ಮುಸ್ಲಿಮರನ್ನು ಎಲ್ಲಾ ಚಟುವಟಿಕೆಗಳಿಂದ ನಿಷೇಧಿಸಿದರೆ ಮನೆಯಿಂದ ರದ್ದಿ ಖರೀದಿಸುವವರು ಯಾರು? ರೈತರ ಮಾವು ಖರೀದಿಸುವವರು ಯಾರು?
ಇತ್ತೀಚಿನ ದಿನಗಳಲ್ಲಿ ಸಮಾಜವನ್ನು ಒಡೆಯುವ ಕೆಲಸ ನಡೆಯುತ್ತಿದೆ. ಬೆಂಕಿ ಹಚ್ಚುವ ಕೆಲಸವಾಗುತ್ತಿದೆ. ಅಂತಹವರನ್ನು ಜೈಲಿಗೆ ಕಳುಹಿಸಬೇಕಿದೆ ಎಂದು ಹೇಳಿದರು.
Published: 09th April 2022 08:49 AM | Last Updated: 09th April 2022 08:49 AM | A+A A-

ವಿಶ್ವನಾಥ್
ಮೈಸೂರು: ಬಲಪಂಥೀಯ ಸಂಘಟನೆಗಳಿಂದ ಪ್ರಚೋದನಕಾರಿ ಭಾಷಣಗಳ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜಾತಿ ಮತ್ತು ಧರ್ಮದ ಬಗ್ಗೆ ಜಗಳವಾಡುವ ಬದಲು ಕಷ್ಟಪಟ್ಟು ದುಡಿದು ತಮ್ಮ ಸಂಪಾದನೆ ಹೆಚ್ಚಿಸಿಕೊಳ್ಳಬೇಕೆಂದು ಬಿಜೆಪಿ ಎಂಎಲ್ಸಿ ಎಎಚ್ ವಿಶ್ವನಾಥ್ ಜನರಿಗೆ ಸಲಹೆ ನೀಡಿದ್ದಾರೆ.
ಮೈಸೂರಿನ ಹೊರವಲಯದ ಹೂಟಗಳ್ಳಿಯಲ್ಲಿರುವ ಒಡನಾಡಿ ಸೇವಾ ಸಂಸ್ಥೆಯಲ್ಲಿ ನಡೆದ 'ಪ್ರಸ್ತುತ ವಿದ್ಯಮಾನದಲ್ಲಿ ತೇಜಸ್ವಿ ಚಿಂತನೆ' ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಇತ್ತೀಚಿನ ದಿನಗಳಲ್ಲಿ ಸಮಾಜವನ್ನು ಒಡೆಯುವ ಕೆಲಸ ನಡೆಯುತ್ತಿದೆ. ಬೆಂಕಿ ಹಚ್ಚುವ ಕೆಲಸವಾಗುತ್ತಿದೆ. ಅಂತಹವರನ್ನು ಜೈಲಿಗೆ ಕಳುಹಿಸಬೇಕಿದೆ ಎಂದು ಹೇಳಿದರು.
ಜನರನ್ನು ಗಲಭೆಗೆ ಪ್ರಚೋದಿಸುವವರು ಪ್ರಾಣ ಕಳೆದುಕೊಂಡ ಉದಾಹರಣೆಗಳಿಲ್ಲ. ಅವರು ಪ್ರಚೋದನೆ ಕೊಟ್ಟು ಸುರಕ್ಷಿತವಾಗಿ ಇರುವರು. ಗಲಭೆಯಲ್ಲಿ ತೊಡಗುವ ತಳ ಸಮುದಾಯದ ಅಥವಾ ಬಡ ಕುಟುಂಬದ ಯುವಕರು ಪ್ರಾಣ ಕಳೆದುಕೊಳ್ಳುವರು. ಈ ಸತ್ಯವನ್ನು ಜನರು ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಪಟೇಲರು ಪ್ರಾಬಲ್ಯ ಹೊಂದಿರುವ ಗುಜರಾತ್ನಲ್ಲಿ ಸೂಕ್ಷ್ಮ ಸಮುದಾಯವಾಗಿರುವ ಗಾಣಿಗ ಜಾತಿಗೆ ಸೇರಿದವರು. ಅವರು ಮೂರು ಅವಧಿಗೆ ಮುಖ್ಯಮಂತ್ರಿಯಾದರು ಮತ್ತು ನಂತರ ಎರಡನೇ ಅವಧಿಗೆ ಪ್ರಧಾನಿಯಾದರು. ಅವರು ಎಂದಿಗೂ ಹಿಂದುತ್ವದ ಬಗ್ಗೆ ಮಾತನಾಡಿಲ್ಲ, ಬದಲಾಗಿ ದಲಿತರು ಮತ್ತು ಹಿಂದುಳಿದ ಸಮುದಾಯಗಳಿಗೆ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಪರಿಚಯಿಸಿದರು.
ಆದರೆ ರಾಜ್ಯ ಸರಕಾರ ಕೇಂದ್ರದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಬದಲು ದೇವಸ್ಥಾನಗಳ ಬಳಿ ಮುಸ್ಲಿಮರು ಅಂಗಡಿಗಳನ್ನು ನಡೆಸಬೇಕೆ ಅಥವಾ ಬೇಡವೇ ಎಂಬ ಚರ್ಚೆಯಲ್ಲಿ ಕಾಲಹರಣ ಮಾಡುತ್ತಿರುವುದು ಅಸಹ್ಯಕರ ಸಂಗತಿ,’’ ಎಂದು ಹೇಳಿದರು.
ಶತಮಾನಗಳಿಂದಲೂ ಮುಸ್ಲಿಮರು ದೇವಸ್ಥಾನಗಳ ಬಳಿ ಅಂಗಡಿಗಳನ್ನು ನಡೆಸುತ್ತಿದ್ದರು ಎಂದಿಗೂ ಸಮಸ್ಯೆಯಾಗಿರಲಿಲ್ಲ, ಮುಸ್ಲಿಮರನ್ನು ಎಲ್ಲಾ ಚಟುವಟಿಕೆಗಳಿಂದ ನಿಷೇಧಿಸಿದರೆ ಮನೆಯಿಂದ ರದ್ದಿ ವಸ್ತುಗಳನ್ನು ಖರೀದಿಸುತ್ತಾರೆ ಅಥವಾ ರೈತರಿಂದ ಮಾವು ಖರೀದಿಸುವವರು ಯಾರು ಎಂದು ವಿಶ್ವನಾಥ್ ಪ್ರಶ್ನಿಸಿದರು.