ಜೆ.ಪಿ.ನಡ್ಡಾ ರಾಜ್ಯಕ್ಕೆ ಭೇಟಿ ನೀಡಿದಾಗ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ: ಸಿಎಂ ಬೊಮ್ಮಾಯಿ
ಮುಂಬರುವ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ಈ ಮಧ್ಯೆ ಖಾತೆ ಸಿಗಬಹುದು ಎಂದು ಆಕಾಂಕ್ಷಿಗಳು ದೆಹಲಿ ಸುತ್ತಾಡಿ ಬಂದಿದ್ದು ಆಯಿತು. ಆದರೆ, ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಬಗ್ಗೆ ಯಾವುದೇ...
Published: 15th April 2022 08:15 PM | Last Updated: 15th April 2022 08:15 PM | A+A A-

ಸಿಎಂ ಬೊಮ್ಮಾಯಿ
ಇಳಕಲ್: ಮುಂಬರುವ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ಈ ಮಧ್ಯೆ ಖಾತೆ ಸಿಗಬಹುದು ಎಂದು ಆಕಾಂಕ್ಷಿಗಳು ದೆಹಲಿ ಸುತ್ತಾಡಿ ಬಂದಿದ್ದು ಆಯಿತು. ಆದರೆ, ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಬಗ್ಗೆ ಯಾವುದೇ ತೃಪ್ತಿದಾಯಿಕ ವಿಚಾರಗಳು ದೆಹಲಿ ಹೈಕಮಾಂಡ್ ನಿಂದ ಸಿಗಲಿಲ್ಲ.
ಈ ಬೆಳವಣಿಗೆಗಳ ಮಧ್ಯೆ ಸಚಿವ ಸ್ಥಾನದ ಆಕಾಂಕ್ಷಿಗಳು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ರಾಜ್ಯ ಭೇಟಿಯನ್ನು ಎದುರು ನೋಡುವಂತಾಗಿದೆ. ಏಕೆಂದರೆ ಸಂಪುಟ ವಿಸ್ತರಣೆ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರು ರಾಜ್ಯಕ್ಕೆ ಆಗಮಿಸಿದಾಗ ಆ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಇಳಕಲ್ ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದನ್ನು ಓದಿ: ಅಮಿತ್ ಶಾ ಬೆನ್ನಲ್ಲೇ ರಾಜ್ಯಕ್ಕೆ ಜೆಪಿ ನಡ್ಡಾ ಭೇಟಿ, ಬಿಜೆಪಿಯ ಮಿಷನ್ 2023ಕ್ಕೆ ತಯಾರಿ
ಇದೇ ವೇಳೆ ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಮುಖಂಡ ಎಸ್ ಆರ್ ಪಾಟೀಲ್ ಅವರು ಯಾವುದೇ ಕೆಲಸಗಳನ್ನು ಮಾಡಲಿಲ್ಲ. ಅವರದೇ ಪಕ್ಷ ಅಧಿಕಾರದಲ್ಲಿತ್ತು ಮತ್ತು ಅವರೇ ಸಚಿವರಾಗಿದ್ದರು. ನೀರಾವರಿ ಯೋಜನೆಗಳ ಜಾರಿಗೆ ಪ್ರಯತ್ನ ಪಟ್ಟಿದ್ದರೆ ಈಗ ಟ್ರ್ಯಾಕ್ಟರ್ ರಾಲಿ ಅವಶ್ಯಕತೆ ಇರಲಿಲ್ಲ ಎಂದರು.
ನೀರಾವರಿ ಯೋಜನೆಗಳ ಜಾರಿ ಕೆಲಸವನ್ನು ಅವರ ಸರ್ಕಾರ ಇದ್ದಾಗ ಮಾಡಿದ್ದರೆ ಅವರಿಗೆ ಬಹಳಷ್ಟು ಒಳ್ಳೆ ಹೆಸರು ಬರುತ್ತಿತ್ತು. ಮಂತ್ರಿಗಳಿದ್ದರೂ, ಅವರ ಸರ್ಕಾರವಿತ್ತು, ಸಮ್ಮಿಶ್ರ ಸರ್ಕಾರದ ಪಾಲುದಾರರಾಗಿದ್ದರು. ಆಗ ಏನೂ ಮಾಡದೇ ಈಗ ರಾಲಿ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಇನ್ನೂ 2023ರ ವಿಧಾನಸಭಾ ಚುನಾವಣೆಗೆ ಪಕ್ಷದ ಕಾರ್ಯತಂತ್ರದ ಕುರಿತು ಚರ್ಚಿಸಲು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ನಾಳೆ ಸಂಜೆ ಬೆಂಗಳೂರಿಗೆ ಆಗಮಿಸಲಿದ್ದು, ಏಪ್ರಿಲ್ 17 ರಂದು ವಿಜಯನಗರ ಜಿಲ್ಲೆಯಲ್ಲಿ ನಡೆಯಲಿರುವ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.