ಪಿಎಸ್ಐ ನೇಮಕಾತಿ ಅಕ್ರಮ: ಸರ್ಕಾರ ಬೆಟ್ಟ ಅಗೆದು ಇಲಿ ಹಿಡಿಯುತ್ತಿದೆ ಎಂದ ದಿನೇಶ್ ಗುಂಡೂರಾವ್
ಪಿಎಸ್ಐ ಅಕ್ರಮ ನೇಮಕಾತಿ ಹಗರಣದಲ್ಲಿ ರಾಜ್ಯ ಸರ್ಕಾರ ಬೆಟ್ಟ ಅಗೆದು ಇಲಿ ಹಿಡಿಯುತ್ತಿದೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರು ಸೋಮವಾರ ವಾಗ್ದಾಳಿ ನಡೆಸಿದ್ದಾರೆ.
Published: 26th April 2022 12:50 AM | Last Updated: 26th April 2022 12:50 AM | A+A A-

ದಿನೇಶ್ ಗುಂಡೂರಾವ್
ಬೆಂಗಳೂರು: ಪಿಎಸ್ಐ ಅಕ್ರಮ ನೇಮಕಾತಿ ಹಗರಣದಲ್ಲಿ ರಾಜ್ಯ ಸರ್ಕಾರ ಬೆಟ್ಟ ಅಗೆದು ಇಲಿ ಹಿಡಿಯುತ್ತಿದೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರು ಸೋಮವಾರ ವಾಗ್ದಾಳಿ ನಡೆಸಿದ್ದಾರೆ.
ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಇನ್ನೂ ಪತ್ತೆಯೇ ಆಗಿಲ್ಲ ಎಂದರೆ ಏನರ್ಥ? ಬಿಜೆಪಿ ನಾಯಕರ ಕೃಪಾಕಟಾಕ್ಷವಿಲ್ಲದೆ ದಿವ್ಯಾ ನಾಪತ್ತೆಯಾಗಲು ಸಾಧ್ಯವೇ? ದಿವ್ಯಾ ಬಂಧನವಾದರೆ ಅಕ್ರಮದಲ್ಲಿ ಭಾಗಿಯಾದ ಬಿಜೆಪಿ ನಾಯಕರ ಬಂಡವಾಳ ಬಯಲಾಗುವ ಭಯ ಸರ್ಕಾರಕ್ಕಿದೆಯೆ? ಎಂದು ದಿನೇಶ್ ಗುಂಡೂರಾವ್ ಅವರು ಸರಣಿ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.
ಇದನ್ನು ಓದಿ: ಪಿಎಸ್ಐ ನೇಮಕಾತಿ ಅಕ್ರಮ: ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಗೆ ಸಿಐಡಿ ನೋಟಿಸ್
ಭ್ರಷ್ಟಾಚಾರವನ್ನು ಮನೆ ದೇವರು ಮಾಡಿಕೊಂಡಿರುವ ರಾಜ್ಯ ಬಿಜೆಪಿ ಸರ್ಕಾರ ಲಂಚ ಮುಟ್ಟದೆ ಇತ್ತ ಇದ್ದ ಕಡ್ಡಿಯನ್ನು ಅತ್ತ ಅಲುಗಾಡಿಸುವುದಿಲ್ಲ. ಪಿಎಸ್ಐ ಅಕ್ರಮ ನೇಮಕಾತಿಯಲ್ಲಿ ರಾಜ್ಯ ಬಿಜೆಪಿಯವರೇ ಕೋಟಿ ಕೋಟಿ ಲಂಚ ವಸೂಲಿ ಮಾಡಿದ್ದಾರೆ. ಅತ್ತ ಇಂಜೀನಿಯರ್ಗಳ ನೇಮಕಾತಿಯಲ್ಲೂ ಅಕ್ರಮದ ಆರೋಪವಿದೆ. ಬೊಮ್ಮಾಯಿಯವರೆ ಲಂಚ ಬಾಚುವುದೇ ನಿಮ್ಮ ಸರ್ಕಾರದ ಧ್ಯೇಯವೇ? ಎಂದು ದಿನೇಶ್ ಗುಂಡೂರಾವ್ ಅವರು ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
‘ನಾನು ತಿನ್ನಲ್ಲ.,ಬೇರೆಯವರು ತಿನ್ನಲು ಬಿಡುವುದಿಲ್ಲ’ ಎಂದು ಮೋದಿಯವರು ಬೊಗಳೆ ಬಿಟ್ಟರೆ ಸಾಲದು. PSI ಅಕ್ರಮ ನೇಮಕಾತಿಯಲ್ಲಿ ರಾಜ್ಯ ಬಿಜೆಪಿ ನಾಯಕರು ತಿಂದ ಲಂಚವೆಷ್ಟು ಎಂದು ಮೋದಿಯವರಿಗೆ ಗೊತ್ತಿದೆಯೆ? ಅಥವಾ ಗೊತ್ತಿದ್ದರೂ ಜಾಣ ಮೌನವೆ? ಪ್ರಾಮಾಣಿಕತೆ ಕೇವಲ ಮಾತಿನಲ್ಲಿದ್ದರೆ ಪ್ರಯೋಜನವೇನು? ಅದು ಆಚರಣೆಯಲ್ಲೂ ಇರಬೇಕಲ್ಲವೆ ಮೋದಿಯವರೆ? ಎಂದು ಕೇಳಿದ್ದಾರೆ.
1#PSI ಅಕ್ರಮ ನೇಮಕಾತಿ ಹಗರಣದಲ್ಲಿ ರಾಜ್ಯ ಸರ್ಕಾರ ಬೆಟ್ಟ ಅಗೆದು ಇಲಿ ಹಿಡಿಯುತ್ತಿದೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 25, 2022
ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಇನ್ನೂ ಪತ್ತೆಯೇ ಆಗಿಲ್ಲ ಅಂದರೆ ಏನರ್ಥ?@BJP4Karnataka ನಾಯಕರ ಕೃಪಾಕಟಾಕ್ಷವಿಲ್ಲದೆ ದಿವ್ಯಾ ನಾಪತ್ತೆಯಾಗಲು ಸಾಧ್ಯವೇ?
ದಿವ್ಯಾ ಬಂಧನವಾದರೆ BJP ನಾಯಕರ ಬಂಡವಾಳ ಬಯಲಾಗುವ ಭಯ ಸರ್ಕಾರಕ್ಕಿದೆಯೆ?