ಹೈಕಮಾಂಡ್ ನಿಂದ ಸಿಗದ ಬೆಂಬಲ: ಮಾಜಿ ಸಚಿವ ಟಿಬಿ ಜಯಚಂದ್ರಗೆ ಹಿನ್ನಡೆ; ಸಾಸಲು ಸತೀಶ್ ಗೆ ಸಿದ್ದರಾಮಯ್ಯ ಅಭಯ!
ಕಳೆದ ಎರಡು ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ಮಾಜಿ ಸಚಿವ ಟಿಬಿ ಜಯಚಂದ್ರ ಅವರಿಗೆ ಮತ್ತೆ ಹಿನ್ನಡೆಯಾಗಿದೆ. 2019ರ ಶಿರಾ ವಿಧಾನಸಭೆ ಚುನಾವಣೆ ಮತ್ತು 2021ರ ಶಿರಾ ಉಪಚುನಾವಣೆಯಲ್ಲಿ ಜಯಚಂದ್ರ ಅವರಿಗೆ ಹಿನ್ನಡೆ ಉಂಟಾಯಿತು.
Published: 20th January 2022 12:37 PM | Last Updated: 20th January 2022 01:18 PM | A+A A-

ಟಿಬಿ ಜಯಚಂದ್ರ
ತುಮಕೂರು: ಕಳೆದ ಎರಡು ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ಮಾಜಿ ಸಚಿವ ಟಿಬಿ ಜಯಚಂದ್ರ ಅವರಿಗೆ ಮತ್ತೆ ಹಿನ್ನಡೆಯಾಗಿದೆ. 2019ರ ಶಿರಾ ವಿಧಾನಸಭೆ ಚುನಾವಣೆ ಮತ್ತು 2021ರ ಶಿರಾ ಉಪಚುನಾವಣೆಯಲ್ಲಿ ಜಯಚಂದ್ರ ಅವರಿಗೆ ಹಿನ್ನಡೆ ಉಂಟಾಯಿತು.
ಹಿಂದುಳಿದ ಸಮುದಾಯದ ಕಿರಿಯ ನಾಯಕ ಸಾಸಲು ಸತೀಶ್ ಅವರು 2023 ರ ವಿಧಾನಸಭಾ ಚುನಾವಣೆಗೆ ಸಾಕಷ್ಟು ಮುಂಚಿತವಾಗಿ ಸಿರಾದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಿರುವ ಸಾಸಲು ಸತೀಶ್ ಈಗಾಗಲೇ ಕ್ಷೇತ್ರದ ಜನರ ಜೊತೆ ಒಡನಾಟ ಆರಂಭಿಸಿದ್ದಾರೆ. ಜೊತೆಗೆ ಶಿರಾ ಪಟ್ಟಣದಲ್ಲಿ ಕಚೇರಿ ಕಮ್ ಮನೆ ಮಾಡಲು ಯೋಜಿಸುತ್ತಿದ್ದಾರೆ.
ಸತೀಶ್ ಅವರು 2013ರ ವಿಧಾನಸಭಾ ಚುನಾವಣೆಯಲ್ಲಿ ನೆರೆಯ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದರು. ಕಾಡುಗೊಲ್ಲ ಸಮುದಾಯದ ಗಣನೀಯ ಜನಸಂಖ್ಯೆಯನ್ನು ಒಳಗೊಂಡಿರುವ ಶಿರಾದಿಂದ ತಮ್ಮಅದೃಷ್ಟ ಪರೀಕ್ಷಿಸಲು ಪ್ರಯತ್ನಿಸುತ್ತಿದ್ದಾರೆ.
ಇತ್ತೀಚೆಗೆ, ಅವರು ಶಿರಾ ಸಿಟಿ ಮುನ್ಸಿಪಲ್ ಕೌನ್ಸಿಲ್ ಚುನಾವಣೆಯ 27 ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು, ಅವರಲ್ಲಿ 11 ಮಂದಿ ಗೆದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗೊಲ್ಲ ಸಮುದಾಯದ ಆರಾಧ್ಯ ದೈವ ಜುಂಜಪ್ಪನ ಆಶೀರ್ವಾದದೊಂದಿಗೆ ಹಿಂದೂ ಮತ್ತು ಮುಸ್ಲಿಂ ಎರಡೂ ಸಮುದಾಯಗಳ ಆರಾಧನಾ ಸ್ಥಳವಾದ ಗಂಡಿಹಳ್ಳಿ ಮಠದ ಆಶೀರ್ವಾದ ಪಡೆಯುವ ಮೂಲಕ 42 ವರ್ಷದ ಕಾಡುಗೊಲ್ಲ ಮುಖಂಡ ಸಾಸಲು ಸತೀಶ್ ಬುಧವಾರ ತಮ್ಮ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು.
ಇದನ್ನೂ ಓದಿ: ನಾರಾಯಣ ಗುರುಗಳಿಗೆ ಎಸಗಿರುವ ಅಪಮಾನ.. 'ಹಿಂದೂ ಹೃದಯ ಸಾಮ್ರಾಟ' ಮೋದಿ ಗಮನಕ್ಕೆ ಬಂದಿಲ್ಲವೇ: ಸಿದ್ದರಾಮಯ್ಯ ಪ್ರಶ್ನೆ
ಕ್ಷೇತ್ರದಲ್ಲಿ ಕಾಡುಗೊಲ್ಲರು ಗಣನೀಯ ಮತದಾರರಿದ್ದಾರೆ, ಏಕೆಂದರೆ ಅವರು ವಾಸಿಸುವ 100 ಕ್ಕೂ ಹೆಚ್ಚು ಕುಗ್ರಾಮಗಳು ಶಿರಾ ಅಸೆಂಬ್ಲಿ ವಿಭಾಗದ ಅಡಿಯಲ್ಲಿ ಬರುತ್ತವೆ. ಸಾಂಪ್ರದಾಯಿಕವಾಗಿ ದನ ಮೇಯಿಸುವ ಗೊಲ್ಲರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್ ಗೌಡ ಅವರನ್ನು ಬೆಂಬಲಿಸಿದ್ದರು.
ಆದರೆ ಉಪ ಚುನಾವಣೆಯಲ್ಲಿ ಜಯಚಂದ್ರ ಸೋಲನುಭವಿಸಿರುವ ಹಿನ್ನೆಲೆಯಲ್ಲಿ 2023ರ ವಿಧಾನಸಭೆ ಚುನಾವಣೆಗೆ ಮತ್ತೆ ಟಿಕೆಟ್ ನೀಡುವುದು ಅನುಮಾನವಾಗಿದೆ. ಸತೀಶ್ ಅವರಂತ ಕಿರಿಯ ನಾಯಕರು ಜಯಚಂದ್ರ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇದರ ಜತೆಗೆ ಸಿದ್ದರಾಮಯ್ಯ ಅವರ ಬೆಂಬಲ ಕೂಡ ತಮಗೆ ದೊರೆತಿದೆ ಎಂದು ಸತೀಶ್ ಹೇಳಿಕೊಂಡಿದ್ದಾರೆ. 2023ರ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ನೀಡಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಹಲವಾರು ಅವಧಿಗಳಿಂದ ತಮ್ಮ ಪ್ರತಿನಿಧಿಗಳ ಹಿಡಿತದಲ್ಲಿರುವ ಶಿರಾ ಸ್ಥಾನವನ್ನು ಬೇರೆ ಯಾವುದೇ ಸಮುದಾಯದವರು ಗೆಲ್ಲುವುದು ಕಷ್ಟ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರು, ವಿಶೇಷವಾಗಿ ಕುಂಚಟಿಗ ಒಕ್ಕಲಿಗ ಸಮುದಾಯದವರು ಹೇಳಿದ್ದಾರೆ.
ಶಿರಾದಿಂದ ಕುರುಬ ಮುಖಂಡ ಮತ್ತು ಎಂಎಲ್‌ಸಿ ತಿಪ್ಪೇಸ್ವಾಮಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ, ಏಕೆಂದರೆ ಅವರು ಸಿಎಂಸಿ ಚುನಾವಣೆಯ ಸಮಯದಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ಹಿಂದುಳಿದ ವರ್ಗಗಳ ಇಬ್ಬರು ಮುಖಂಡರು ಸ್ಪರ್ಧಿಸಿದರೆ ಬಿಜೆಪಿಯ ಹಾಲಿ ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ಅವರು ಕುಂಚಟಿಗ ಒಕ್ಕಲಿಗ ನಾಯಕರಾಗಲು ಅನುಕೂಲವಾಗಲಿದೆ.