ರೈತರ ಹೆಸರಿನಲ್ಲಿ ದಲ್ಲಾಳಿಗಳು ಪ್ರತಿಭಟಿಸುವುದು ಸರಿಯಲ್ಲ: ಸಿ.ಟಿ.ರವಿ

ರೈತರ ಹೆಸರಿನಲ್ಲಿ ದಲ್ಲಾಳಿಗಳು ಪ್ರತಿಭಟಿಸುತ್ತಿರುವುದು ಸರಿಯಲ್ಲ,ರೈತರನ್ನು ಶೋಷಿಸಿ ರೈತರ ಹೆಸರಿನಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಸಿಟಿ ರವಿ
ಸಿಟಿ ರವಿ

ಬೆಂಗಳೂರು: ರೈತರ ಹೆಸರಿನಲ್ಲಿ ದಲ್ಲಾಳಿಗಳು ಪ್ರತಿಭಟಿಸುತ್ತಿರುವುದು ಸರಿಯಲ್ಲ,ರೈತರನ್ನು ಶೋಷಿಸಿ ರೈತರ ಹೆಸರಿನಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಕೇಂದ್ರದ ಕೃಷಿ ಕಾಯಿದೆ ವಿರೋಧಿಸಿ ನಡೆದ ಭಾರತ್ ಬಂದ್ ವಿಚಾರವಾಗಿ ಸಿ.ಟಿ.ರವಿ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ಸಿ.ಟಿ.ರವಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಅವರು, 'ರೈತರ ಹೆಸರಿನಲ್ಲಿ ಮೂರು ಪ್ರಮುಖ ಕಾಯ್ದೆ ವಿರೋಧಿಸಿ ಭಾರತ್ ಬಂದ್ ಮಾಡಿದ್ದಾರೆ. ಆದರೆ ರೈತರು ಭಾರತ್ ಬಂದ್ ವಿರೋಧಿಸಿ, ಮೋದಿ ಪರ ನಿಂತಿದ್ದಾರೆ. ಕೃಷಿ ಯೋಜನೆ ಪರವಾಗಿದ್ದು, ಮೋದಿಯನ್ನು ರೈತರು ಬೆಂಬಲಿಸಿದ್ದಾರೆ ಎಂದು ಹೇಳಿದರು.

ಅಂತೆಯೇ ಎಲ್ಲ ಪಕ್ಷಗಳು ರೈತರ ವಿರೋಧವಾಗಿ ನಿಂತು ಭಾರತ್ ಬಂದ್ ನಡೆಸಿರುವುದನ್ನು ರೈತರೇ ವಿರೋಧಿಸಿ ಕೇಂದ್ರದ ಈ ಕೃಷಿಕಾಯಿದೆಗಳು ರೈತರ ಪರ ಎನ್ನುವುದನ್ನು ರೈತರೇ ಹೇಳಿ ತಮ್ಮ ಹಕ್ಕಿಗಾಗಿ ನಿಂತಿದ್ದಾರೆ. ಕಳೆದ ಒಂದು ವರ್ಷದಿಂದ ರೈತ ಮಸೂದೆ ವಿರೋಧವಾಗಿ ಕೆಲವರು ನಿಂತಿದ್ದಾರೆ. ಯಾವುದನ್ನು ಬದಲಿಸಬೇಕೆಂದು ಸ್ಪಷ್ಟವಾಗಿ ಹೇಳಲು ವಿರೋಧಿಗಳಿಂದಾಗುತ್ತಿಲ್ಲ ಎಂದು ಟೀಕಿಸಿದರು.

ದಲ್ಲಾಳಿಗಳ ಪರ ಕಾಂಗ್ರೆಸ್ ಹೋರಾಟ
ಇದೇ ವೇಳೆ ಕಾಂಗ್ರೆಸ್ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದ ಸಿ.ಟಿ.ರವಿ ಅವರು, ಕೆಲವರು ಭಾರತ್ ಬಂದ್ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಬಿಜೆಪಿ ರೈತರ ವಿರೋಧಿ ಎಂದು ಬಿಂಬಿಸಲು ಷಡ್ಯಂತ್ರ ರೂಪಿಸಲಾಗಿತ್ತು. ಅರಾಜಕತೆ ಹುಟ್ಟುಹಾಕುವ ಅವರ ಪ್ರಯತ್ನ ವಿಫಲವಾಗಿದೆ. ಇನ್ನಾದ್ರೂ ಅರಾಜಕತೆ ಹುಟ್ಟುಹಾಕುವುದು ನಿಲ್ಲಿಸಬೇಕು. ಕೃಷಿ ತಿದ್ದುಪಡಿ ಕಾಯ್ದೆಗಳನ್ನ ರೈತರು ಒಪ್ಪಿಕೊಂಡಿದ್ದಾರೆ. ಕೊವಿಡ್ ಕಾರಣಕ್ಕೆ ಬೆಲೆ ಏರಿಕೆಯಾಗಿದೆ. ನಾವು ಅಡಿಕೆ ಬೆಳೆಯುತ್ತೇವೆ. ಯಾವ ಕಾಲಕ್ಕೆ ಸಿಗದ‌ ಬೆಲೆ ಇವಾಗ ನಮಗೆ ಅಡಿಕೆಗೆ ಬೆಲೆ ಸಿಕ್ಕಿದೆ. ರೈತರಿಗೆ 6000 ಹಣವನ್ನು ಸಿದ್ದರಾಮಯ್ಯ ಹಾಕಿದ್ರಾ? ಅದನ್ನು ಮೋದಿ ಹಾಕಿರೋದು. ಬೇರೆ ದೇಶಗಳಿಗೆ ಹೋಲಿಸಿದ್ರೆ ನಮ್ ದೇಶದ ಜಿಡಿಪಿ ಚೆನ್ನಾಗಿದೆ. ಸಿದ್ದರಾಮಯ್ಯ ಮತ್ತೆ ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು ಎಂದು ಸಿ.ಟಿ. ರವಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com