ಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಬಿಜೆಪಿ ಸರ್ಕಾರದಿಂದ 200 ಕೋಟಿ ರೂ. ಹಗರಣ: ಕಾಂಗ್ರೆಸ್ ಆರೋಪ
ಸಬ್ ಇನ್ಸ್ ಪೆಕ್ಟರ್ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಬಿಜೆಪಿ ಸರ್ಕಾರ ವಿರುದ್ಧ ಆರೋಪ ಮಾಡಿದೆ. ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೆವಾಲಾ, ಸುಮಾರು ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಸುಮಾರು 200 ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ.
Published: 19th April 2022 08:26 AM | Last Updated: 19th April 2022 01:06 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಸಬ್ ಇನ್ಸ್ ಪೆಕ್ಟರ್ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಬಿಜೆಪಿ ಸರ್ಕಾರ ವಿರುದ್ಧ ಆರೋಪ ಮಾಡಿದೆ. ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೆವಾಲಾ, ಸುಮಾರು ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಸುಮಾರು 200 ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ.
ಬೊಮ್ಮಾಯಿ ಸರ್ಕಾರವನ್ನು ಹಗರಣಗಳ ಸರ್ಕಾರ ಎಂದು ಕರೆಯಬೇಕು, ಒಬ್ಬ ಬಿಜೆಪಿ ನಾಯಕ ಮತ್ತು ಸಚಿವರು ಪ್ರತಿಯೊಂದು ಹಗರಣದಲ್ಲಿಯೂ ಸಾಮಾನ್ಯವಾಗಿ ಸಂಬಂಧ ಹೊಂದಿದ್ದಾರೆ. ಸುಮಾರು 70 ಸಾವಿರ ಯುವ ಅಭ್ಯರ್ಥಿಗಳನ್ನು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹಗರಣದಲ್ಲಿ ಪೇಪರ್ ಮಾಫಿಯಾಗೆ ಮುಕ್ತವಾಗಿ ಮಾರಾಟ ಮಾಡಲಾಗಿದೆ. ಆರೋಪಿಯ ಮನೆಯಲ್ಲಿ ಗೃಹ ಸಚಿವರು ಉಪಹಾರ ಸೇವಿಸಿದ್ದಾರೆ ಎಂದು ಆರೋಪಿಸಿದ್ದಾರೆ.
Bommai Govt should be renamed as “Scam Govt” !
A BJP Leader & a Minister connection is the common link in every scam.
Future of over 70,000 Youth candidates in Police Sub Inspector Exam openly sold to “Paper Mafia”.
Still, Home Minister had “breakfast” at accused’s home!
1/2 pic.twitter.com/nNLzEUPCDJ— Randeep Singh Surjewala (@rssurjewala) April 18, 2022
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಹಗರಣದಲ್ಲಿ ದೊಡ್ಡ ದೊಡ್ಡ ಹೆಸರುಗಳು ಕೇಳಿಬರುತ್ತಿವೆ. ರಾಜಕೀಯ ನಾಯಕರು ಮತ್ತು ಅಧಿಕಾರಿಗಳು ಭಾಗಿಯಾಗಿದ್ದಾರೆ. ಸರ್ಕಾರ ಹೈಕೋರ್ಟ್ ನ ಸೂಪರ್ ವೈಸರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಬೇಕು. ಇದರಲ್ಲಿ ದಿವ್ಯಾ ಹಾಗರಗಿ ಕಿಂಗ್ ಪಿನ್ ಆಗಿರಲಿಕ್ಕಿಲ್ಲ, ಬೇರೆಯವರು ಭಾಗಿಯಾಗಿದ್ದಾರೆ ಎಂದು ಅನಿಸುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಕಲಬುರಗಿ: ಪಿಎಸ್ಐ ನೇಮಕಾತಿ ಆಕ್ರಮ; ಪರೀಕ್ಷೆ ನಡೆದ ಶಿಕ್ಷಣ ಸಂಸ್ಥೆ ಮೇಲೆ ಸಿಐಡಿ ದಾಳಿ
ಇನ್ನು ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಗ್ಗೆ ಸದನದಲ್ಲಿ ಹಲವು ಬಾರಿ ಪ್ರಸ್ತಾಪಿಸಿದ್ದರೂ ಕೂಡ ಗೃಹ ಸಚಿವರು ಹರಿಬಿರಿಯ ಗೊಂದಲದ ಸ್ಪಷ್ಟತೆ ಇಲ್ಲದ ಉತ್ತರ ನೀಡಿದ್ದಾರೆ. ಎಸ್ ಐ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಹಗರಣದ ಬಗ್ಗೆ ಇದಕ್ಕೆ ಕಾರಣಕರ್ತರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.