Challenge accepted: ಚುನಾವಣೆಯಲ್ಲಿ ಗೆದ್ದು ಬೆಂಗಳೂರು ವೈಭವ ಮರಳಿಸುತ್ತೇವೆ; ತೆಲಂಗಾಣ ಸಚಿವ ಕೆಟಿಆರ್ ಗೆ ಡಿಕೆಶಿ ಸವಾಲು!
ನಾನು ನಿಮ್ಮ ಸವಾಲನ್ನು ಸ್ವೀಕರಿಸುತ್ತೇನೆ. 2023 ರ ಅಂತ್ಯದ ವೇಳೆಗೆ, ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ, ನಾವು ಬೆಂಗಳೂರಿನ ವೈಭವವನ್ನು ಮರುಸ್ಥಾಪಿಸುತ್ತೇವೆ.
Published: 04th April 2022 02:01 PM | Last Updated: 04th April 2022 02:16 PM | A+A A-

ಕೆ,ಟಿ ರಾಮರಾವ್ ಮತ್ತು ಡಿಕೆ ಶಿವಕುಮಾರ್
ಹೈದರಾಬಾದ್: ಹೊಸ ಉದ್ಯಮಗಳ ಆರಂಭಕ್ಕೆ ಮೂಲಭೂತ ಸೌಕರ್ಯಗಳ ಕೊರತೆ ಹಿನ್ನೆಲೆಯಲ್ಲಿ ಬೆಂಗಳೂರು ತೊರೆದು ಹೈದರಾಬಾದ್ಗೆ ಬನ್ನಿ ಎಂದು ಉದ್ಯಮಿಗಳಿಗೆ ತೆಲಂಗಾಣದ ಕೈಗಾರಿಕಾ ಸಚಿವ ಕೆಟಿ ರಾಮರಾವ್ ಆಹ್ವಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
‘ಬೆಂಗಳೂರಿನಲ್ಲಿ ಸ್ಟಾರ್ಟಪ್ ಉದ್ಯಮಗಳು ಸರ್ಕಾರಕ್ಕೆ ದೊಡ್ಡ ಮಟ್ಟದಲ್ಲಿ ತೆರಿಗೆ ಪಾವತಿಸುತ್ತಿದ್ದು, ಆದರೂ ನಮ್ಮಲ್ಲಿ ಕೆಟ್ಟ ರಸ್ತೆಗಳು, ದಿನನಿತ್ಯ ವಿದ್ಯುತ್ ಕಡಿತ, ಕಳಪೆ ಗುಣಮಟ್ಟದ ನೀರು ಸರಬರಾಜು, ಬಳಸಲಾಗದ ಕಾಲುದಾರಿಗಳು ಇವೆ. ಭಾರತದ ಸಿಲಿಕಾನ್ ವ್ಯಾಲಿಗಿಂತ ಅನೇಕ ಗ್ರಾಮೀಣ ಪ್ರದೇಶಗಳು ಈಗ ಉತ್ತಮ ಮೂಲ ಸೌಕರ್ಯವನ್ನು ಹೊಂದಿವೆ’ ಎಂದು ಉದ್ಯಮಿಯೊಬ್ಬರು ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ತೆಲಂಗಾಣದ ಸಚಿವ ಕೆಟಿ ರಾಮರಾವ್ “ ಬೆಂಗಳೂರು ತೊರೆದು ಹೈದರಾಬಾದ್ಗೆ ಬನ್ನಿ. ನಮ್ಮಲ್ಲಿ ಉತ್ತಮ ಭೌತಿಕ ಮೂಲಸೌಕರ್ಯ ಮತ್ತು ಉತ್ತಮ ಸಾಮಾಜಿಕ ಮೂಲಸೌಕರ್ಯವನ್ನು ಹೊಂದಿದ್ದೇವೆ. ನಮ್ಮ ವಿಮಾನ ನಿಲ್ದಾಣವು ಅತ್ಯುತ್ತಮವಾದದ್ದು
ಮತ್ತು ನಗರದೊಳಗೆ ಮತ್ತು ಹೊರಗೂ ಉತ್ತಮ ವಾತಾವರಣ ಇದೆ. ನಾವೀನ್ಯತೆ, ಮೂಲಸೌಕರ್ಯ ಮತ್ತು ಎಲ್ಲರನ್ನು ಒಳಗೊಳ್ಳುವ ಬೆಳವಣಿಗೆ ನಮ್ಮ ಮೂರು ಮಂತ್ರವಾಗಿದೆ” ಎಂದಿದ್ದರು. ತೆಲಂಗಾಣ ಸಚಿವ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
.@ktrtrs, my friend, I accept your challenge. By the end of 2023, with Congress back in power in Karnataka, we will restore the glory of Bengaluru as India’s best city. https://t.co/HFn8cQIlGS
— DK Shivakumar (@DKShivakumar) April 4, 2022
ಈ ಸಂಬಂಧ ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ “ನಾನು ನಿಮ್ಮ ಸವಾಲನ್ನು ಸ್ವೀಕರಿಸುತ್ತೇನೆ. 2023 ರ ಅಂತ್ಯದ ವೇಳೆಗೆ, ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ, ನಾವು ಬೆಂಗಳೂರಿನ ವೈಭವವನ್ನು ಮರುಸ್ಥಾಪಿಸುತ್ತೇವೆ ಹಾಗೂ ಭಾರತದ ಅತ್ಯುತ್ತಮ ನಗರವಾಗಿಸುತ್ತೇನೆ” ಎಂದಿದ್ದಾರೆ.
ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕೆಟಿ ರಾಮರಾವ್, ಅಣ್ಣಾ “ನನಗೆ ಕರ್ನಾಟಕದ ರಾಜಕೀಯದ ಬಗ್ಗೆ ಹೆಚ್ಚು ತಿಳಿದಿಲ್ಲ. ಆದರೆ ಸವಾಲು ಸ್ವೀಕರಿಸಲಾಗಿದೆ. ಹೈದರಾಬಾದ್ ಮತ್ತು ಬೆಂಗಳೂರು ನಮ್ಮ ಯುವಕರಿಗೆ ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ನಮ್ಮ ರಾಷ್ಟ್ರದ ಸಮೃದ್ಧಿಗೆ ಆರೋಗ್ಯಕರವಾಗಿ ಸ್ಪರ್ಧಿಸಲಿ. ಇನ್ಫ್ರಾ, IT&BT ಮೇಲೆ ಕೇಂದ್ರೀಕರಿಸೋಣ, ಹಲಾಲ್ ಮತ್ತು ಹಿಜಾಬ್ ಮೇಲೆ ಅಲ್ಲ” ಎಂದಿದ್ದಾರೆ.