ಆಪ್ 'ಪೊರಕೆ' ಹಿಡಿದ ಕೋಡಿಹಳ್ಳಿ ಚಂದ್ರಶೇಖರ್, ಕರ್ನಾಟಕದ ಮೂರೂ ಪಕ್ಷಗಳ ವಿರುದ್ಧ ವಾಗ್ದಾಳಿ
ಅಸ್ಥಿತ್ವಕ್ಕೆ ಬಂದು 42 ವರ್ಷವಾದ ನಂತರ ಕೋಡಿಹಳ್ಳಿ ಚಂದ್ರಶೇಖರ್ ಅವರ ಕರ್ನಾಟಕ ರಾಜ್ಯ ರೈತ ಸಂಘ(KRSS)ದ ರಾಜಕೀಯ ಬಣ ಆಮ್ ಆದ್ಮಿ ಪಾರ್ಟಿ(AAP)ಯೊಂದಿಗೆ ಕೈಜೋಡಿಸಿದ್ದು ಮುಂದಿನ ವರ್ಷ 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದೆ.
Published: 22nd April 2022 09:41 AM | Last Updated: 22nd April 2022 01:33 PM | A+A A-

ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಆಪ್ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೊತೆಗೆ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಇತರರು
ಬೆಂಗಳೂರು: ಅಸ್ಥಿತ್ವಕ್ಕೆ ಬಂದು 42 ವರ್ಷವಾದ ನಂತರ ಕೋಡಿಹಳ್ಳಿ ಚಂದ್ರಶೇಖರ್ ಅವರ ಕರ್ನಾಟಕ ರಾಜ್ಯ ರೈತ ಸಂಘ(KRSS)ದ ರಾಜಕೀಯ ಬಣ ಆಮ್ ಆದ್ಮಿ ಪಾರ್ಟಿ(AAP)ಯೊಂದಿಗೆ ಕೈಜೋಡಿಸಿದ್ದು ಮುಂದಿನ ವರ್ಷ 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದೆ.
ರೈತ ಸಮಾವೇಶವನ್ನು ಆಯೋಜಿಸಿದ ಕೋಡಿಹಳ್ಳಿ ಚಂದ್ರಶೇಖರ್ ಅವರು ದೆಹಲಿ ಮುಖ್ಯಮಂತ್ರಿ ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ಆಮ್ ಆದ್ಮಿ ಪಕ್ಷ ಸೇರಿಕೊಂಡಿದ್ದಾರೆ. ಮೂಲ ಕೆಆರ್ಆರ್ಎಸ್ನ ಸಂಸ್ಥಾಪಕ-ಸದಸ್ಯರಲ್ಲಿ ಒಬ್ಬರಾದ ಎಚ್ಆರ್ ಬಸವರಾಜಪ್ಪ ಕೂಡ ಎಎಪಿಗೆ ಸೇರ್ಪಡೆಗೊಂಡರು. ನಂತರ ತಾವು ಮಾಡಿದ ಭಾಷಣದಲ್ಲಿ ನಾಲ್ಕು ದಶಕಗಳ ಸುದೀರ್ಘ ಚಳವಳಿಯನ್ನು ನೆನಪಿಸಿಕೊಂಡರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಕಟವರ್ತಿ, ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಕೂಡ ಆಪ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಕೋಡಿಹಳ್ಳಿ ಚಂದ್ರಶೇಖರ್ ಅವರು ಪಕ್ಷದ ಟೋಪಿ ಧರಿಸಿ, ಪಕ್ಷದ ಚಿಹ್ನೆಯಾದ ಪೊರಕೆ ಹಿಡಿದು, ಶ್ರಮವಹಿಸಿ ಎಎಪಿ ಶಾಸಕರನ್ನು ವಿಧಾನಸೌಧಕ್ಕೆ ಕಳುಹಿಸುವಂತೆ ರೈತ ಸಂಘದ ಸದಸ್ಯರಿಗೆ ಕರೆ ನೀಡಿದರು. “ಕಾಂಗ್ರೆಸ್ ಬಿಜೆಪಿಗೆ ಪರ್ಯಾಯವಾಗಿರಲಿ ಅಥವಾ ಕಾಂಗ್ರೆಸ್ಗೆ ಜೆಡಿಎಸ್ ಆಗಿರಲಿ, ನಾವು ಆಪ್ ನ್ನು ರಾಜ್ಯದಲ್ಲಿ ಆಡಳಿತ ಪಕ್ಷಕ್ಕೆ ಪರ್ಯಾಯವಾಗಿ ಕಂಡುಕೊಂಡಿದ್ದೇವೆ. ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ದೆಹಲಿಯ ಆಮ್ ಆದ್ಮಿ ಪಕ್ಷದ ಕಾರ್ಯವೈಖರಿಯನ್ನು ಕಂಡು ಇಂದು ಸೇರ್ಪಡೆಯಾಗುತ್ತಿದ್ದೇವೆ. ನಂತರ ಕೋಡಿಹಳ್ಳಿ ಚಂದ್ರಶೇಖರ್ ಭಾಷಣದಲ್ಲಿ ದೆಹಲಿ ಸಿಎಂ ಜಯಪ್ರಕಾಶ್ ನಾರಾಯಣ್ ಅವರನ್ನು ಹೋಲಿಸಿದರು. ಎಎಪಿ ಪಕ್ಷದ ರಾಜಕೀಯ ಮುಖವಾಣಿಯಾಗಿದ್ದು, ರೈತರ ಸಮಸ್ಯೆಗಳ ವಿರುದ್ಧ ಹೋರಾಡಲು ರೈತ ಸಂಘ ಸ್ವತಂತ್ರ ಸಂಘಟನೆಯಾಗಿ ತನ್ನ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳಲಿದೆ ಎಂದು ಘೋಷಿಸಿದರು.
ಇದನ್ನೂ ಓದಿ: ನಿಮಗೆ ಗೂಂಡಾ, ಲಫಂಗರ ಸರ್ಕಾರ ಬೇಕೆ ಅಥವಾ ಪ್ರಾಮಾಣಿಕ ಆಡಳಿತ ಬೇಕೆ?: ಕನ್ನಡಿಗರಿಗೆ ಕೇಜ್ರಿವಾಲ್ ಪ್ರಶ್ನೆ
ಆದಾಗ್ಯೂ, ರೈತ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಮುಂದಿನ ವರ್ಷ ಚುನಾವಣೆಯಲ್ಲಿ ಆಪ್ ಗುರುತಿನಡಿ ಸ್ಪರ್ಧಿಸುವ ಸಾಧ್ಯತೆಯಿದೆ, ಇಂದು ಕರ್ನಾಟಕದಲ್ಲಿರುವ ಮೂರು ಪ್ರಮುಖ ರಾಜಕೀಯ ಪಕ್ಷಗಳು ಒಂದೇ ಆಗಿದ್ದು, ಜನಪರ, ರೈತರ ಪರ ಕೆಲಸಗಳನ್ನು ಮಾಡುತ್ತಿಲ್ಲ, ಅಂತಹುದರಲ್ಲಿ ರೈತರ ಪರವಾದ ನೀತಿಗಳನ್ನು ರೂಪಿಸಲು ಮತ್ತು ಆರ್ಥಿಕ ನೀತಿಗಳನ್ನು ರೂಪಿಸಲು ನಾವು ಶಾಸಕರಾಗಿ ಬರುತ್ತೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು ತಂದೆ ಸಮಾನ ಎಂದು ಕರೆದ ಅವರು ರೈತ ಸಂಘದ ಹೊಸ ಧ್ಯೇಯೋದ್ದೇಶಕ್ಕಾಗಿ ಅವರ ಆಶೀರ್ವಾದವನ್ನು ಕೋರಿದರು. ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪಿಎಸ್ಐ ನೇಮಕಾತಿ ಹಗರಣದಲ್ಲಿ ಶೇ.40 ಕಮಿಷನ್, ಅವ್ಯವಹಾರ ಮತ್ತು ಲಂಚದ ವಿಷಯಗಳು ಬಹಿರಂಗವಾದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸ್ಥಾನದಲ್ಲಿ ಮುಂದುವರಿಯಲು ಅರ್ಹರಲ್ಲ. ಅವರ 17 ಕ್ಯಾಬಿನೆಟ್ ಸಹೋದ್ಯೋಗಿಗಳು ವೀಡಿಯೊ ಕ್ಲಿಪ್ಪಿಂಗ್ಗಳನ್ನು ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ಏಕೆ ತಡೆ ತಂದಿದ್ದಾರೆ ಎಂದು ಪ್ರಶ್ನಿಸಿದರು.
ಬಾರುಕೋಲು ಪುಸ್ತಕ ಬಿಡುಗಡೆ: ರೈತ ಸಮಾವೇಶದಲ್ಲಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಕುರಿತಾದ ಲೇಖಕ ನಟರಾಜ್ ಹುಳಿಯಾರ್ ಅವರು ಅರವಿಂದ್ ಕೇಜ್ರಿವಾಲ್ ಅವರು ಸಂಪಾದಿಸಿರುವ ‘ಬಾರುಕೋಲು’ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ನಂಜುಂಡಸ್ವಾಮಿ ಅವರ ಪುತ್ರಿ ಚುಕ್ಕಿ ಕಾರ್ಯಕ್ರಮ ಆಯೋಜಿಸುವುದರೊಂದಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮ್ಮ ನಿವಾಸದಲ್ಲಿ ಪುಸ್ತಕ ಬಿಡುಗಡೆ ಮಾಡಿದರು.