ಹಿರಿಯ ನಾಯಕರ ಸಮಾಧಿ ಮೇಲೆ ಸೌಧ ಕಟ್ಟಿರುವ ಹೆಚ್ ಡಿಕೆ ಯಾವ ಪುಣ್ಯದ ಹಣದಲ್ಲಿ ರಾಧಿಕಾಗೆ ನೂರಾರು ಕೋಟಿ ಕೊಟ್ಟರು?
ಆದರೆ ರಾಧಿಕಾ ಕುಮಾರಸ್ವಾಮಿಯಿಂದ ದೂರವಾಗಲೂ ನೂರಾರು ಕೋಟಿ ರೂಪಾಯಿ ಕೊಟ್ಟರು. ಯಾವ ಪುಣ್ಯದ ಹಣದಲ್ಲಿ ರಾಧಿಕಾ ಕುಮಾರಸ್ವಾಮಿ ಅವರಿಗೆ ನೂರಾರು ಕೋಟಿ ಕೊಟ್ಟರೆಂದು ರಾಜ್ಯದ ಜನರಿಗೆ ತಿಳಿಸಬೇಕೆಂದು ಒತ್ತಾಯಿಸಿದ್ದಾರೆ.
Published: 13th February 2022 10:27 AM | Last Updated: 13th February 2022 10:27 AM | A+A A-

ಎಚ್.ಡಿ ಕುಮಾರಸ್ವಾಮಿ
ರಾಮನಗರ: ಹಿರಿಯ ನಾಯಕರ ಸಮಾಧಿ ಮೇಲೆ ಸಮಾಧಿ ಕಟ್ಟಿಕೊಂಡಿರುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಯಾವ ಪುಣ್ಯದ ಹಣದಲ್ಲಿ ರಾಧಿಕಾ ಕುಮಾರಸ್ವಾಮಿ ಅವರಿಗೆ ನೂರಾರು ಕೋಟಿ ಕೊಟ್ಟರೆಂದು ರಾಜ್ಯದ ಜನರಿಗೆ ತಿಳಿಸಬೇಕೆಂದು ಮಾಜಿ ಶಾಸಕ ಕೆ.ರಾಜು ಆಗ್ರಹಿಸಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನದಲ್ಲಿದ್ದವರು ರಾಧಿಕಾ ಅವರನ್ನು ಮದುವೆ ಆದರು. ಆದರೆ ರಾಧಿಕಾ ಕುಮಾರಸ್ವಾಮಿಯಿಂದ ದೂರವಾಗಲೂ ನೂರಾರು ಕೋಟಿ ರೂಪಾಯಿ ಕೊಟ್ಟರು. ಯಾವ ಪುಣ್ಯದ ಹಣದಲ್ಲಿ ರಾಧಿಕಾ ಕುಮಾರಸ್ವಾಮಿ ಅವರಿಗೆ ನೂರಾರು ಕೋಟಿ ಕೊಟ್ಟರೆಂದು ರಾಜ್ಯದ ಜನರಿಗೆ ತಿಳಿಸಬೇಕೆಂದು ಒತ್ತಾಯಿಸಿದ್ದಾರೆ.
ನಾನು ರಾಜಕೀಯಕ್ಕೆ ಬಂದಾಗ ಹೆಚ್.ಡಿ. ಕುಮಾರಸ್ವಾಮಿ ಎಲ್ಲಿದ್ದರೋ ಗೊತ್ತಿಲ್ಲ. ದೇವೇಗೌಡರ ಮಗನೆಂಬ ಕಾರಣಕ್ಕೆ ಜನ ಅವರನ್ನ ಗುರುತಿಸಿದ್ರು. ಕುಮಾರಸ್ವಾಮಿಯನ್ನು ನಾವೇ ರಾಮನಗರಕ್ಕೆ ಕರೆತಂದೆವು. ಅವರು ಒಬ್ಬರ ಮೇಲೆ ಒಬ್ಬರನ್ನ ಎತ್ತಿಕಟ್ಟಿ ಯಶಸ್ವಿಯಾದರು ಎಂದು ಕಿಡಿಕಾರಿದ್ದಾರೆ.
ನನಗೆ ಜಿಲ್ಲಾ ಪಂಚಾಯತ್ ಟಿಕೆಟ್ ನೀಡಿ ಸೋಲಿಸಲು ಹೇಳಿದರು. ಅವರು ಹೇಳಿದಂತೆ ಕೇಳುವವರನ್ನ ಮಾತ್ರ ಹೆಚ್.ಡಿ. ಕುಮಾರಸ್ವಾಮಿ ಬೆಳೆಸುತ್ತಾರೆ. ಕಾಂಗ್ರೆಸ್ ಬೆಂಬಲದಿಂದ ಹೆಚ್ಡಿಕೆ 2ನೇ ಬಾರಿಗೆ ಸಿಎಂ ಆದರು. ಆಮೇಲೆ ಕುಮಾರಸ್ವಾಮಿ ಹಣ ಮಾಡುವ ದಂಧೆಗೆ ಇಳಿದರು. ಮಂಡ್ಯದಲ್ಲಿ ಮಗನನ್ನು ಗೆಲ್ಲಿಸಿಕೊಳ್ಳುವುದಕ್ಕೆ ಹೆಚ್ಡಿಕೆಗೆ ಆಗಲಿಲ್ಲ. ನೂರಾರು ಕೋಟಿ ಸುರಿದರೂ ಮಗನನ್ನು ಗೆಲ್ಲಿಸಿಕೊಳ್ಳಲಾಗಲಿಲ್ಲ ಎಂದು ಹೇಳಿದ್ದಾರೆ.