ಜೆಡಿಎಸ್ ನಲ್ಲಿ 'ಭವಿಷ್ಯ'ದ ಪ್ರಶ್ನೆ: ಪಕ್ಷದ ನಾಯಕರ ಚಿತ್ತ ಕಾಂಗ್ರೆಸ್ ನತ್ತ; ಕುಮಾರಸ್ವಾಮಿ ಒಲವು ಬಿಜೆಪಿಯತ್ತ!

ಪಕ್ಷದೊಳಗೆ ಹೆಚ್ಚುತ್ತಿರುವ ಆಂತರಿಕ ಸಮಸ್ಯೆಯಿಂದಾಗಿ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ಆಡಳಿತಾರೂಡ ಬಿಜಿಪಿಯತ್ತ ವಾಲುವಂತೆ ಮಾಡಿದೆ.
ಕುಮಾರಸ್ವಾಮಿ
ಕುಮಾರಸ್ವಾಮಿ

ಬೆಂಗಳೂರು: ಪಕ್ಷದೊಳಗೆ ಹೆಚ್ಚುತ್ತಿರುವ ಆಂತರಿಕ ಸಮಸ್ಯೆಯಿಂದಾಗಿ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ಆಡಳಿತಾರೂಡ ಬಿಜಿಪಿಯತ್ತ ವಾಲುವಂತೆ ಮಾಡಿದೆ.

ಇತ್ತೀಚೆಗೆ ವಿಧಾನಸಭೆಯಲ್ಲಿ ಜೆಡಿಎಸ್  ಪೆಟ್ರೋಲ್ ಮತ್ತು ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ  ಬಗ್ಗೆ ಪ್ರಸ್ತಾಪಿಸಿತು,ಆದರೆ ಮತ್ತೊಂದು ವಿರೋಧ ಪಕ್ಷ ಕಾಂಗ್ರೆಸ್ ವಿಧಾನಮಂಡಲ ಅಧಿವೇಶನದ ಮುಂಚೆಯೇ ಪ್ರಮುಖ ವಿಷಯವಾಗಿ ಪ್ರಸ್ತಾಪಿಸಿತು.

ಹಳೆಯ ಮೈಸೂರು ಭಾಗದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿಟಿ ದೇವೇಗೌಡ ಮತ್ತು ಕೋಲಾರ ಶಾಸಕ ಕೆ ಶ್ರೀನಿವಾಸ ಗೌಡರಂತಹ ಹಿರಿಯ ಸದಸ್ಯರ ಬಹಿರಂಗ ಬಂಡಾಯದಿಂದಾಗಿ ಪ್ರಾದೇಶಿಕ ಪಕ್ಷವು ನರಳುತ್ತಿದೆ. ಇಬ್ಬರು ಶಾಸಕರು ತಮ್ಮ ರಾಜಕೀಯ ಭವಿಷ್ಯವನ್ನು ರಕ್ಷಿಸಿಕೊಳ್ಳಲು ಮುಂದಿನ ವರ್ಷ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಸೇರಬಹುದು ಎಂದು ಸುಳಿವು ನೀಡಿದ್ದಾರೆ.

ಈ ಅತೃಪ್ತ ನಾಯಕರ ಪಟ್ಟಿಗೆ ಮಾಜಿ ಶಾಸಕ ಕೋನರೆಡ್ಡಿ ಸೇರಿಕೊಂಡಿದ್ದಾರೆ,  ಹುಬ್ಬಳ್ಳಿ -ಧಾರವಾಡ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಸೋಲಿನ ನೈತಿಕ ಹೊಣೆ ಹೊತ್ತು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನೀಡಿದ್ದಾರೆ. ಅಪಾಯವನ್ನು ಗ್ರಹಿಸಿದ ಕುಮಾರಸ್ವಾಮಿ ಅವರನ್ನು ಕರೆದು ಪಕ್ಷ ಬಿಡದಂತೆ ಮನವೊಲಿಸಲು ಪ್ರಯತ್ನಿಸಿದರು.

ಕೋನರಡ್ಡಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಲ್ಲದೆ, ಉತ್ತರ ಕರ್ನಾಟಕದಲ್ಲಿ ಪಕ್ಷಕ್ಕೆ ಟಾರ್ಚ್‌ಬಿಯರ್ ಆಗಿದ್ದಾರೆ. ಹೊರಟ್ಟಿ ಕೂಡ ಕೋನರೆಡ್ಡಿ ಅವರೊಂದಿಗೆ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಸವರಾಜ ಹೊರಟ್ಟಿ ಕೂಡ ಕೋನರೆಡ್ಡಿ ಅವರೊಂದಿಗೆ ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ಕೋನರೆಡ್ಡಿ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವುದನ್ನು ನಿರಾಕರಿಸಿದರು. ಆದರೂ ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ನಲ್ಲಿದ್ದ ದಿನಗಳಿಂದ ನನ್ನನ್ನು ಪ್ರೀತಿಸುತ್ತಿದ್ದರು," ಎಂದು ಹೇಳಿದ್ದಾರೆ.

ಪಕ್ಷಕ್ಕೆ ಹೊಸಬರನ್ನು ಪರೀಕ್ಷಿಸಲು ಸಮಿತಿಯ ನೇತೃತ್ವ ವಹಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಅಲ್ಲಂ ವೀರಭದ್ರಪ್ಪ, ಉತ್ತರ ಕರ್ನಾಟಕದ ಹಲವು ಜೆಡಿಎಸ್ ನಾಯಕರು   ಕಾಂಗ್ರೆಸ್ ಸೇರಲು ಬಯಸಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಕೋನರೆಡ್ಡಿ ಕಾಂಗ್ರೆಸ್ ಸೇರುವ ಬಗ್ಗೆ ಚರ್ಚಿಸಿಲ್ಲ ಎಂದು ಹೇಳಿದ್ದಾರೆ.

ಜೆಡಿಎಸ್ ಒಳಗಿನ ಈ ಬೆಳವಣಿಗೆಗಳು ಕಲಬುರಗಿ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಹುದ್ದೆಗಳ ಚುನಾವಣೆಯ ಮೇಲೂ ಪ್ರಭಾವ ಬೀರಬಹುದು, ಕಾಂಗ್ರೆಸ್ 27, ಬಿಜೆಪಿ 23, ಜೆಡಿಎಸ್ ನಾಲ್ಕು ಮತ್ತು ಒಬ್ಬರು ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ, ನಾಲ್ವರು ಜೆಡಿಎಸ್ ಕಾರ್ಪೊರೇಟರ್‌ಗಳು 'ಜಾತ್ಯತೀತ' ಮತಗಳ ಆಧಾರದಿಂದ ಗೆದ್ದಿದ್ದಾರೆ. ಏಕೆಂದರೆ ನಾಲ್ವರಲ್ಲಿ ಇಬ್ಬರು ಮುಸ್ಲಿಂ ಸಮುದಾಯ ಮತ್ತು ಒಬ್ಬರು ದಲಿತರು. ಹೀಗಾಗಿ ಕುಮಾರಸ್ವಾಮಿ ರಿಸ್ಕ್ ತೆಗೆದುಕೊಂಡು ಬಿಜೆಪಿ ಬೆಂಬಲಿಸಬೇಕಾಗಿದೆ.

ಈಗಾಗಲೇ ಮೈಸೂರು ಪಾಲಿಕೆಯಲ್ಲಿ ಜೆಡಿಎಸ್ -ಬಿಜೆಪಿ ಒಂದಾಗಿ ಅಧಿಕಾರದ ಚುಕ್ಕಾಣಿ ಹಿಡಿದಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಪರ ಜೆಡಿಎಸ್ ಸಾಫ್ಟ್ ಕಾರ್ನರ್ ತೋರಿದರೇ ಪಕ್ಷಕ್ಕೆ ಬೂಮರಾಂಗ್ ಆಗುವ ಸಾಧ್ಯತೆಯಿದೆ. ಎಐಎಂಐಎಂ ಮತ್ತು ಎಎಪಿಯಂತಹ ಪಕ್ಷಗಳೊಂದಿಗೆ ಜೆಡಿಎಸ್ ಚುನಾವಣೆಗೆ ಮುನ್ನ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ರಾಜಕೀಯ ವಿಶ್ಲೇಷಕ ಸಗೀರ್ ಅಹ್ಮದ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com