ಆಮ್ ಆದ್ಮಿ ಪಕ್ಷ ಜನರನ್ನು ಒಗ್ಗೂಡಿಸುತ್ತದೆ, ವಿಭಜಿಸುವುದಿಲ್ಲ: ಭಾಸ್ಕರ್ ರಾವ್

ನಿವೃತ್ತ ಎಡಿಜಿಪಿ ಭಾಸ್ಕರ್ ರಾವ್ ಅವರು ಸೋಮವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಸಮ್ಮುಖದಲ್ಲಿ ಸೋಮವಾರ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

Published: 05th April 2022 11:52 AM  |   Last Updated: 05th April 2022 01:53 PM   |  A+A-


Bhaskar Rao

ಭಾಸ್ಕರ್ ರಾವ್

The New Indian Express

ಬೆಂಗಳೂರು: ನಿವೃತ್ತ ಎಡಿಜಿಪಿ ಭಾಸ್ಕರ್ ರಾವ್ ಅವರು ಸೋಮವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಸಮ್ಮುಖದಲ್ಲಿ ಸೋಮವಾರ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಅರ್ಥಶಾಸ್ತ್ರ ವಿಷಯದಲ್ಲಿ ಎಂ.ಎ ಪದವಿ ಪಡೆದಿರುವ ಭಾಸ್ಕರ್ ರಾವ್, 1990 ನೇ ಕರ್ನಾಟಕ ಕೇಡರ್​ ಐಪಿಎಸ್​ ಅಧಿಕಾರಿ ಆಗಿದ್ದಾರೆ. ಬೆಂಗಳೂರು ಪೊಲೀಸ್ ಕಮಿಷನರ್ ಆಗಿಯೂ ಅವರು ಕೆಲಸ ಮಾಡಿದ್ದಾರೆ. ರೈಲ್ವೇ ಪೊಲೀಸ್ ವಿಭಾಗದ ಎಡಿಜಿಪಿ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.

32 ವರ್ಷಗಳ ಕಾಲ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಭಾಸ್ಕರ್ ರಾವ್ ಅವರು, ರಾಜಕೀಯ ಸೇರ್ಪಡೆಗೊಳ್ಳುವ ಸಲುವಾಗಿ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರು. ಇದರಂತೆ ಇದೀಗ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಭಾಸ್ಕರ್ ರಾವ್ ಅವರು, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಪ್ರಸ್ತುತ ಸದಸ್ಯತ್ವ ಅಭಿಯಾನ ನಡೆಸುವುದು ಮತ್ತು ಪಕ್ಷವನ್ನು ಬಲಪಡಿಸಲು ರಾಜ್ಯದಾದ್ಯಂತ ಸಂಚಾರ ಮಾಡುವುದು ಮೊದಲ ಆದ್ಯತೆಯಾಗಿದೆ ಎಂದು ಭಾಸ್ಕರ್ ರಾವ್ ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಎಎಪಿ ಗೆಲುವು ಸಾಧಿಸಲು ಅವಕಾಶವಿದೆ ಎಂದು ನೀವು ಭಾವಿಸುತ್ತೀರಾ?
ಬದ್ಧತೆ ಇರುವ ಯಾರಾದರೂ ಜನರ ಮೇಲೆ ಪ್ರಭಾವ ಬೀರಬಹುದು. ಈ ಹಿಂದಿನ ಚುನಾವಣೆಯಲ್ಲಿ ಜನರಿಗೆ ಯಾವುದೇ ಆಯ್ಕೆ ಇರಲಿಲ್ಲ, ಆದರೆ, ಇದೀಗ ಸ್ವಚ್ಛ ಆಡಳಿತ, ಅಭಿವೃದ್ಧಿ ಮತ್ತು ಪ್ರಗತಿಯ ದಾಖಲೆಯನ್ನು ಹೊಂದಿರುವ ಪಕ್ಷದ ಆಯ್ಕೆ ಇದೆ. ಈಗಾಗಲೇ ಎಲ್ಲ ಪಕ್ಷಗಳಿಗೂ ಒಂದಕ್ಕಿಂತ ಹೆಚ್ಚು ಬಾರಿ ಅವಕಾಶ ನೀಡಿದ್ದು, ಯಾವುದೇ ಬದಲಾವಣೆ ಇಲ್ಲದಿರುವುದರಿಂದ ಜನರು ನಮಗೆ ಅವಕಾಶ ನೀಡುತ್ತಾರೆಂಬ ವಿಶ್ವಾಸ ನನಗಿದೆ. ಅಧಿಕಾರದಲ್ಲಿರುವ ಜನರು ತಮ್ಮನ್ನು ತಾವು ಸುಧಾರಿಸಿಕೊಂಡಿದ್ದಾರೆ ಮತ್ತು ಸರ್ಕಾರ ಮಾಡಬೇಕಾದದ್ದನ್ನು ಅವರು ಮಾಡಿಲ್ಲ. ಪರಿಸ್ಥಿತಿಗಳು ಬದಲಾಗುತ್ತಿದ್ದು, ಪ್ರಜಾಪ್ರಭುತ್ವದ ಈ ಪ್ರಕ್ರಿಯೆಯಲ್ಲಿ ಜನರು ಭಾಗವಹಿಸಬೇಕು,

ನೀವು ಆಪ್'ಗೆ ಸೇರಲು ಏಕೆ ನಿರ್ಧರಿಸಿದ್ದಿರಿ?
ನಾನು ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅವರ ಚಟುವಟಿಕೆಗಳನ್ನು ನೋಡಿದ್ದೇನೆ. ಸರ್ಕಾರ ಏನು ಮಾಡಬಹುದು ಮತ್ತು ಏನು ಮಾಡಬಾರದು ಎಂಬುದು ತಿಳಿದುಕೊಂಡಿದ್ದೇನೆ. ಅವರೆಲ್ಲರ ನಡುವೆ ನಾನು ಜನರ ಕಲ್ಯಾಣಕ್ಕೆ ಹತ್ತಿರವಾಗಿರುವ ಆಮ್ ಆದ್ಮಿ ಪಕ್ಷವನ್ನು ಆಯ್ಕೆ ಮಾಡಿದ್ದೇನೆ. ಇತರ ಪಕ್ಷಗಳಲ್ಲಿ ಕೇವಲ ಘೋಷಣೆ ಮತ್ತು ವೈಯಕ್ತಿಕ ಬೆಳವಣಿಗೆಗಳು ಕಂಡು ಬಂದಿವೆ. ಆದರೆ ಆಪ್ ಜನರ ಬೆಳವಣಿಗೆಗೆ ಕಾರಣವಾಗಿದೆ. ಜನರ ಜೀವನಮಟ್ಟದಲ್ಲಿ ಗ್ರಹಿಸಬಹುದಾದ ಬದಲಾವಣೆಯಾಗಿದೆ ಮತ್ತು ಆ ಕಾರಣಕ್ಕಾಗಿಯೇ ನಾನು ಎಎಪಿಯೊಂದಿಗೆ ನನ್ನ ಸಾರ್ವಜನಿಕ ಸೇವೆಯನ್ನು ಮುಂದುವರಿಸಲು ನಿರ್ಧರಿಸಿದೆ.

ಪಂಜಾಬ್ ಚುನಾವಣೆಯಲ್ಲಿ ಎಎಪಿ ಗೆದ್ದ ನಂತರ ನೀವು ಆ ನಿರ್ಧಾರ ತೆಗೆದುಕೊಂಡಿದ್ದೀರಾ?
ಇಲ್ಲ. ನಾನು ಈ ನಿರ್ಧಾರವನ್ನು ನಾಲ್ಕೂವರೆ ವರ್ಷಗಳ ಹಿಂದೆ ತೆಗೆದುಕೊಂಡಿದ್ದೆ. (ದೆಹಲಿ ಮುಖ್ಯಮಂತ್ರಿ) ಅರವಿಂದ್ ಕೇಜ್ರಿವಾಲ್ ಅವರು ನನಗೆ ಉತ್ತಮ ಸ್ನೇಹಿತರಾಗಿದ್ದಾರೆ ಮತ್ತು ಪಕ್ಷಕ್ಕೆ ಸೇರಲು ನನ್ನನ್ನು ಆಹ್ವಾನಿಸಿದ್ದರು, ಆದರೆ, ಅವರು ನನ್ನ ವೃತ್ತಿಜೀವನದಲ್ಲಿ ಪ್ರಮುಖವಾಗಿರುವ ಕಾರ್ಯಗಳನ್ನು ಮೊದಲು ಪೂರ್ಣಗೊಳಿಸುವಂತೆ ತಿಳಿಸಿದ್ದರು, ನಾನು ಹೊಂದಿದ್ದ ಪ್ರಮುಖ ಅಧಿಕಾರ ಎಂದರೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸ್ಥಾನ. ಬಹಳ ಹಿಂದೆಯೇ ಪಕ್ಷ ಸೇರಲು ನಿರ್ಧರಿಸಿದ್ದೆ.

ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತೀರಾ?
ನಾನು ಇಂದು ಪಕ್ಷಕ್ಕೆ ಸೇರಿದ್ದೇನೆ ಮತ್ತು ಈ ಕುರಿತು ಈಗಲೇ ಮಾಹಿತಿ ನೀಡುವುದು ಕಷ್ಟಕರವಾಗಿರಲಿದೆ. ಚುನಾವಣೆಯಲ್ಲಿ ಖಂಡಿತವಾಗಿ ಎಎಪಿ ಅತ್ಯಂತ ದೊಡ್ಡ ಮಟ್ಟದಲ್ಲಿ ಸ್ಪರ್ಧೆಗಿಳಿಯಲಿದೆ. ಉತ್ತಮ ಅಭ್ಯರ್ಥಿಗಳೊಂದಿಗೆ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.

ನೀವು ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿರುವುದರಿಂದ ಮತ್ತು ನಗರವನ್ನು ಚೆನ್ನಾಗಿ ತಿಳಿದುಕೊಂಡಿರುವುದರಿಂದ ಬಿಬಿಎಂಪಿ ಚುನಾವಣೆಯು ಈಗ ನಿಮ್ಮ ಪ್ರಮುಖ ಆದ್ಯತೆಯಾಗಿದೆಯೇ?
ಬಿಬಿಎಂಪಿ ಚುನಾವಣೆ ನಡೆಸುವ ಮನಸ್ಸು ರಾಜ್ಯ ಸರ್ಕಾರಕ್ಕೆ ಇದೆ ಎಂದೆನಿಸುತ್ತಿಲ್ಲ. ಎಂದು ಈಗಾಗಲೇ ಚುನಾವಣೆಗೆ ನಡೆಸಬೇಕಿದ್ದ ಸಮಯ ಮುಗಿದಿದೆ.

ಪಕ್ಷದಲ್ಲಿ ನಿಮ್ಮ ಪಾತ್ರವೇನು?
ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸಲು ನಮ್ಮ ಕೈಲಾದ ಪ್ರಯತ್ನ ಮಾಡುತ್ತೇವೆ. ನಾನು ಈ ಕ್ಷೇತ್ರಕ್ಕೆ ಹೊಸಬ ಮತ್ತು ಅನುಭವ ಅತ್ಯಂತ ಕಡಿಮೆಯಿದೆ. ಪಕ್ಷವು ನನ್ನಲ್ಲಿ ಏನು ಕೇಳುತ್ತದೆಯೋ ಅದನ್ನು ನಾನು ಮಾಡಲು ನಾನು ಸಿದ್ಧನಿದ್ದೇನೆ.

ಈ ಕ್ಷಣದ ನಿಮ್ಮ ಆದ್ಯತೆಗಳೇನು?
ರಾಜ್ಯಾದ್ಯಂತ ಸಂಚರಿಸಿ, ಬೃಹತ್ ಸದಸ್ಯತ್ವ ಅಭಿಯಾನ ನಡೆಸಿ ಪಕ್ಷವನ್ನು ಬಲಪಡಿಸುವುದು ನನ್ನ ಆದ್ಯತೆಯಾಗಿದೆ.

ರಾಜ್ಯದಲ್ಲಿ ಈಗ ಮುನ್ನೆಲೆಗೆ ಬರುತ್ತಿರುವ ಕೋಮು ವಿಚಾರಗಳ ಬಗ್ಗೆ ನಿಮ್ಮ ಅಭಿಪ್ರಾಯ?
ಮಾತನಾಡಲು ಬೇರೆ ಏನೂ ಇಲ್ಲದಿದ್ದರೆ, ಜನರನ್ನು ವಿಭಜಿಸಲು ಮತ್ತು ಅವರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಾರಂಭಿಸುತ್ತಾರೆ. ಆದರೆ, ಆಮ್ ಆದ್ಮಿ ಪಕ್ಷ ಜನರನ್ನು ವಿಭಜಿಸಲು ಬಯಸುವುದಿಲ್ಲ; ಜನರನ್ನು ಒಗ್ಗೂಡಿಸಲು ಬಯಸುತ್ತದೆ. ವೈಯಕ್ತಿಕವಾಗಿ ಹೇಳುವುದಾದರೆ ನಾನು ಸಾರ್ವಜನಿಕ ವೇದಿಕೆಗಳಲ್ಲಿ ಧರ್ಮ ಮತ್ತು ಜಾತಿಯ ಬಗ್ಗೆ ಮಾತನಾಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.


Stay up to date on all the latest ರಾಜಕೀಯ news
Poll
Nitish_Kumar1

2024 ರ ಲೋಕಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಸಂಯುಕ್ತ ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಬಹುದೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp