ಕೇಸರಿ ಶಾಲು ಮೊದಲಿನಿಂದ ಹಾಕ್ತಿದ್ರಾ? ಹಿಜಾಬ್ ಮೊದಲಿನಿಂದಲೂ‌ ಹಾಕ್ತಿದ್ರು: ಸಿದ್ದರಾಮಯ್ಯ ಆಕ್ರೋಶ

ಉಡುಪಿಯಲ್ಲಿಯ ಹಿಜಾಬ್ ಮತ್ತು ಕೇಸರಿ ಶಾಲು ಹಾಕುವ ಸಂಘರ್ಷದ ಕುರಿತು ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯ  ಕಿಡಿಕಾರಿದ್ದಾರೆ.

Published: 04th February 2022 02:11 PM  |   Last Updated: 04th February 2022 02:11 PM   |  A+A-


Representational image

ಸಾಂದರ್ಭಿಕ ಚಿತ್ರ

Online Desk

ಬೆಂಗಳೂರು: ಉಡುಪಿಯಲ್ಲಿಯ ಹಿಜಾಬ್ ಮತ್ತು ಕೇಸರಿ ಸಂಘರ್ಷದ ಕುರಿತು ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯ  ಕಿಡಿಕಾರಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,  ಕುಂದಾಪುರ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಗೇಟ್ ಹಾಕುವ ಮೂಲಕ ಮುಸ್ಲಿಂ ಹೆಣ್ಣು ಮಕ್ಕಳನ್ನ ಕಾಲೇಜಿಗೆ ತಡೆದಿದ್ದಾರೆ. ಕೇಸರಿ ಶಾಲು  ಹಾಕಿ ಬಿಜೆಪಿ  ಬೇಕೆಂದೇ ಮಾಡಿದೆ. ವಿಷಯಾಂತರ ಮಾಡೋಕೆ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.

ಹೆಣ್ಣು ಮಕ್ಕಳನ್ನು ವಿದ್ಯೆಯಿಂದ ವಂಚಿತ ಮಾಡುವ ಹುನ್ನಾರ ಇದಾಗಿದೆ. ಸ್ಕಾರ್ಫ್ ಹಾಕೋದು ಅವರ ಧಾರ್ಮಿಕ ನಿಯಮ. ಎಷ್ಟೋ ವರ್ಷಗಳಿಂದ ನಡೆಯುತ್ತಾ ಬರ್ತಿದೆ. ಈಗ ಯಾಕೆ ಇದನ್ನ ತಂದಿರೋದು. ಸರ್ಕಾರಿ ಕಾಲೇಜ್ ಪ್ರಿನ್ಸಿಪಾಲ್ ತಡೆಯೋದು ಸರಿಯೇ ಎಂದು ಪ್ರಶ್ನೆ ಮಾಡಿದರು. ಮಕ್ಕಳನ್ನ ಶಿಕ್ಷಣದಿಂದ ವಂಚಿತರನ್ನಾಗಿ ಮಾಡೋ ಪ್ರಯತ್ನ ಮಾಡಲಾಗುತ್ತಿದೆ. ಅವನ್ಯಾರೋ ರಘುಪತಿ ಭಟ್  ಹೇಳಿದ ಅಂತ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಕೇಸರಿ ಶಾಲು ಮೊದಲಿನಿಂದ ಹಾಕ್ತಿದ್ರಾ? ಹಿಜಾಬ್ ಮೊದಲಿನಿಂದಲೂ‌ ಹಾಕುತ್ತಿದ್ದರು. ಕೋರ್ಟ್ ನಲ್ಲಿ ವಿಚಾರಣೆಯಿದೆ.  ನಾನು ಲಾಯರ್,ಪ್ರತಿಪಕ್ಷ ನಾಯಕನಾಗಿಯೇ ಹೇಳ್ತಿದ್ದೇನೆ. ಕೇಸರಿ ಶಾಲು ಹಾಕೋದು ನಿನ್ನೆ, ಮೊನ್ನೆಯಿಂದ ಬಂದಿರೋದು. ಹಿಜಾಬ್ ಹಿಂದಿನಿಂದಲೂ ಇದೆ. ಸಂಘ ಪರಿವಾರದ ಪ್ರಯೋಗಾಲಯ ಕರಾವಳಿ ಪ್ರದೇಶ, ಎಲೆಕ್ಷನ್ ಹತ್ತಿರ ಬಂದಾಗ ಇಂತಹ ವಿಷಯಗಳನ್ನು ಮುನ್ನಲೆ ತರಲಾಗುತ್ತದೆ. ಕೊರ್ಟ್ ನ ಡಿಸಿಷನ್ ನೋಡಿಕೊಂಡು ನಾವು ಅಸೆಂಬ್ಲಿಯಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡುತ್ತೇವೆ ಎಂದು ತಿಳಿಸಿದರು.

 


Stay up to date on all the latest ರಾಜಕೀಯ news
Poll
Nitish_Kumar1

2024 ರ ಲೋಕಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಸಂಯುಕ್ತ ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಬಹುದೇ?


Result
ಹೌದು
ಇಲ್ಲ

Comments(2)

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

  • Subraya Holla P K

    ಸಿದ್ದರಾಮಯ್ಯನವರೇ ನಿಮ್ಮ ಅತೀ ಅಲ್ಪಸಂಖ್ಯಾತರ ತುಷ್ಟೀಕರಣದಿಂದ ನಿಮಗೆ ಅಜ್ಞಾನ ಆವರಿಸಿಬಿಟ್ಟಿದೆ. ಈ ಆರು ವಿದ್ಯಾರ್ಥಿನಿಯರು ಇತ್ತೀಚೆಗೆ ಹಿಜಾಬ್ ಹಾಕಲಿಕೆ ಶುರು ಮಾಡಿದ್ದು. ಹೌದು ಅವರ ಧರ್ಮದ ಪ್ರಕಾರ ಸಾರ್ವಜನಿಕ ಪ್ರದೇಶದಲ್ಲಿ ಹೆಣ್ಣು ಮಕ್ಕಳು ಹಿಜಾಬ್ ದರಿಸ ಬೇಕೆಂದಿದೆ ಆದರೆ ವಿದ್ಯಾ ಸಂಸ್ಥೆಯ ಒಳಗೆ ಹಾಕುತ್ತಿರಲಿಲ್ಲ ಇದು ಇತ್ತೀಚಿನ ಬೆಳವಣಿಗೆ ಇದು ಒಂದು ರೀತಿಯ ಕಿರಿಕ್ ಅಲ್ಲದೆ ಇನ್ನೇನು. ಇಷ್ಟು ವರ್ಷ ಇಲ್ಲದ ಸಮಸ್ಯೆಯನ್ನು ಬೇಕುಂತಲೇ ಹುಟ್ಟು ಹಾಕಿರುವುದು. ಇದಕ್ಕೆ ನಿಮ್ಮಂತವರ ಕುಮ್ಮಕ್ಕು ಬೆಂಬಲ ಇದ್ದೇ ಇದೆ ಅಂತ ಅವರಿಗೂ ಗೊತ್ತು. ಅದಕ್ಕೆ ಪ್ರತಿಯಾಗಿ ಹಿಂದೂ ವಿದ್ಯಾರ್ಥಿಗಳು ಕೇಸರೀ ಶಾಲನ್ನು ಧರಿಸಿದ್ದಾರೆ. ಧರಿಸುವ ಕ್ರಮ ಇಲ್ಲವೇ ಇಲ್ಲ ಅಂತ ನಿಮಗೆ ಯಾರು ಹೇಳಿದ್ದು . ಧರ್ಮ ಶಾಸ್ತ್ರಗಳ ಮಹಾ ಜ್ಞಾನಿಗಳೇ ನೀವು. ಇದುವರೆಗೆ ಮಾಡದಿದ್ದುದನ್ನು ಅವರು ಮಾಡುವುದಾದರೆ ಇವರೂ ಅದೇ ಕೆಲಸವನ್ನು ಮಾಡುತ್ತಾರೆ.
    6 months ago reply
  • Prabhakar

    Mekedaatu kalnadige modalninda madtidra Dongi Siddu??
    6 months ago reply
flipboard facebook twitter whatsapp