ರಾಹುಲ್ ಗಾಂಧಿ ಮುರುಘಾ ಮಠಕ್ಕೆ ಭೇಟಿ: 2023ರ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತ ಸಮುದಾಯ ಮತ ಸೆಳೆಯುವ ತಂತ್ರವೇ?
ಕರ್ನಾಟಕ ರಾಜಕೀಯ ವಿಚಾರ ಬಂದಾಗ ಜಾತಿ ಲೆಕ್ಕಾಚಾರದಿಂದ ಯಾವ ಪಕ್ಷಗಳೂ ಹಿಂದೆ ಬಿದ್ದಿಲ್ಲ. ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದ ಮತಗಳು ಪಕ್ಷಗಳು, ಅಭ್ಯರ್ಥಿಗಳ ಗೆಲುವಿನಲ್ಲಿ ನಿರ್ಣಾಯಕ.
Published: 04th August 2022 07:55 AM | Last Updated: 04th August 2022 03:05 PM | A+A A-

ಮುರುಘಾ ಮಠದ ಮಠಾಧೀಶ ಶಿವಮೂರ್ತಿ ಮುರುಘಾ ಶರಣರು ರಾಹುಲ್ ಗಾಂಧಿ ಅವರಿಗೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಹೊರತಂದ ಪುಸ್ತಕ 'ದಿ ಸೋಶಿಯಲ್ ರಿಫಾರ್ಮರ್' ನ್ನು ನೀಡಿದರು
ಚಿತ್ರದುರ್ಗ: ಕರ್ನಾಟಕ ರಾಜಕೀಯ ವಿಚಾರ ಬಂದಾಗ ಜಾತಿ ಲೆಕ್ಕಾಚಾರದಿಂದ ಯಾವ ಪಕ್ಷಗಳೂ ಹಿಂದೆ ಬಿದ್ದಿಲ್ಲ. ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದ ಮತಗಳು ಪಕ್ಷಗಳು, ಅಭ್ಯರ್ಥಿಗಳ ಗೆಲುವಿನಲ್ಲಿ ನಿರ್ಣಾಯಕ.
ಹಲವು ವರ್ಷಗಳಿಂದ ಬಿಜೆಪಿಯನ್ನು ಬೆಂಬಲಿಸಿಗೊಂಡು ಬಂದಿರುವ ಲಿಂಗಾಯತ ಸಮುದಾಯದ ವಿಶ್ವಾಸವನ್ನು ಗಳಿಸುವ ಉದ್ದೇಶದಿಂದ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ನಿನ್ನೆ ಬುಧವಾರ ಇಲ್ಲಿನ ಮುರುಘಾ ಮಠಕ್ಕೆ ಭೇಟಿ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ನಿನ್ನೆ ಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಠಾಧೀಶ ಶಿವಮೂರ್ತಿ ಮುರುಘಾ ಶರಣರು ರಾಹುಲ್ ಗಾಂಧಿ ಅವರಿಗೆ ‘ಲಿಂಗ ದೀಕ್ಷೆ’ಯನ್ನು ನೀಡಿದರು. ದಾವಣಗೆರೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮದಿನಾಚರಣೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ರಾಹುಲ್ ಗಾಂಧಿಯವರು ಮಠಕ್ಕೆ ಆಗಮಿಸಿ ಸುಮಾರು 45 ನಿಮಿಷ ಕಾಲ ಕಳೆದರು.
2023ರ ವಿಧಾನಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಈ ಭೇಟಿ ಮಹತ್ವ ಪಡೆದಿದ್ದು, ಆಗಿನ ಪ್ರಧಾನಿ ಹಾಗೂ ರಾಹುಲ್ ಅವರ ತಂದೆ ರಾಜೀವ್ ಗಾಂಧಿ ಅವರು ಲಿಂಗಾಯತ ನಾಯಕ ವೀರೇಂದ್ರ ಪಾಟೀಲ್ ಅವರನ್ನು 1990ರಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಅಮಾನತುಗೊಳಿಸಿದ ನಂತರ ಕಾಂಗ್ರೆಸ್‌ನಿಂದ ದೂರವಾಗಿದ್ದ ಲಿಂಗಾಯತ ಸಮುದಾಯದ ಬೆಂಬಲವನ್ನು ಗಳಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.
ಬಿಜೆಪಿ ಕೂಡ ಲಿಂಗಾಯತ ಪ್ರಬಲ ವ್ಯಕ್ತಿ ಬಿಎಸ್ ಯಡಿಯೂರಪ್ಪ ಅವರನ್ನು ತೆಗೆದು ಮತ್ತೊಬ್ಬ ಲಿಂಗಾಯತ ಬಸವರಾಜ ಬೊಮ್ಮಾಯಿ ಅವರನ್ನು ಕಣಕ್ಕಿಳಿಸುವ ಮೂಲಕ ಸಮುದಾಯವನ್ನು ವಿರೋಧಿಸುತ್ತಿರುವಂತೆ ತೋರುತ್ತಿರುವಾಗ, ವಿರೋಧ ಪಕ್ಷವು ಸಂಖ್ಯಾತ್ಮಕವಾಗಿ ಮತ್ತು ರಾಜಕೀಯವಾಗಿ ಪ್ರಬಲವಾದ ಲಿಂಗಾಯತರ ಮನಸ್ಸನ್ನು ಗೆಲ್ಲಲು ಪ್ರಯತ್ನಿಸುತ್ತಿದೆ.
ಇದನ್ನೂ ಓದಿ: ಕೇಂದ್ರ, ರಾಜ್ಯದಲ್ಲಿ ಬಿಜೆಪಿಯಿಂದ ದ್ವೇಷದ ರಾಜಕಾರಣ: ಸಂವಿಧಾನ ಬದಲಿಸಲು ಜನ ಬಿಡಲ್ಲ- ಸಿದ್ದು ಗುಡುಗು
ದೀಕ್ಷೆ ನೀಡಿದ ನಂತರ ಶಿವಮೂರ್ತಿ ಮುರುಘಾ ಶರಣರು ರಾಹುಲ್‌ಗೆ ನೀವೀಗ ಬಸವ ಭಕ್ತರಾಗಿದ್ದೀರಿ ಎಂದು ಹೇಳಿದರು. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಹೊರತಂದಿರುವ ಶರಣರ ಕುರಿತ ‘ದಿ ಸೋಶಿಯಲ್ ರಿಫಾರ್ಮರ್’ ಎಂಬ ಪುಸ್ತಕವನ್ನು ರಾಹುಲ್‌ಗೆ ಉಡುಗೊರೆಯಾಗಿ ನೀಡಲಾಯಿತು.
ತಮ್ಮ ಅಜ್ಜಿ, ತಂದೆ ಪ್ರಧಾನಿಯಾಗಿರುವುದರಿಂದ ಲಿಂಗ ದೀಕ್ಷೆ ನೀಡಿರುವುದರಿಂದ ಮುಂದೊಂದು ದಿನ ತಾವೂ ಪ್ರಧಾನಿಯಾಗುತ್ತೀರಿ ಎಂದು ಹುಬ್ಬಳ್ಳಿ ಹೊಸಮಠದ ಚಂದ್ರಶೇಖರ ಸ್ವಾಮಿ ರಾಹುಲ್‌ಗೆ ಹೇಳಿದರು. ಆಗ ಮುರುಘಾ ಶ್ರೀಗಳು ಅಡ್ಡಿಪಡಿಸಿ, ಇಂತಹ ಮಾತುಗಳನ್ನು ಹೇಳಲು ಮಠ ವೇದಿಕೆಯಲ್ಲ ಎಂದರು.
ಮಠವು ಎಲ್ಲರನ್ನು ಸಮಾನವಾಗಿ ಪರಿಗಣಿಸುತ್ತದೆ, ಪಕ್ಷದ ರೇಖೆಗಳನ್ನು ಮೀರಿದೆ. ಅದನ್ನು ಜನರೇ ನಿರ್ಧರಿಸುತ್ತಾರೆ ಎಂದರು. ರಾಹುಲ್ ಜೊತೆಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಯಾವುದೇ ಮಠಕ್ಕೆ ಧಕ್ಕೆ ತಂದಿಲ್ಲ, ಅದು ಪಕ್ಷದ ಸಿದ್ಧಾಂತ ಎಂದರು.
ತೀವ್ರ ಸಂಚಾರ ದಟ್ಟಣೆ: ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬದ ಅಮೃತ ಮಹೋತ್ಸವಕ್ಕೆ ಲಕ್ಷಾಂತರ ಬೆಂಬಲಿಗರು ಆಗಮಿಸಿದ್ದರಿಂದ ದಾವಣಗೆರೆ-ಹರಿಹರ ಎನ್‌ಎಚ್-48ರ 20 ಕಿ.ಮೀ ಮಾರ್ಗದಲ್ಲಿ ಹಲವು ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಇದನ್ನೂ ಓದಿ: 2023ರ ವಿಧಾನಸಭೆ ಚುನಾವಣೆಗೆ 'ಎಲೆಕ್ಷನ್ ಹಿಂದೂ' ರಾಹುಲ್ ಗಾಂಧಿ ತಯಾರಿ: ಬಿಜೆಪಿ ಟೀಕೆ
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನದ ಮಾರ್ಗವನ್ನು ಪೊಲೀಸರು ತೆರವುಗೊಳಿಸುವವರೆಗೂ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡರು.ಕಾರ್ಯಕ್ರಮದ ಸ್ಥಳ ಕಿಕ್ಕಿರಿದು ತುಂಬಿದ್ದಲ್ಲದೆ, ಪಕ್ಷದ ಹಿರಿಯ ಮುಖಂಡರು ಸೇರಿದಂತೆ ಸಮಾನ ಸಂಖ್ಯೆಯ ಬೆಂಬಲಿಗರು ಕಂಡುಬಂದರು.
ಸಾರ್ವಜನಿಕರು ಸಹ ಸಂಚಾರ ಸ್ಥಗಿತಗೊಂಡಿದ್ದರಿಂದ ಹರಸಾಹಸ ಪಡಬೇಕಾಯಿತು. ರಸ್ತೆಯಲ್ಲಿ ಸಂಚರಿಸುವ ಬಸ್‌ಗಳು ಗಂಟೆಗಟ್ಟಲೆ ಕಾಯಬೇಕಾಯಿತು. ಮತ್ತೊಂದು ಲೇನ್‌ನಿಂದ ಹೊರಬರಲು ಅನುಮತಿಸುವ ಮೊದಲು ಕೆಲವು ತುರ್ತು ಸೇವಾ ವಾಹನಗಳಿಗೂ ಸಹ ಹೊಡೆತ ಬಿದ್ದವು. ಕೆಲವು ಪಕ್ಷದ ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು, ಉದ್ದೇಶಪೂರ್ವಕವಾಗಿ ಟ್ರಾಫಿಕ್ ಜಾಮ್ ಉಂಟುಮಾಡಿದ್ದಾರೆ ಎಂದು ಆರೋಪಿಸಿದರು.