ಈಶ್ವರಪ್ಪ ಪ್ರಕರಣ ಮುಗಿದ ಅಧ್ಯಾಯ, ಬಂಧನದ ಅಗತ್ಯವೇನಿದೆ?: ಹೆಚ್.ಡಿ. ಕುಮಾರಸ್ವಾಮಿ
ಈಶ್ವರಪ್ಪ ಪ್ರಕರಣ ಈಗ ಮುಗಿದ ಅಧ್ಯಾಯವಾಗಿದ್ದು, ಕಾಂಗ್ರೆಸ್ ಅವರ ಬಂಧನಕ್ಕೆ ಆಗ್ರಹಿಸುತ್ತಿದೆ.. ಆದರೆ ಅಗತ್ಯವೇನಿದೆ? ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
Published: 17th April 2022 06:48 PM | Last Updated: 18th April 2022 01:17 PM | A+A A-

ಎಚ್ ಡಿ ಕುಮಾರಸ್ವಾಮಿ
ವಿಜಯಪುರ: ಈಶ್ವರಪ್ಪ ಪ್ರಕರಣ ಈಗ ಮುಗಿದ ಅಧ್ಯಾಯವಾಗಿದ್ದು, ಕಾಂಗ್ರೆಸ್ ಅವರ ಬಂಧನಕ್ಕೆ ಆಗ್ರಹಿಸುತ್ತಿದೆ.. ಆದರೆ ಅಗತ್ಯವೇನಿದೆ? ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿಯ ಕೃಷ್ಣಾ ನದಿ ತೀರದಲ್ಲಿ ಮಾತನಾಡಿದ ಅವರು, 'ಸಿದ್ದರಾಮಯ್ಯ ಕಾಲದಲ್ಲಿ ಬೆಳಗಾವಿ ಜಿಲ್ಲೆಯ ಕುರುಬ ಸಮಾಜದ ಪ್ರಾಮಾಣಿಕ ಡಿವೈಎಸ್ಪಿ ಕಲ್ಲಪ್ಪ ಹಂಡೀಭಾಗ್ ಆತ್ಮಹತ್ಯೆ ಮಾಡಿಕೊಂಡರು. ಆಗ ಸಿದ್ದರಾಮಯ್ಯ ರಾಜೀನಾಮೆ ಕೊಟ್ರಾ? ಆಗಿನ ಗೃಹ ಸಚಿವರು ರಾಜೀನಾಮೆ ಕೊಟ್ಟರಾ? ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಎಸ್ ಈಶ್ವರಪ್ಪ ರಾಜೀನಾಮೆ ನೀಡಿದ್ದಾರೆ, ಆದರೆ ಬಂಧನ ಯಾಕೆ ಆಗಬೇಕು ಎಂದು ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.
KS Eswaraapa's issue is over. Congress is asking to arrest him, what is the need to do that? Congress wants to create a vote bank using such issues... Congress & BJP are using communal issues to get the votes of one particular community: JD(S) leader HD Kumaraswamy in Bengaluru pic.twitter.com/e7dkmz2qoD
— ANI (@ANI) April 17, 2022
ಹಂಡೀಭಾಗ್ ಸರ್ಕಾರದ ನಡವಳಿಕೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರಿಗೆ ಚುನಾವಣೆ ಸಂದರ್ಭದಲ್ಲಿ ಈಗ ಮಾತನಾಡಲು ಇಶ್ಯೂ ಇಲ್ಲ. ಜನರ ಸಮಸ್ಯೆಗಳ ಇಶ್ಯೂ ಇಲ್ಲ. ರಾಜೀನಾಮೆ ಆಯ್ತು, ಈಗ ಬಂಧನಕ್ಕೆ ಹೋರಾಟ ಮಾಡುತ್ತಿದ್ದಾರೆ. ಇದರಿಂದ ಏನು ಉಪಯೋಗ ಇಲ್ಲ ನನಗೆ ಗೊತ್ತಿದೆ. ಈಗ ಸಂತೋಷ್ ಆತ್ಮಹತ್ಯೆ ವಿಷಯ ಇಟ್ಟುಕೊಂಡು ಹೊರಟಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳ ಬಗ್ಗೆ ಜನ ಎಲ್ಲಿಯವರೆಗೂ ತಡೆದುಕೊಳ್ಳುತ್ತಾರೆ.? ಎರಡೂ ಪಕ್ಷವನ್ನ ಜನ ತಿರಸ್ಕರಿಸೋ ಕಾಲ ಬಂದಿದೆ ಎಂದು ಹೇಳಿದರು.
ಸಂತೋಷ್ ಪ್ರಕರಣದಲ್ಲಿ ಮಹಾನಾಯಕನ ಹೆಸರು ಪ್ರಸ್ತಾಪ ವಿಚಾರವಾಗಿ ಮಾತನಾಡಿದ್ದು, ನನಗೆ ಮಹಾ ನಾಯಕ, ದುರಂತ ನಾಯಕರೋ, ಯಾವ ಕಳ್ಳ ನಾಯಕರೋ ಗೊತ್ತಿಲ್ಲ. ಘಟನೆ ನಡೆದ ವಾಸ್ತವಾಂಶವನ್ನ ಜನರ ಮುಂದೆ ಸರ್ಕಾರ ಇಡಬೇಕು. ಇದರಲ್ಲಿ ಯಾರ ಪಾತ್ರ ಇದೆ, ಯಾಕೆ ಘಟನೆ ನಡೆಯಿತು ಅನ್ನೋದರ ತನಿಖೆ ಆಗಬೇಕು. ಈಶ್ವರಪ್ಪ ಪರ್ಸೆಟೆಂಜ್ ಹೆಸರಲ್ಲಿ ಬೀದಿಗಿಳಿದವರು, ಅವತ್ಯಾಕೆ ಇಳಿಯಲಿಲ್ಲ. ಧರ್ಮ ಧರ್ಮಗಳ ನಡುವೆ ಸಂಘರ್ಷ ಆದಾಗ, ಇದೇ ಕಾಂಗ್ರೆಸ್ ಮೌನಕ್ಕೆ ಶರಣಾಗಿದ್ದು ಯಾಕೆ? ಸರ್ವಜನಾಂಗದ ಶಾಂತಿಯ ತೋಟವನ್ನ ಹಾಳು ಮಾಡುವಾಗ ಎಲ್ಲಿ ಹೋಗಿದ್ದರು. ಈಗ ಈಶ್ವರಪ್ಪ ಅವರ ಪರ್ಸೆಂಟೇಜ್ ಬಗ್ಗೆ ಮಾತನಾಡುತ್ತಾರೆ ಎಂದು ಎಚ್ ಡಿಕೆ ಕಿಡಿಕಾರಿದ್ದಾರೆ.