ವಿಧಾನಪರಿಷತ್ ಉಪಸಭಾಪತಿಯಾಗಿ 'ಎಂ.ಕೆ ಪ್ರಾಣೇಶ್' ಆಯ್ಕೆ, ಮತದಾನದಿಂದ ದೂರ ಉಳಿದ JDS

ವಿಧಾನ ಪರಿಷತ್ ಉಪ ಸಭಾಪತಿ ಆಯ್ಕೆಗೆ ಇಂದು ಚುನಾವಣೆ ನಡೆದಿದ್ದು, ಉಪ ಸಭಾಪತಿಯಾಗಿ ಎಂ.ಕೆ ಪ್ರಾಣೇಶ್ (M.K Pranesh) ಆಯ್ಕೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಎಂಕೆ ಪ್ರಾಣೇಶ್ ಅವರೊಂದಿಗೆ ಸಿಎಂ ಬೊಮ್ಮಾಯಿ
ಎಂಕೆ ಪ್ರಾಣೇಶ್ ಅವರೊಂದಿಗೆ ಸಿಎಂ ಬೊಮ್ಮಾಯಿ

ಬೆಳಗಾವಿ: ವಿಧಾನ ಪರಿಷತ್ ಉಪ ಸಭಾಪತಿ ಆಯ್ಕೆಗೆ ಇಂದು ಚುನಾವಣೆ ನಡೆದಿದ್ದು, ಉಪ ಸಭಾಪತಿಯಾಗಿ ಎಂ.ಕೆ ಪ್ರಾಣೇಶ್ (M.K Pranesh) ಆಯ್ಕೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಇಂದು (ಡಿಸೆಂಬರ್ 23) ರಂದು 11 ಗಂಟೆಗೆ ವಿಧಾನ ಪರಿಷತ್ ಉಪ ಸಭಾಪತಿ ಆಯ್ಕೆಗೆ ಚುನಾವಣೆ ನಡೆದಿದ್ದು, ಎಂ,ಕೆ ಪ್ರಾಣೇಶ್ ನಾಮಪತ್ರ ಸಲ್ಲಿಸಿದ್ದರು. 39 ಮತ ಪಡೆಯುವ ಮೂಲಕ ಸಭಾಪತಿಯಾಗಿ ಎಂ,ಕೆ ಪ್ರಾಣೇಶ್ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.

ಇನ್ನೂ, ಕಾಂಗ್ರೆಸ್ ನ ಅರವಿಂದ ಅರಳಿ 26 ಮತ ಪಡೆದಿದ್ದರೆ, ಕೂಡ ಉಪ ಸಭಾಪತಿ ಸ್ಥಾನದ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಕೋಟಾ ಶ್ರೀನಿವಾಸ್ ಪೂಜಾರಿ, ಎಸ್. ರುದ್ರೇಗೌಡ,ತಳವಾರ್ ಸಾಬಣ್ಣ, ಅರುಣ್ ಡಿಎಸ್ ಅವರು ಬಿಜೆಪಿಯಿಂದ ಎಂ.ಕೆ ಪ್ರಾಣೇಶ್ ಹೆಸರು ಉಪಸಭಾಪತಿ ಸ್ಥಾನಕ್ಕೆ ಪ್ರಸ್ತಾಪ ಮಾಡಿದರು. ಉಪಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಅರವಿಂದ ಕುಮಾರ್ ಅರಳಿ ಅವರ ಹೆಸರನ್ನು ಬಿ.ಕೆ. ಹರಿಪಸ್ರಾದ್ (BK Hariprasad) ಪ್ರಸ್ತಾಪ ಮಾಡಿದರು.

ಜೆಡಿಎಸ್ ಪಕ್ಷದಿಂದ ಯಾರೊಬ್ಬರೂ ಕೂಡ ಮತ ಚಲಾಯಿಸಿರಲಿಲ್ಲ.  ಇಂದು ವಿಧಾನ ಪರಿಷತ್ ಉಪ ಸಭಾಪತಿ ಆಯ್ಕೆಗೆ ಚುನಾವಣೆ ನಡೆದಿದ್ದು, ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ 10 ದಿನಗಳ ಕಾಲದ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಈ ಕಲಾಪದಲ್ಲಿಯೇ ನೂತನ ಉಪ ಸಭಾಪತಿಗಳ ಆಯ್ಕೆ ನಡೆದಿದೆ.

ಪ್ರಸ್ತಾವದ ಪರವಾಗಿ 39 ಮತಗಳು ಬಂದಿವೆ. ಪ್ರಸ್ತಾವದ ವಿರೋಧವಾಗಿ 26 ಮತಗಳು ಬಂದವು. ಅಂತಿಮವಾಗಿ ಪ್ರಾಣೇಶ್ ಅವರು ಉಪಸಭಾಪತಿಯಾಗಿ ಆಯ್ಕೆಯಾಗಿದ್ದಾರೆಂದು ಸಭಾಪತಿ ಬಸವರಾಜ್ ಹೊರಟ್ಟಿ ಘೋಷಣೆ ಮಾಡಿದರು.

ಗದ್ದಲದ ನಡುವೆಯೇ ಚುನಾವಣೆ ಪ್ರಕ್ರಿಯೆ ಮುಂದುವರಿಕೆ
ಗದ್ದಲದ ನಡುವೆಯೇ ಚುನಾವಣೆ ಪ್ರಕ್ರಿಯೆ ಮುಂದುವರಿದಿದೆ. ಸದಸ್ಯರು ಎದ್ದು ನಿಂತು ಮತ ಹಾಕುವಂತೆ ಸಭಾಪತಿ ಸೂಚನೆ ನೀಡಿದರು. ಪ್ರಾಣೇಶ್ ಪರ ಮತ ಚಲಾಯಿಸುವವರು ಎದ್ದು ನಿಲ್ಲುವಂತೆ ಸೂಚಿಸಿದ್ದು ಪ್ರಾಣೇಶ್ ಪರ 39 ಮತಗಳು ಚಲಾವಣೆಗೊಂಡಿವೆ.

ಕಾಂಗ್ರೆಸ್​ನವರು ಉಪ ಸಭಾಪತಿ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದಾರೆ. ಆದರೆ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆದಾಗ ಅಭ್ಯರ್ಥಿಯನ್ನು ಹಾಕಿರಲಿಲ್ಲ. ಯಾಕೆ ಸಭಾಪತಿ ಸ್ಥಾನಕ್ಕೆ ಮೇಲ್ವರ್ಗದ ಅಭ್ಯರ್ಥಿಯನ್ನು ಹಾಕಿದ್ದಕ್ಕೆ ಕಾಂಗ್ರೆ ಅಭ್ಯರ್ಥಿಯನ್ನು ಹಾಕಿರಲಿಲ್ಲವಾ ಎಂದು ಜೆಡಿಎಸ್​ ಭೋಜೇಗೌಡರು ಪ್ರಶ್ನೆ ಮಾಡಿದರು.

ಸುವರ್ಣಸೌಧ ಎಂಟ್ರಿಯಲ್ಲಿ ಥರ್ಮಲ್ ಸ್ಯ್ಕಾನಿಂಗ್ ಮತ್ತು ಮಾಸ್ಕ್ ವ್ಯವಸ್ಥೆ
ವಿದೇಶದಲ್ಲಿ ಕೋವಿಡ್ ಹೆಚ್ಚಳ ಹಿನ್ನೆಲೆ ಬೆಳಗಾವಿ ಸುವರ್ಣಸೌಧದಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಸುವರ್ಣಸೌಧ ಎಂಟ್ರಿಯಲ್ಲಿ ಥರ್ಮಲ್ ಸ್ಯ್ಕಾನಿಂಗ್ ಮತ್ತು ಮಾಸ್ಕ್ ವ್ಯವಸ್ಥೆ ಮಾಡಲಾಗಿದೆ.  ಆರೋಗ್ಯ ಇಲಾಖೆ ಸಿಬ್ಬಂದಿಗಳು ಜನ ಪ್ರತಿನಿಧಿಗಳು ಮತ್ತು ಜನರಿಗೆ ಥರ್ಮಲ್ ಸ್ಕ್ಯಾನ್ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com