ಬ್ರಾಹ್ಮಣರಾದರೂ 'ನೆಹರೂ' ಯಾವ ಪರೀಕ್ಷೆ ಪಾಸ್ ಮಾಡಿರಲಿಲ್ಲ, ದಲಿತರಾದರೂ ಅಂಬೇಡ್ಕರ್ ಬೌದ್ಧಿಕವಾಗಿ ಉನ್ನತ ಮಟ್ಟದಲ್ಲಿದ್ದರು!

ಹಿಂದೂ ಧರ್ಮ ಅಲ್ಲ ಅದೊಂದು ಜೀವನ ಶೈಲಿ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರ ಡಿಎನ್‌ಎ ಒಂದೇ. ಕಾರಣ ನಾವು ಮೊದಲು ಭಾರತೀಯರು ಎಂಬ ಭಾವನೆ ನಮ್ಮಲಿದೆ ಎಂದು ಕೇಂದ್ರ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಸುಬ್ರಮಣಿಯನ್ ಸ್ವಾಮಿ
ಸುಬ್ರಮಣಿಯನ್ ಸ್ವಾಮಿ

ಮೈಸೂರು: ಹಿಂದೂ ಧರ್ಮ ಅಲ್ಲ ಅದೊಂದು ಜೀವನ ಶೈಲಿ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರ ಡಿಎನ್‌ಎ ಒಂದೇ. ಕಾರಣ ನಾವು ಮೊದಲು ಭಾರತೀಯರು ಎಂಬ ಭಾವನೆ ನಮ್ಮಲಿದೆ ಎಂದು ಕೇಂದ್ರ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಸೋಮವಾರ ನಡೆದ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ 60ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಸರ್ದಾರ್ ಪಣಿಕ್ಕರ್ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡಿದ ಅವರು,ಮನುಷ್ಯ ಬುದ್ಧಿಜೀವಿ, ಉದಾರಿ, ಧೈರ್ಯವಂತನಾಗಿದ್ದರೆ ಆತ ಬ್ರಾಹ್ಮಣ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ ಎಂದರು.

ಉದಾಹರಣೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರು ದಲಿತರಾದರೂ ಬೌದ್ಧಿಕವಾಗಿ ಉನ್ನತ ಮಟ್ಟದಲ್ಲಿದ್ದರು. ಸಂವಿಧಾನ ರಚಿಸಿದರು, ಹತ್ತಾರು ಪದವಿ ಪಡೆದುಕೊಂಡಿದ್ದರು. ಆದರೆ ಹುಟ್ಟಿನಿಂದ ಬ್ರಾಹ್ಮಣರಾದ ಜವಹಾರಲಾಲ್ ನೆಹರು ಯಾವ ಪರೀಕ್ಷೆಯಲ್ಲಿಯೂ ತೇರ್ಗಡೆ ಹೊಂದಲಿಲ್ಲ. ರಾಜಕೀಯಕ್ಕೆ ಅದು ಬೇಕಾಗಿಯೂ ಇಲ್ಲ ಎಂದು ವ್ಯಂಗ್ಯವಾಡಿದರು

‘ವರ್ಣ, ಜಾತಿಗಳು ವೃತ್ತಿ ಆಧರಿಸಿ ವಿಂಗಡಿಸಿದ್ದಾಗಿವೆ. ಯಾರೂ ಬೇಕಾದರೂ ಬ್ರಾಹ್ಮಣರಾಗುವ– ಕ್ಷತ್ರೀಯರಾಗುವ ಅವಕಾಶವಿದೆ. ಕ್ಷತ್ರೀಯ ವಿಶ್ವಾಮಿತ್ರ ಮಹರ್ಷಿಯಾಗಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ನಗರದ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ನಡೆದ 'ಸಂಸ್ಥಾಪನಾ ದಿನಾಚರಣೆ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮೈಸೂರು ವಿಶ್ವವಿದ್ಯಾಲಯ ದೇಶದಲ್ಲಿ ಮೊದಲ ಬಾರಿಗೆ ಡಿಎನ್‌ಎ ಪರೀಕ್ಷೆ ನಡೆಸಿತು. ಈ ಪರೀಕ್ಷೆಯಲ್ಲಿ ಭಾರತೀಯರೆಲ್ಲರ ಡಿಎನ್‌ಎ ಒಂದೇ ಆಗಿತ್ತು. ಆದರೆ, ಮುಸ್ಲಿಮರು ಅದನ್ನು ಬದಲಾಯಿಸಿಕೊಂಡರು. ಒಮ್ಮೆ ನಾನು ಹೈದರಾಬಾದ್‌ಗೆ ಹೋದಾಗ ಓವೈಸಿ ಅವರಿಗೆ 'ನಂದು ನಿಂದು ಒಂದೇ ಡಿಎನ್‌ಎ ಬೇಕಾದರೆ ಇಲ್ಲಿನ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಿಸೋಣ ಬಾ'ಎಂದಿದ್ದೆ. ಆದರೆ ಓವೈಸಿ ಪರೀಕ್ಷೆಗೆ ಬಾರದೆ ಆ ಲ್ಯಾಬ್ ಹೈದರಾಬಾದ್‌ನಲ್ಲಿ ಎಲ್ಲಿದೆ ಎಂದು ಕೇಳಿದ್ದರು ಎಂದು ಸುಬ್ರಮಣ್ಯನ್ ವ್ಯಂಗ್ಯವಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com