ಹಲಾಲ್ ವಿರೋಧಿ ಮಸೂದೆ ತರಲು ರಾಜ್ಯ ಸರ್ಕಾರ ಯೋಜನೆ: ಅತ್ಯಂತ ದುರಾದೃಷ್ಟಕರ- ಬಿಕೆ ಹರಿಪ್ರಸಾದ್ 

ರಾಜ್ಯದಲ್ಲಿ ಹಲಾಲ್ ಮಾಂಸದ ವಿರುದ್ಧ ಮಸೂದೆ  ತರಲು ರಾಜ್ಯ ಸರ್ಕಾರ ಯೋಜಿಸಿರುವುದು ಅತ್ಯಂತ ದುರಾದೃಷ್ಟಕರವಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ.
ಬಿಕೆ ಹರಿಪ್ರಸಾದ್
ಬಿಕೆ ಹರಿಪ್ರಸಾದ್

ಬೆಳಗಾವಿ: ರಾಜ್ಯದಲ್ಲಿ ಹಲಾಲ್ ಮಾಂಸದ ವಿರುದ್ಧ ಮಸೂದೆ  ತರಲು ರಾಜ್ಯ ಸರ್ಕಾರ ಯೋಜಿಸಿರುವುದು ಅತ್ಯಂತ ದುರಾದೃಷ್ಟಕರವಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ.

ಸುವರ್ಣ ಸೌಧದಲ್ಲಿ ಮಾತನಾಡಿದ ಅವರು, ಹಲಾಲ್ ವಿಚಾರದಲ್ಲಿ ಬಿಜೆಪಿ ಬೇಜವಾಬ್ದಾರಿಯಾಗಿ ವರ್ತಿಸುತ್ತಿದೆ. ಖಾಸಗಿ ಸದಸ್ಯತ್ವ ಮಸೂದೆ ಪ್ರತಿಯೊಬ್ಬ ಸದಸ್ಯನ ಹಕ್ಕು.ಆದರೆ ಜನಸಾಮಾನ್ಯರ ಸಮಸ್ಯೆಗಳ ನಿವಾರಣೆಗೆ ವಿಧೇಯಕ ತಂದಿದ್ದರೆ ಜಗತ್ತೇ ಮೆಚ್ಚುತ್ತಿತ್ತು ಎಂದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೇಲಿನ ಸಿಬಿಐ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇಡಿ ಅಂದ್ರೆ ಬಿಜೆಪಿ ಎಲೆಕ್ಷನ್ ಡಿಪಾರ್ಟ್ಮೆಂಟ್, ಐಟಿ ಅಂದ್ರೆ ಇಂಟಲಿಜೆನ್ಸ್ ಡಿಪಾರ್ಟ್ಮೆಂಟ್ ಹಾಗೂ ಸಿಬಿಐ ಬಿಜೆಪಿ ಮುಂಚೂಣಿ ಘಟಕವಾಗಿದೆ ಆದರೆ, ನಾವು ಭಯ ಪಡಲ್ಲ ಎಂದು ಅವರು ಹೇಳಿದರು. 

ಸಾವರ್ಕರ್ ಕೊಲೆ ಮಾಡಿ ಜೈಲಿಗೆ ಹೋದವರು ವಿನಹಃ, ಸ್ವಾತಂತ್ರ್ಯ ಹೋರಾಟ ಮಾಡಿ ಜೈಲಿಗೆ ಹೋಗಿಲ್ಲ. ಆರು ಬಾರಿ ಕ್ಷಮಾಪಣೆ ಪತ್ರ ಕೊಟ್ಟು ಬ್ರಿಟಿಷರ ತಟ್ಟೆ ಕಾಸಿನಲ್ಲಿ ಜೀವನ ಮಾಡಿದವರು.‌ ಅವರ ಫೋಟೋ ಹಾಕಿರುವುದು ಕರ್ನಾಟಕದ ಜನರಿಗೆ ಅವಮಾನ ಎಂದರು.

 ಗಡಿ ವಿವಾದ ಇರುವಾಗ ಆ ಪ್ರದೇಶದ ಹಾಗೂ ಸ್ವಾತಂತ್ರ್ಯ ಹೋರಾಟದ ವಿರುದ್ಧ ಇದ್ದ ವ್ಯಕ್ತಿಯ ಫೋಟೋ ಹಾಕಿರುವುದು ನೋಡಿದಾಗ ನಗಬೇಕೋ‌ ಅಳಬೇಕೋ ಗೊತ್ತಾಗುತ್ತಿಲ್ಲ.‌ ಬಿಜೆಪಿಗೆ ಪ್ರಜಾಪ್ರಭುತ್ವ ಸಂವಿಧಾನದಲ್ಲಿ ನಂಬಿಕೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com