ರಾಜ್ಯದಲ್ಲಿ ಧರ್ಮ ಸಂಘರ್ಷ ಮಧ್ಯೆ ಇಫ್ತಾರ್ ಕೂಟ: ಸೂಕ್ತ ಸಂದೇಶ ನೀಡಲು ರಾಜಕೀಯ ಪಕ್ಷಗಳ ಯತ್ನ
ಮುಸಲ್ಮಾನರ ಪವಿತ್ರ ಹಬ್ಬ ರಂಜಾನ್ ಗೆ ಬಾಕಿ ಇರುವುದು ಇನ್ನು ಕೇವಲ ಒಂದು ವಾರ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಇಫ್ತಾರ್ ಕೂಟವನ್ನು ಆಯೋಜಿಸಿದ್ದಾರೆ.
Published: 24th April 2022 09:07 AM | Last Updated: 25th April 2022 01:28 PM | A+A A-

ರಂಜಾನ್ ಮಧ್ಯೆ ಉಪವಾಸವನ್ನು ಮುರಿದು ಆಹಾರ ಸೇವಿಸಲು ಸಿದ್ದರಾದ ಮುಸ್ಲಿಂ ಬಾಂಧವರು
ಬೆಂಗಳೂರು: ಮುಸಲ್ಮಾನರ ಪವಿತ್ರ ಹಬ್ಬ ರಂಜಾನ್ ಗೆ ಬಾಕಿ ಇರುವುದು ಇನ್ನು ಕೇವಲ ಒಂದು ವಾರ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಇಫ್ತಾರ್ ಕೂಟವನ್ನು ಆಯೋಜಿಸಿದ್ದಾರೆ.
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ತಮ್ಮ ಬೆಂಬಲಿಗರಿಗೆ ಇಫ್ತಾರ್ ಕೂಟ ಏರ್ಪಡಿಸಿದ್ದರೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬರುವ ಬುಧವಾರ ಇಫ್ತಾರ್ ಕೂಟ ಏರ್ಪಡಿಸಿದ್ದಾರೆ. ಜೆಡಿಎಸ್ ಮುಖಂಡರಾದ ಎಚ್ಡಿ ದೇವೇಗೌಡ, ಎಚ್ಡಿ ಕುಮಾರಸ್ವಾಮಿ ಮತ್ತು ಇತರರು ಕೂಡ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಪಕ್ಷದ ಎಂಎಲ್ಸಿ ಬಿಎಂ ಫಾರೂಕ್ ಅವರೊಂದಿಗೆ ಇಫ್ತಾರ್ ಕೂಟಗಳನ್ನು ನಡೆಸಿದ್ದರು.
ಇಫ್ತಾರ್ ಕೂಟದ ಪ್ರಾಮುಖ್ಯತೆಯನ್ನು, ಅದನ್ನು ಆಚರಿಸುವ ನಿಯಮವನ್ನು ಹೆಚ್ಚಿನ ಪಕ್ಷಗಳು ಇತ್ತೀಚಿನ ವರ್ಷಗಳಲ್ಲಿ ರೂಢಿಸಿಕೊಂಡಿವೆ. ಮತದಾರರಿಗೆ ಜಾತ್ಯತೀತ ಭರವಸೆಗಳನ್ನು ನೀಡಲು, ರಾಜಕೀಯ ಸಂದೇಶ ರವಾನೆಗೆ ಇದೆ ಸೂಕ್ತವಾಗಿದೆ. ವಿಶೇಷವಾಗಿ ಇತ್ತೀಚಿನ ತಿಂಗಳುಗಳಲ್ಲಿ ಕೋಮು ಸಾಮರಸ್ಯ ಕರ್ನಾಟಕದಲ್ಲಿ ತೀವ್ರ ಹದಗೆಟ್ಟಿರುವಾಗ ಇಫ್ತಾರ್ ಕೂಟ ಆಯೋಜನೆ ವಿಶೇಷ ಮಹತ್ವ ಪಡೆದಿದೆ.
ನಿರೀಕ್ಷೆಯಂತೆಯೇ ಕಾಂಗ್ರೆಸ್ ಪಕ್ಷದ ಇಫ್ತಾರ್ ಕೂಟಕ್ಕೆ ಬಲಪಂಥೀಯ ಸಂಘಟನೆಗಳು, ಹಿಂದೂಪರ ಸಂಘಟನೆಗಳು, ಬಿಜೆಪಿ ನಾಯಕರಿಂದ ಟೀಕೆ ವ್ಯಕ್ತವಾಗಿದೆ. ಇಫ್ಟಾರ್ ಪೋಸ್ಟರ್ ನಲ್ಲಿ ಸಿದ್ದರಾಮಯ್ಯನವರು ಹಾಕಿಕೊಂಡ ಟೊಪ್ಪಿಗೆ ಸೋಷಿಯಲ್ ಮೀಡಿಯಾದಲ್ಲಿ ಟೀಕಿಸುತ್ತಿರುವ ಹಲವರು ಟೋಪಿ ಹೇಗಿದೆ ನೋಡಿ, ಎಂದು ವ್ಯಂಗ್ಯವಾಡಿದ್ದಾರೆ. ಅದಕ್ಕೆ ಸಿದ್ದರಾಮಯ್ಯನವರು, ನಾವೆಲ್ಲರೂ ಒಂದಾದಾಗ ದೇಶ ಬಲವಾಗುತ್ತದೆ. ಇಲ್ಲಿ ಜಾತಿ, ಸಮುದಾಯದ ಪ್ರಶ್ನೆ ಬರುವುದಿಲ್ಲ. ಇಫ್ತಾರ್ ಪಾರ್ಟಿ ನಡೆಸಿದರೆ ಅದರ ಬಗ್ಗೆ ಯಾರು ಕೂಡ ತಪ್ಪು ಕಂಡುಹಿಡಿಯಬಾರದು. ಪ್ರತಿಯೊಬ್ಬರೂ ಸೋದರ ಭಾವನೆಯಿಂದ ಭಾಗವಹಿಸಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಟ್ಟ ಶಿಷ್ಯ ಜಮೀರನ ಜಹಾಗೀರ್ ಚಾಮರಾಜಪೇಟೆಯೊ? ಈಗಿನ ಕ್ಷೇತ್ರ ಬದಾಮಿಯೋ? ಯಾವುದು ಹಿತವು ನಿಮಗೆ ವಲಸೆರಾಮಯ್ಯ?
ಹಿಜಾಬ್ ಮತ್ತು ಹಲಾಲ್ ಮಾಂಸದ ಗಲಾಟೆ, ದೇವಾಲಯದ ಆವರಣದಲ್ಲಿ ಮುಸ್ಲಿಂ ವ್ಯಾಪಾರಿಗಳ ಉಪಸ್ಥಿತಿ ಮತ್ತು ವ್ಯಾಪಾರಗಳ ಮೇಲಿನ ದಾಳಿಯೊಂದಿಗೆ ಬಲಪಂಥೀಯ ಪಂಗಡದ ನಿರೂಪಣೆಯನ್ನು ತೀವ್ರ ಪಿಚ್ಗೆ ಏರಿಸಿದರೆ, ಬಿಜೆಪಿಯೇ ಒಂದು ಕಾಲದಲ್ಲಿ ಇಫ್ತಾರ್ ಕೂಟಗಳನ್ನು ಆಯೋಜಿಸುತ್ತಿತ್ತು ಎಂದು ರಾಜಕೀಯ ವಿಶ್ಲೇಷಕ ಸಿದ್ದರಾಜು ನೆನಪಿಸಿಕೊಳ್ಳುತ್ತಾರೆ. . ಆಗ ಸಿಎಂ ಬಿಎಸ್ ಯಡಿಯೂರಪ್ಪ ಇಫ್ತಾರ್ ಕೂಟದಲ್ಲಿ ಭಾಗವಹಿಸುತ್ತಿದ್ದರು ಎಂದು ಒಳಗಿನವರು ನೆನಪಿಸಿಕೊಳ್ಳುತ್ತಾರೆ.
ಹಿಜಾಬ್ ಮತ್ತು ಹಲಾಲ್ ಮಾಂಸದ ಗಲಾಟೆ, ದೇವಾಲಯದ ಆವರಣದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಮೊದಲಾದ ಬಲಪಂಥೀಯ ಗುಂಪುಗಳ ವರ್ತನೆ ಇತ್ತೀಚೆಗೆ ರಾಜ್ಯದಲ್ಲಿ ತೀವ್ರ ಗದ್ದಲ, ಗಲಾಟೆ, ಹಿಂಸಾಚಾರಕ್ಕೆ ಕಾರಣವಾಗಿದೆ. ಒಂದು ಕಾಲದಲ್ಲಿ ಬಿಜೆಪಿಯೇ ಇಫ್ತಾರ್ ಕೂಟಗಳನ್ನು ಆಯೋಜಿಸುತ್ತಿತ್ತು ಎಂದು ರಾಜಕೀಯ ವಿಶ್ಲೇಷಕ ಸಿದ್ದರಾಜು ನೆನಪಿಸಿಕೊಳ್ಳುತ್ತಾರೆ. . ಆಗ ಸಿಎಂ ಬಿಎಸ್ ಯಡಿಯೂರಪ್ಪ ಇಫ್ತಾರ್ ಕೂಟದಲ್ಲಿ ಭಾಗವಹಿಸುತ್ತಿದ್ದರು ಎಂದು ಹಲವರು ನೆನಪಿಸಿಕೊಳ್ಳುತ್ತಾರೆ.
ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಹಿರಿಯ ಮುಖಂಡರನ್ನು ಸಂಪರ್ಕಿಸಿದಾಗ, "ನಾವೂ ಬಿಜೆಪಿಯಿಂದ ಸಭೆ ನಡೆಸುತ್ತೇವೆ, ಆದರೆ ಉಪವಾಸ ಮುಗಿದ ನಂತರ ಈದ್ ದಿನ ಅಥವಾ ಮರುದಿನ ಸಭೆ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು. ಬಿಜೆಪಿ ಕರ್ನಾಟಕ ಘಟಕವು ಕಳೆದ ಕೆಲವು ವರ್ಷಗಳಲ್ಲಿ ವಾಡಿಕೆಯಂತೆ ಇಫ್ತಾರ್ ಕೂಟಗಳನ್ನು ನಡೆಸುತ್ತಿದೆ ಎಂದು ಹೇಳಿದರು. ಆರ್ಎಸ್ಎಸ್ ಕೂಡ ಮುಸ್ಲಿಂ ರಾಷ್ಟ್ರೀಯ ಮಂಚ್ ಮೂಲಕ ರಾಷ್ಟ್ರದಾದ್ಯಂತ ಇಫ್ತಾರ್ಗಳನ್ನು ಆಯೋಜಿಸಿ, ಮುಸ್ಲಿಮರನ್ನು ಹಿಂದೂಗಳಿಗೆ ಹತ್ತಿರವಾಗುವಂತೆ ಮಾಡಿದೆ ಎಂದರು.