ಹಿಂದುತ್ವಕ್ಕೆ ಕೌಂಟರ್ ಕೊಡಲು ಕುಮಾರಸ್ವಾಮಿ ಸಜ್ಜು: ಮುಸ್ಲಿಮರ ನಂಬಿಕೆಯೇ ಇಲ್ಲಿ ಪ್ರಮುಖ ಅಂಶ!
ಮಸೀದಿಗಳಲ್ಲಿ ಧ್ವನಿವರ್ಧಕಗಳ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Published: 05th April 2022 11:44 AM | Last Updated: 05th April 2022 01:09 PM | A+A A-

ಎಚ್.ಡಿ ಕುಮಾರಸ್ವಾಮಿ
ಬೆಂಗಳೂರು: ಮಸೀದಿಗಳಲ್ಲಿ ಧ್ವನಿವರ್ಧಕಗಳ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
75 ವರ್ಷಗಳಿಂದ ಧ್ವನಿವರ್ಧಕಗಳ ಸಮಸ್ಯೆ ಇರಲಿಲ್ಲ, ಈಗ ಸಮಸ್ಯೆ ಏಕೆ ಉದ್ಭವಿಸಿತು? ಜನರ ರಕ್ಷಣೆಗಾಗಿ ಮಾತ್ರ ಬಿಜೆಪಿ ವಿರುದ್ಧ ನಿಂತಿದ್ದೇನೆ. ಯಾರನ್ನೂ ಮೆಚ್ಚಿಸಲು ಅಲ್ಲ. ಬಿಜೆಪಿ ಮತ್ತು ಬಲಪಂಥೀಯ ಸಂಘಟನೆಗಳು ಸಮಾಜವನ್ನು ನಾಶ ಮಾಡುತ್ತಿವೆ.
ಅವರು ಎಲ್ಲೆಡೆ ಬೆಂಕಿ ಹಚ್ಚುತ್ತಿದ್ದಾರೆ. ಇಷ್ಟೆಲ್ಲ ಆದರೂ ಸರಕಾರ ಏನು ಮಾಡುತ್ತಿದೆ? ಅಪಾಯಕಾರಿ ಶಕ್ತಿಗಳು ಸುತ್ತಾಡಲು ನೀವು ಅನುಮತಿಸಿದ್ದೀರಿ. ನಿಮ್ಮ ಶಕ್ತಿ ಈಗ ಎಲ್ಲಿಗೆ ಹೋಗಿದೆ?”ಎಂದು ಪ್ರಶ್ನಿಸಿದರು.
ಹಲವು ವಿಷಯಗಳಲ್ಲಿ ಬಿಜೆಪಿಯನ್ನು ಪರೋಕ್ಷವಾಗಿ ಬೆಂಬಲಿಸಿದ್ದರು ಮತ್ತು ತಮ್ಮ ಪಕ್ಷದ ಎಂಎಲ್ಸಿಯನ್ನು ಮೇಲ್ಮನೆ ಸಭಾಪತಿಯಾಗಿ ಆಯ್ಕೆ ಮಾಡಿದ ನಂತರವೂ ಕುಮಾರಸ್ವಾಮಿ ಬಿಜೆಪಿ ವಿರುದ್ಧ ಹರಿಹಾಯ್ದಿರುವುದು ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಬಿಜೆಪಿಯನ್ನು ಎದುರಿಸಲು ಕಾಗ್ರೆಸ್ ಸಮರ್ಥವಾಗಿಲ್ಲ ಎಂದು ಅಲ್ಪ ಸಂಖ್ಯಾತರು ಭಾವಿಸುತ್ತಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅವರೊಬ್ಬ ಸಹಜ ರಾಜಕಾರಣಿ, ಹಿಂದುತ್ವ ಕ್ಕೆ ಕೌಂಟರ್ ಕೊಡಲು ಪ್ರಯತ್ನಿಸುತ್ತಿದ್ದಾರೆ ಎಂದು ರಾಜಕೀಯ ವಿಶ್ಲೇಷಕ ಬಿ.ಎಸ್ ಮೂರ್ತಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಾಜಿ #LuckyDipCMHDK ಅವರಿಗೆ ಇದೇ ಬದುಕು ತಾನೇ?: ಬಿಜೆಪಿ ವ್ಯಂಗ್ಯ
ಜೆಡಿಎಸ್ ಬಹಿರಂಗವಾಗಿ ಸಿಎಂ ಇಬ್ರಾಹಿಂ ಅವರನ್ನು ಪಕ್ಷಕ್ಕೆ ಸೆಳೆದಿದೆ. ಇದು ಜೆಡಿಎಸ್ ನ ಜಾತ್ಯಾತೀತ ವಾದ. ಹೀಗಾಗಿ ಕಳೆದ ಚುನಾವಣೆಯಲ್ಲಿ ಇಬ್ಬರು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು, ಆದರೆ ಮುಸ್ಲಿಂ ಸಮುದಾಯಕ್ಕೆ ನಂಬಿಕೆ ಮುಖ್ಯ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಮುಸ್ಲಿಮರು ಅವರನ್ನು ನಂಬುತ್ತಾರೆಯೇ? ಕುಮಾರಸ್ವಾಮಿಯವರ ಪಕ್ಷವು ಕಳೆದ ಚುನಾವಣೆಯಲ್ಲಿ ಶೇಕಡಾ 1 ಕ್ಕಿಂತ ಕಡಿಮೆ ಮುಸ್ಲಿಂ ಮತಗಳನ್ನು ಪಡೆದಿರುವುದನ್ನು ಪರಿಗಣಿಸಿ, ಪಕ್ಷವು ಮುಸ್ಲಿಂ ಮತಗಳನ್ನು ಮರಳಿ ಪಡೆಯಲು ಶ್ರಮಿಸುತ್ತಿದೆಯೇ? ಎಂದು ಮೂರ್ತಿ ಹೇಳಿದರು.
ಜೆಡಿಎಸ್ ತೊರೆದು ಬಿಜೆಪಿ ಸೇರಲಿರುವ ಮೇಲ್ಮನೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಬಿಜೆಪಿ ಸೇರಲು ಕುಮಾರಸ್ವಾಮಿ ಒಪ್ಪಿಗೆ ಸೂಚಿಸಿದ್ದಾರೆ. ಇದು ಒಮ್ಮತದ ನಡೆಯಂತೆ ಗೋಚರಿಸುತ್ತದೆ. ಜೆಡಿಎಸ್ ನ ಈ ನಡೆಗಳು ಜೆಡಿಎಸ್ ವಿಶ್ವಾಸಾರ್ಹತೆಯನ್ನು ಸ್ಥಾಪಿಸಲು ಸಹಾಯ ಮಾಡದಿರಬಹುದು ಎಂದು ವಿವರಿಸಿದ್ದಾರೆ.