ಸದಾರಮೆ ಪಾತ್ರಧಾರಿ ಯಾರು, ರಾಹುಲ್ ಸಹಿಯನ್ನೇ ನಕಲು ಮಾಡಿದ್ದ ಸಂತೋಷ್ ಪಾಟೀಲ್ ಗೆ ಬೇನಾಮಿ ಅಧ್ಯಕ್ಷೆಯೇ ಬೆನ್ನೆಲುಬು!
ಸದಾರಮೆ ಪಾತ್ರಧಾರಿ ಯಾರು, ಅದರ ಏಕಾಂಗಿ ಪ್ರೇಕ್ಷಕ ಯಾರು ಎಂಬುದು ಲೋಕಕ್ಕೆ ತಿಳಿದಿದೆ. ಸಂತೋಷ್ ಪಾಟೀಲ ರಾಹುಲ್ ಗಾಂಧಿ ಸಹಿ ನಕಲು ಮಾಡಿದ್ದು ಸುಳ್ಳೋ? ಕಾಂಗ್ರೆಸ್ ಪಕ್ಷದಿಂದ ಸಂತೋಷನನ್ನು ವಜಾಗೊಳಿಸಿದ್ದು ಸುಳ್ಳೋ?
Published: 15th April 2022 10:40 AM | Last Updated: 15th April 2022 12:57 PM | A+A A-

ಡಿ.ಕೆ ಶಿವಕುಮಾರ್
ಬೆಂಗಳೂರು: ಮೃತ ಸಂತೋಷ್ ಪಾಟೀಲನ ಕಾಂಗ್ರೆಸ್ ಸಹವಾಸ ಹೇಗಿತ್ತು ಎಂಬ ಬಗ್ಗೆ ಹೊಸದಾಗಿ ವಿವರಿಸಬೇಕಿಲ್ಲ. ಜಿಲ್ಲಾ ಪಂಚಾಯತ್, ನಿಗಮ ಮಂಡಳಿ ಸ್ಥಾನಕ್ಕಾಗಿ ರಾಹುಲ್ ಸಹಿಯನ್ನೇ ನಕಲು ಮಾಡಿದ್ದ ಈತನಿಗೆ ಬೇನಾಮಿಅಧ್ಯಕ್ಷೆ ಯೇ ಬೆನ್ನೆಲುಬು ಎಂದು ಬಿಜೆಪಿ ಆರೋಪಿಸಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾರ್ಯಾದೇಶವಿಲ್ಲದ ಕಾಮಗಾರಿಯ ಬಿಲ್ ಪಾವತಿ ಹೋರಾಟದ ಹಿಂದೆ ಇವರ ಸಂಚು ಇದೆ. ರಾಜ್ಯದಲ್ಲಿ ಸರ್ಕಾರಿ ಕಾಮಗಾರಿಗಳಿಂದ ದುಡ್ಡು ಹೊಡೆಯುವ ಜಾಲ ಬೆಳೆಸಿದ್ದು ಹಾಗೂ ಪರ್ಸಂಟೇಜ್ ವ್ಯವಹಾರ ಶುರು ಮಾಡಿದ್ದೇ ಭ್ರಷ್ಟಾಧ್ಯಕ್ಷ ಎಂಬ ರಹಸ್ಯ ಕೆಪಿಸಿಸಿ ಕಚೇರಿಯಿಂದಲೇ ಹೊರ ಬಂದಿತ್ತು. ಈ ಭ್ರಷ್ಟಾಧ್ಯಕ್ಷರ ಸತ್ಯವ್ರತನ ಸೋಗನ್ನು ಜನ ನಂಬುತ್ತಾರೆಯೇ? ಮಾಡುವುದೆಲ್ಲ ಅನಾಚಾರ, ಮನೆಮುಂದೆ ಬೃಂದಾವನ!
ಸಾವಿನ ಮನೆಯಲ್ಲಿ ರಾಜಕಾರಣ ನಡೆಸುವ ರಣಹದ್ದುಗಳು ಬೀದಿಗೆ ಇಳಿದಿವೆ! ದಲಿತ ಶಾಸಕನ ಮನೆಗೆ ಬೆಂಕಿ ಹಾಕಿದಾಗ ಮನೆಯಲ್ಲಿ ಕೂತ, ಹರ್ಷನ ಕೊಲೆಯಾದಾಗ ಮೌನಕ್ಕೆ ಶರಣಾದ, ಮೂಲಭೂತವಾದಿಗಳು ವಸ್ತ್ರ ಸಂಹಿತೆ ವಿರೋಧಿಸಿದಾಗ ಕಾನೂನು ನೆರವು ನೀಡಿದ, ರಣಹದ್ದುಗಳು ಮತ್ತೆ ಬೀದಿಗಿಳಿದಿವೆ! ಎಂದು ವ್ಯಂಗ್ಯವಾಡಿದೆ.
40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ ಅವರು "ಸೆಲೆಕ್ಟಿವ್ ಆರೋಪ" ಮಾಡುತ್ತಿರುವುದು ಕಾಂಗ್ರೆಸ್ ಟೂಲ್ ಕಿಟ್ ನ ಷಡ್ಯಂತ್ರದ ಭಾಗವೇ? ಕೆಲವರನ್ನು ಮಾತ್ರ ಗುರಿಯಾಗಿಸಿಕೊಂಡು ಅವರು ನಡೆಸುತ್ತಿರುವ ಹೋರಾಟದ ಹಿಂದೆ ಯಾರ ಕೈವಾಡ ಇದೆ? ಆತ್ಮಹತ್ಯೆ ಪ್ರಕರಣದ ಬಳಿಕ ಅವರು ಮತ್ತೆ ಮುನ್ನೆಲೆಗೆ ಬಂದಿದ್ದರ ಉದ್ದೇಶ ಏನು? ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: ಕಾರ್ಯಕರ್ತರೆಂದರೆ ಬಿಜೆಪಿಗೆ ಬಳಸಿ ಬೀಸಾಡುವ ಟೂಲ್‌ಕಿಟ್; ಹಣ ಅಧಿಕಾರ ಇರುವವರ ಮುಂದೆ ಕೇವಲ ಟೈರ್ ಕೆಳಗಿಡುವ ಲಿಂಬೆಹಣ್ಣು ಅಷ್ಟೇ!
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಸಾವಿಗೆ ಜಾರ್ಜ್ ಕಾರಣ ಎಂದು ನೇರ ಆರೋಪ ಮಾಡಿದ್ದರು. ಆದರೆ ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಜಾರ್ಜ್ ರಾಜೀನಾಮೆ ಪಡೆಯಲು ಸಾಧ್ಯವಿಲ್ಲ ಎಂದಿದ್ದರು. ಅದೇ ಸಿದ್ದರಾಮಯ್ಯ ಇಂದು ವಾಟ್ಸ್ಯಾಪ್ ಸಂದೇಶದ ಹಿಂದೆ ಬಿದ್ದಿರುವುದು ಸೋಜಿಗವಲ್ಲವೇ?
40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ ಅವರು "ಸೆಲೆಕ್ಟಿವ್ ಆರೋಪ" ಮಾಡುತ್ತಿರುವುದು #40PercentCONgressToolkit ಷಡ್ಯಂತ್ರದ ಭಾಗವೇ?
— BJP Karnataka (@BJP4Karnataka) April 14, 2022
ಕೆಲವರನ್ನು ಮಾತ್ರ ಗುರಿಯಾಗಿಸಿಕೊಂಡು ಅವರು ನಡೆಸುತ್ತಿರುವ ಹೋರಾಟದ ಹಿಂದೆ ಯಾರ ಕೈವಾಡ ಇದೆ?
ಆತ್ಮಹತ್ಯೆ ಪ್ರಕರಣದ ಬಳಿಕ ಅವರು ಮತ್ತೆ ಮುನ್ನೆಲೆಗೆ ಬಂದಿದ್ದರ ಉದ್ದೇಶ ಏನು?
ಸದಾರಮೆ ಪಾತ್ರಧಾರಿ ಯಾರು, ಅದರ ಏಕಾಂಗಿ ಪ್ರೇಕ್ಷಕ ಯಾರು ಎಂಬುದು ಲೋಕಕ್ಕೆ ತಿಳಿದಿದೆ. ಸಂತೋಷ್ ಪಾಟೀಲ ರಾಹುಲ್ ಗಾಂಧಿ ಸಹಿ ನಕಲು ಮಾಡಿದ್ದು ಸುಳ್ಳೋ? ಕಾಂಗ್ರೆಸ್ ಪಕ್ಷದಿಂದ ಸಂತೋಷನನ್ನು ವಜಾಗೊಳಿಸಿದ್ದು ಸುಳ್ಳೋ? ಈ ಎರಡು ವಿಚಾರದ ಸತ್ಯಾಸತ್ಯತೆ ತೆರೆದಿಡುವ ಸಾಮರ್ಥ್ಯ ಕಾಂಗ್ರೆಸ್ ಪಕ್ಷಕ್ಕೆ ಇದೆಯಾ? ಎಂದು ಪ್ರಶ್ನಿಸಿದೆ.
ಸದಾರಮೆ ಪಾತ್ರಧಾರಿ ಯಾರು, ಅದರ ಏಕಾಂಗಿ ಪ್ರೇಕ್ಷಕ ಯಾರು ಎಂಬುದು ಲೋಕಕ್ಕೆ ತಿಳಿದಿದೆ.
— BJP Karnataka (@BJP4Karnataka) April 14, 2022
ಸಂತೋಷ್ ಪಾಟೀಲ ರಾಹುಲ್ ಗಾಂಧಿ ಸಹಿ ನಕಲು ಮಾಡಿದ್ದು ಸುಳ್ಳೋ?
ಕಾಂಗ್ರೆಸ್ ಪಕ್ಷದಿಂದ ಸಂತೋಷನನ್ನು ವಜಾಗೊಳಿಸಿದ್ದು ಸುಳ್ಳೋ?
ಈ ಎರಡು ವಿಚಾರದ ಸತ್ಯಾಸತ್ಯತೆ ತೆರೆದಿಡುವ ಸಾಮರ್ಥ್ಯ ಕಾಂಗ್ರೆಸ್ ಪಕ್ಷಕ್ಕೆ ಇದೆಯಾ?#40PercentCONgressToolkit pic.twitter.com/tWPtQVJvyb