‘ತನ್ವೀರ್ ಸೇಠ್ ಪೂರ್ವಜರು ಮೆಕ್ಕಾ ಮದೀನಾದಿಂದ ಬಂದವರಲ್ಲ ದಬ್ಬಾಳಿಕೆಯಿಂದ ಮತಾಂತರಗೊಂಡವರು'
ತನ್ವೀರ್ ಸೇಠ್ ಪೂರ್ವಜರು ಮೆಕ್ಕಾ, ಮದೀನಾದಿಂದ ಬಂದವರಲ್ಲ. ಖಡ್ಗ, ಭಯ, ದಬ್ಬಾಳಿಕೆಯಿಂದ ಮತಾಂತರಗೊಂಡವರು ಎಂದು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
Published: 07th February 2022 01:20 PM | Last Updated: 07th February 2022 03:14 PM | A+A A-

ತನ್ವೀರ್ ಸೇಠ್
ಮೈಸೂರು: ತನ್ವೀರ್ ಸೇಠ್ ಪೂರ್ವಜರು ಮೆಕ್ಕಾ, ಮದೀನಾದಿಂದ ಬಂದವರಲ್ಲ. ಖಡ್ಗ, ಭಯ, ದಬ್ಬಾಳಿಕೆಯಿಂದ ಮತಾಂತರಗೊಂಡವರು ಎಂದು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಇದು ನಮ್ಮ ತಾತನದ್ದೇ ದೇಶ. ನಿಮ್ಮ ತಾತ ಕೂಡ ಹಿಂದು ಆಗಿದ್ದರು ಎಂಬುದನ್ನು ಮರೆಯಬೇಡಿ’ ಎಂದು ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ: 'ಅಧಿಕಾರಕ್ಕಾಗಿ ಸಿದ್ದ ರಹೀಮ್ ಅಯ್ಯ ಎಂದು ಹೆಸರು ಬದಲಾಯಿಸಿಕೊಳ್ಳುತ್ತಾರೆ: ಹಿಜಾಬ್-ಟೋಪಿ ಹಾಕಿಕೊಂಡು ಮದರಸಾಗೆ ಹೋಗಿ!'
ಇಲ್ಲೇ ಹುಟ್ಟಿ ಬೆಳೆದು ನಂತರ ಮತಾಂತರಗೊಂಡರು. ಯಾರೂ ಮೆಕ್ಕಾ, ಮದೀನ, ರೋಮ್, ಬೆತ್ಲಹೇಮ್ನಿಂದ ಬಂದವರಲ್ಲ. ಇದನ್ನು ತನ್ವೀರ್ ಸೇಠ್ ಅರ್ಥ ಮಾಡಿಕೊಂಡು ಮಾತನಾಡಿದರೆ ಒಳಿತು ಎಂದು ಸಲಹೆ ನೀಡಿದ್ದಾರೆ.