ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸುರೇಶ್ ಗೌಡ ರಾಜೀನಾಮೆ: ಹಲವು ಅನುಮಾನಗಳಿಗೆ ಎಡೆ!

ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಮೊನ್ನೆ ಸೋಮವಾರ ರಾತ್ರಿ ಮಾಜಿ ಶಾಸಕ ಬಿ ಸುರೇಶ್ ಗೌಡ ರಾಜೀನಾಮೆ ನೀಡಿದ್ದಾರೆ. ಪಕ್ಷದೊಳಗಿನ ಆಂತರಿಕ ಒತ್ತಡದಿಂದ ಅವರು ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಹೇಳಲಾಗುತ್ತಿದೆ.
ಸುರೇಶ್ ಗೌಡ
ಸುರೇಶ್ ಗೌಡ

ಬೆಂಗಳೂರು: ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಮೊನ್ನೆ ಸೋಮವಾರ ರಾತ್ರಿ ಮಾಜಿ ಶಾಸಕ ಬಿ ಸುರೇಶ್ ಗೌಡ ರಾಜೀನಾಮೆ ನೀಡಿದ್ದಾರೆ. ಪಕ್ಷದೊಳಗಿನ ಆಂತರಿಕ ಒತ್ತಡದಿಂದ ಅವರು ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ನಿಷ್ಠಾವಂತರಾಗಿರುವ ಸುರೇಶ್ ಗೌಡ ಅವರನ್ನು ಸಂಪರ್ಕಿಸಿದಾಗ, ಪ್ರತಿಯೊಬ್ಬರೂ ತಪ್ಪು ಮಾಡುತ್ತಾರೆ, ಒಂದು ಕುಟುಂಬದಲ್ಲಿ ಕುಟುಂಬ ಸದಸ್ಯರೊಬ್ಬರು ತಪ್ಪು ಮಾಡುವುದಿಲ್ಲವೇ, ಹಾಗೆಂದು ಯಾರೂ ಅವರನ್ನು ಮನೆಯಿಂದ ಆಚೆ ಹಾಕುವುದಿಲ್ಲ. ತಪ್ಪು ಮಾಡಿದವನನ್ನು ಕರೆದು ಕೂರಿಸಿ ಮಾತನಾಡಿ ಮುಂದೆ ಈ ರೀತಿ ತಪ್ಪು ಮಾಡದಂತೆ ಬುದ್ದಿ ಹೇಳುತ್ತಾರೆ ಅಲ್ಲವೇ ಎಂದು ಕೇಳಿದರು. ಹಾಗೆಂದು ಮಾಡಿದ್ದ ತಪ್ಪು ಏನು, ತಾವು ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಯಾರು ಕಾರಣ ಎಂಬುದನ್ನು ಹೇಳಲಿಲ್ಲ.

ಈ ಬೆಳವಣಿಗೆ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸುರೇಶ್ ಗೌಡ ರಾಜೀನಾಮೆ ನೀಡುತ್ತಾರೆ ಎಂಬುದು ಅವರಿಗೆ ಗೊತ್ತಿತ್ತು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಸುರೇಶ್ ಗೌಡ, ತಮ್ಮ ತುಮಕೂರು ಗ್ರಾಮಾಂತರ ಕ್ಷೇತ್ರದ ಮೇಲೆ ಗಮನ ಹರಿಸಬೇಕಾಗಿರುವುದರಿಂದ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದರು. ಅವರ ಕಳೆದ ಚುನಾವಣೆಯಲ್ಲಿ ಜೆಡಿಎಸ್ ನ ಗೌರಿಶಂಕರ್ ವಿರುದ್ಧ ಸೋಲು ಕಂಡರು. ಕ್ಷೇತ್ರದ ಬಗ್ಗೆ ಗಮನ ಹರಿಸದೆ ಪಕ್ಷದ ಕೆಲಸದ ಮೇಲೆ ಗಮನ ಹರಿಸಿದ್ದೇ ಸೋಲಿಗೆ ಕಾರಣ ಎಂದು ಹೇಳುತ್ತಿದ್ದಾರೆ.

ಇತ್ತೀಚೆಗೆ ಆಯ್ಕೆಯಾಗಿರುವ ಸಿರಾ ಕ್ಷೇತ್ರದ ಬಿಜೆಪಿ ಶಾಸಕ ಡಾ ರಾಜೇಶ್ ಗೌಡ ಅವರು ಸುರೇಶ್ ಗೌಡ ಅವರಿಗೆ ಪತ್ರ ಬರೆದು ನಿಮ್ಮ ನಿರ್ಧಾರದಿಂದ ತೀವ್ರ ನೊಂದಿದ್ದೇನೆ. ಇದಕ್ಕೆ ನಿಮ್ಮ ಕಾರಣಗಳೇನು ಎಂದು ನನಗೆ ಗೊತ್ತಿಲ್ಲ, ಇದು ನಿಮ್ಮ ಸ್ವಂತ ನಿರ್ಧಾರವಾದರೂ ಪುನಃ ಪರಿಶೀಲಿಸಿ ಎಂದು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.

ಈ ಮಧ್ಯೆ, ತುಮಕೂರಿನ ಕಾಂಗ್ರೆಸ್ ಮುಖಂಡ ಅವರು ಸುರೇಶ್ ಗೌಡ ಬಹುಶಃ ಕಾಂಗ್ರೆಸ್ ಸೇರ್ಪಡೆಯಾಗಬಹುದು ಎಂದಿದ್ದಾರೆ.ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಕೇಳಿದರೆ, ನಾನು ಈ ಬಗ್ಗೆ ಮಾಹಿತಿ ಸಂಗ್ರಹಿಸುತ್ತೇನೆ. ಈಗ ನಾನು ಯಾವುದೇ ಮಾತನಾಡುವುದಿಲ್ಲ, ಸುರೇಶ್ ಅಥವಾ ಪಕ್ಷದ ನಾಯಕ ರಾಜಣ್ಣ ಅವರಿಗೆ ಮುಜುಗರವನ್ನುಂಟುಮಾಡಲು ಇಷ್ಟವಿಲ್ಲ ಎಂದರು.

ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ಕೇಳಿದಾಗ ಸುರೇಶ್ ಗೌಡ, ಈ ಹಿಂದೆ ಎರಡು ಬಾರಿ ಆಹ್ವಾನ ಬಂದಿತ್ತು, ಆದರೆ ನಾನು ಬಿಜೆಪಿಯಲ್ಲಿರಲು ಬಯಸುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com