ಹಾಸನದಲ್ಲಿ ಜೆಡಿಎಸ್ ಜನತಾ ಜಲಧಾರೆ: ಇಬ್ಬರು ಶಾಸಕರ ಗೈರು, ಹೆಚ್'ಡಿಕೆ, ಹೆಚ್'ಡಿಡಿ ಅಸಮಾಧಾನ
ಜೆಡಿಎಸ್ ಪಕ್ಷದ ಜನತಾ ಜಲಧಾರೆ ಸಮಾವೇಶಕ್ಕೆ ಗೈರು ಹಾಜರಾಗಿದ್ದ ಇಬ್ಬರು ಶಾಸಕರ ವಿರುದ್ಧ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನಗೊಂಡಿದ್ದಾರೆ.
Published: 22nd April 2022 01:35 PM | Last Updated: 22nd April 2022 01:48 PM | A+A A-

ಜೆಡಿಎಸ್ ನಾಯಕರು
ಹಾಸನ: ಜೆಡಿಎಸ್ ಪಕ್ಷದ ಜನತಾ ಜಲಧಾರೆ ಸಮಾವೇಶಕ್ಕೆ ಗೈರು ಹಾಜರಾಗಿದ್ದ ಇಬ್ಬರು ಶಾಸಕರ ವಿರುದ್ಧ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನಗೊಂಡಿದ್ದಾರೆ.
2023 ವಿಧಾನಸಭಾ ಚುನಾವಣೆ ಹತ್ತಿರದಲ್ಲಿದ್ದು, ಚುನಾವಣೆಯನ್ನು ಗಮನದಲ್ಲಿಕೊಂಟು ಪಕ್ಷ ನಡೆಸುತ್ತಿರುವ ಕಾರ್ಯಕ್ರಮಗಳಲ್ಲಿ ಜನತಾ ಜಲಧಾರೆ ಪ್ರಮುಖವಾಗಿದೆ. ಈ ಕಾರ್ಯಕ್ರಮಕ್ಕೆ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಮತ್ತು ಅರಕಲಗೂಡು ಶಾಸಕ ಎಟಿ ರಾಮಸ್ವಾಮಿ ಅವರು ಗೈರು ಹಾಜರಾಗಿರುವುದು ಪಕ್ಷದ ನಾಯಕರಲ್ಲಿ ಇರಿಸು ಮುರಿಸು ತಂದಿದೆ.
ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿಯವರು, 2018ರ ಚುನಾವಣೆಯಲ್ಲಿ ಎಚ್ಡಿ ದೇವೇಗೌಡರ ಹೆಸರು ಮತ್ತು ಅರಸೀಕೆರೆಯಲ್ಲಿ ಜೆಡಿಎಸ್ನ ಪ್ರಬಲ ಹಿಡಿತದಿಂದ ಕೆಎಂ ಶಿವಲಿಂಗೇಗೌಡ ಗೆದ್ದಿದ್ದಾರೆಂಬುದುನ್ನು ಮರೆಯಬಾರದು. ಯಾವುದೇ ನಾಯಕರು ಆತುರದ ನಿರ್ಧಾರ ತೆಗೆದುಕೊಂಡು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಬಾರದು. ಹಿರಿಯ ನಾಯಕರಿಗೆ ಅಗೌರವ ಸೂಚಿಸುವ ಬದಲು ಪಕ್ಷವನ್ನು ಬಿಟ್ಟು ಹೋಗಲಿ ಎಂದು ಹೇಳಿದರು.
ಇದನ್ನೂ ಓದಿ: ರಾಜಕಾರಣದಲ್ಲಿ ಯಾರು ಸತ್ಯವಂತರು? ಕಾಂಗ್ರೆಸ್ ನವರು ಏನೂ ಮಾಡಿಲ್ವೇ?: ಹೆಚ್.ಡಿ ದೇವೇಗೌಡ ಪ್ರಶ್ನೆ
ಕೆ.ಎಂ.ಶಿವಲಿಂಗೇಗೌಡರು ಸಾರ್ವಜನಿಕ ಸಮಾರಂಭಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಹೊಗಳಿ ರಾಜಕೀಯ ಹೈ ಡ್ರಾಮಾ ಆಡುತ್ತಿದ್ದಾರೆ. ವಿಧಾನಸೌಧದಲ್ಲಿ ಶಿವಲಿಂಗೇಗೌಡ ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆಂದು ತಿಳಿಸಿದರು.
ಆದರೆ, ಇದೇ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದ ಮತ್ತೊಬ್ಬ ಶಾಸಕ ರಾಮಸ್ವಾಮಿ ಕುರಿತು ಕುಮಾರಸ್ವಾಮಿಯವರು ಯಾವುದೇ ಮಾತುಗಳನ್ನು ಆಡದಿರುವುದು ಕುತೂಹಲವನ್ನು ಮೂಡಿಸಿದೆ.
ಶಿವಲಿಂಗೇಗೌಡ ಕುರಿತು ಕುಮಾರಸ್ವಾಮಿಯವರು ಮಾತನಾಡುತ್ತಿದ್ದ ಸಂದರ್ಭದಲ್ಲಿಯೇ ಮೈಕ್ ಪಡೆದುಕೊಂಡು ಮಾತನಾಡಿದ ದೇವೇಗೌಡ ಅವರು, ‘ನಾನು ತೆಂಗಿಗೆ ಪರಿಹಾರ ವಿಚಾರವಾಗಿ ಧರಣಿ ಮಾಡುತ್ತೇನೆ, ಮೂರು ದಿನ ಬಿಟ್ಟು ಬಂದು ಏಳಿಸಿ. ಕುಮಾರಸ್ವಾಮಿಗೆ ಹೇಳಿ ಏನಾದರೂ ಪರಿಹಾರ ಕೊಡಿಸಿ ಎಂದು ಹೇಳಿದ್ದರು. ಅಬ್ಬಾ ಎಂತಾ ಡ್ರಾಮಾ... ಜಿಲ್ಲೆಯಲ್ಲಿ ಮತ್ತೊಬ್ಬ ನಾಟಕಕಾರ ಹುಟ್ಟಿದ್ದಾರೆಂದು ತಿಳಿಸಿದರು. ಕಾರ್ಯಕ್ರದಲ್ಲಿ ಪಕ್ಷದ ನೂತನ ಅಧ್ಯಕ್ಷ ಸಿಎಂ ಇಬ್ರಾಹಿಂ ಕೂಡ ಹಾಜರಿದ್ದು, ಇಬ್ರಾಹಿಂ ಅವರೂ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಇದನ್ನೂ ಓದಿ: ಜೆಡಿಎಸ್ ನಲ್ಲಿ ಹೊಸ ಪರ್ವ: ಪಕ್ಷದ ರಾಜ್ಯಾಧ್ಯಕ್ಷರಾಗಿ ಸಿಎಂ ಇಬ್ರಾಹಿಂ ಅಧಿಕಾರ ಸ್ವೀಕಾರ
2023ರ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡುವುದಾಗಿ ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಶಿವಲಿಂಗೇಗೌಡರು ಕಾಂಗ್ರೆಸ್ ನಾಯಕರ ಪರವಾಗಿ ಮಾತನಾಡುತ್ತಿದ್ದಾರೆಂದು ಮೂಲಗಳು ತಿಳಿಸಿವೆ.
ಈ ನಡುವೆ ಪ್ರಸ್ತುತದ ಪರಿಸ್ಥಿತಿ ಕುರಿತು ಪ್ರತಿಕ್ರಿಯೆ ನೀಡಲು ಶಿವಲಿಂಗೌಡ ಹಾಗೂ ಎಟಿ ರಾಮಸ್ವಾಮಿಯವರು ಪ್ರತಿಕ್ರಿಯೆ ನೀಡಲು ಯಾರಿಗೂ ಸಂಪರ್ಕಕ್ಕೆ ಸಿಕ್ಕಿಲ್ಲ