದಾರೆ.

ನಿನ್ನೆ ಬೆಂಗಳೂರಿನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆದಿತ್ತು. ಅದರಲ್ಲಿ ಪ್ರತಿ ಗುರುವಾರ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನದವರೆಗೆ ಶಾಸಕರ ಧ್ವನಿಗೆ ಕಿವಿಯಾಗುತ್ತೇನೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದರು.

ಶಾಸಕರು ತಮ್ಮ ಕ್ಷೇತ್ರ ಅಥವಾ ಪಕ್ಷಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಮಾತನಾಡಬಹುದು. ಶೀಘ್ರದಲ್ಲೇ, ಸಚಿವರು ಕೂಡ ಶಾಸಕರನ್ನು ಭೇಟಿ ಮಾಡಲಿದ್ದಾರೆ ಎಂದು ಮಾಧುಸ್ವಾಮಿ ಹೇಳಿದರು. ಶಾಸಕರ ನಡುವೆ ಉತ್ತಮ ಸಮನ್ವಯವನ್ನು ಸಾಧಿಸಲು ಮತ್ತು ವಿರೋಧ ಪಕ್ಷವನ್ನು ಸಮರ್ಥವಾಗಿ ಎದುರಿಸಲು ಶಾಸಕರನ್ನು ಸಜ್ಜುಗೊಳಿಸಲು ಪಕ್ಷವು ಪ್ರತಿ ಮಂಗಳವಾರ ಬೆಳಗ್ಗೆ 9.30 ರಿಂದ 11 ರ ನಡುವೆ ಸದನ ನಡೆಯುತ್ತಿರುವಾಗ ಶಾಸಕರ ಪಕ್ಷದ ಸಭೆಯನ್ನು ಕರೆಯಲು ನಿರ್ಧರಿಸಿದೆ ಎಂದು ಮಾಧುಸ್ವಾಮಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com