ಸಚಿವ ಈಶ್ವರಪ್ಪ ವಜಾಕ್ಕೆ ಕಾಂಗ್ರೆಸ್ ಬಿಗಿಪಟ್ಟು: ವಿಧಾನಸಭೆ ಕಲಾಪ ಮಾರ್ಚ್ 4ಕ್ಕೆ ಮುಂದೂಡಿಕೆ
ರಾಷ್ಟ್ರಧ್ವಜ ವಿಚಾರದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರಿಂದ ಅಹೋರಾತ್ರಿ ಧರಣಿಯು ಕಳೆದ ಫೆಬ್ರವರಿ 14ಕ್ಕೆ ಆರಂಭವಾದ ಜಂಟಿ ಅಧಿವೇಶನದ ಕಲಾಪವನ್ನು ನುಂಗಿ ಹಾಕಿದ್ದು ಇದೀಗ ವಿಧಾನಸಭೆ ಕಲಾಪವನ್ನು ಮಾರ್ಚ್ 4ಕ್ಕೆ ಮುಂದೂಡಲಾಗಿದೆ.
Published: 22nd February 2022 01:33 PM | Last Updated: 22nd February 2022 04:50 PM | A+A A-

ವಿಧಾನಸಭೆ
ಬೆಂಗಳೂರು: ರಾಷ್ಟ್ರಧ್ವಜ ವಿಚಾರದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರಿಂದ ಅಹೋರಾತ್ರಿ ಧರಣಿಯು ಕಳೆದ ಫೆಬ್ರವರಿ 14ಕ್ಕೆ ಆರಂಭವಾದ ಜಂಟಿ ಅಧಿವೇಶನದ ಕಲಾಪವನ್ನು ನುಂಗಿ ಹಾಕಿದ್ದು ಇದೀಗ ವಿಧಾನಸಭೆ ಕಲಾಪವನ್ನು ಮಾರ್ಚ್ 4ಕ್ಕೆ ಮುಂದೂಡಲಾಗಿದೆ.
ಫೆಬ್ರವರಿ 14ರಿಂದ ಆರಂಭವಾಗಿದ್ದ ಜಂಟಿ ಅಧಿವೇಶನದ ಮೊದಲ ಎರಡು ದಿನ ಸುಗಮವಾಗಿ ಕಲಾಪ ನಡೆದವು. ಮೂರನೇ ದಿನದಿಂದ ಪ್ರತಿಪಕ್ಷ ಕಾಂಗ್ರೆಸ್ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಅವರನ್ನು ಸಂಪುಟದಿಂದ ವಜಾಮಾಡುವಂತೆ ಆರು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿತ್ತು. ಸರ್ಕಾರ ಮತ್ತು ಸಭಾಧ್ಯಕ್ಷರು ಎಷ್ಟೇ ಮನವೊಲಿಕೆಗೆ ಪ್ರಯತ್ನಪಟ್ಟರೂ ಪಟ್ಟು ಸಡಿಲಿಸದೇ ಹೋರಾಟ ಮುಂದುವರಿಸಿದ್ದರಿಂದ ಸದನದಲ್ಲಿ ಯಾವುದೇ ಚರ್ಚೆ ನಡೆಯದಂತಾಯಿತು.
ಇದನ್ನೂ ಓದಿ: ಮುಖ್ಯಮಂತ್ರಿ, ಸಚಿವರು, ಶಾಸಕರ ವೇತನ-ಭತ್ಯೆ ಶೇಕಡಾ 50ರಷ್ಟು ಹೆಚ್ಚಳ; ಗದ್ದಲ, ಕೋಲಾಹಲ ನಡುವೆ ಮಸೂದೆಗೆ ಅಂಗೀಕಾರ
ಕಾಂಗ್ರೆಸ್ ಸದಸ್ಯರ ತೀವ್ರ ಗದ್ದಲ, ಕೋಲಾಹಲ ನಡುವೆ ಸರ್ಕಾರ ಅಗತ್ಯ ಪ್ರಮುಖ ವಿಧೇಯಕಗಳನ್ನು ಅಂಗೀಕಾರ ಮಾಡಿಕೊಂಡಿದೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರ ನೀಡಿದರು. ನಂತರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸದನವನ್ನು ಮಾರ್ಚ್ 4ಕ್ಕೆ ಮುಂದೂಡಿದರು.
As Congress members in the assembly continued their protest demanding Minister KS Eshwarappa's resignation for the 5th day, Speaker Vishveshwara Hegde Kageri adjourned session till March 4@NewIndianXpress @santwana99 @ramupatil_TNIE
— Ashwini M Sripad/ಅಶ್ವಿನಿ ಎಂ ಶ್ರೀಪಾದ್