ಪಕ್ಷಾಂತರ ಪರ್ವ: ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ: ಭವಿಷ್ಯ ನುಡಿದ ರಮೇಶ್ ಜಾರಕಿಹೊಳಿ ಹೇಳಿದ್ದೇನು?

ರಾಜ್ಯದಲ್ಲಿ ಪಕ್ಷಾಂತರ ಪರ್ವ ಆರಂಭವಾಗುವ ಎಲ್ಲ ಮುನ್ಸೂಚನೆಗಳೂ ದೊರೆಯುತ್ತಿದ್ದು, ಇದಕ್ಕೆ ಇಂಬು ನೀಡುವಂತೆ ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ ನಡೆಯುವ ಸಾಧ್ಯತೆಯನ್ನು ಸ್ವತಃ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

Published: 26th January 2022 12:27 AM  |   Last Updated: 26th January 2022 12:27 AM   |  A+A-


ramesh jarkiholi

ರಮೇಶ್ ಜಾರಕಿಹೊಳಿ

The New Indian Express

ಬೆಂಗಳೂರು: ರಾಜ್ಯದಲ್ಲಿ ಪಕ್ಷಾಂತರ ಪರ್ವ ಆರಂಭವಾಗುವ ಎಲ್ಲ ಮುನ್ಸೂಚನೆಗಳೂ ದೊರೆಯುತ್ತಿದ್ದು, ಇದಕ್ಕೆ ಇಂಬು ನೀಡುವಂತೆ ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ ನಡೆಯುವ ಸಾಧ್ಯತೆಯನ್ನು ಸ್ವತಃ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಬಿಜೆಪಿ, ಜೆಡಿಎಸ್ ಶಾಸಕರು ಕಾಂಗ್ರೆಸ್ಗೆ ಬರುತ್ತಾರೆ. ಬಿಜೆಪಿ, ಜೆಡಿಎಸ್ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಆದರೆ ನನ್ನ ಸಂಪರ್ಕದಲ್ಲಿರುವವರ ಬಗ್ಗೆ ಬಹಿರಂಗಪಡಿಸಲ್ಲ ಎಂಬ ಸಿದ್ದರಾಮಯ್ಯ ಅವರ ಸ್ಫೋಟಕ ಹೇಳಿಕೆ ಬೆನ್ನಲ್ಲೇ ಇದಕ್ಕೆ ತಿರುಗೇಟು ನೀಡಿರುವ ರಮೇಶ್ ಜಾರಕಿಹೊಳಿ ಅವರು, 'ಈ ಹಿಂದೆ ವಿಧಾನ  ಸಭೆ ಒಳಗೆ ಸಿದ್ದರಾಮಯ್ಯ ಅವರು ಏನು ಹೇಳಿದ್ರು ಒಮ್ಮೆ ಸಿದ್ದರಾಮಯ್ಯ ಜ್ಞಾಪಿಸಿಕೊಳ್ಳಲಿ. ಟೇಬಲ್ ಕುಟ್ಟಿ ಹೇಳಿದ್ರು. ಯಾವುದೇ ಕಾರಣಕ್ಕೂ ಈ ದ್ರೋಹಿಗಳನ್ನ ಸೇರ್ಪಡೆ ಮಾಡಿಕೊಳ್ಳಲ್ಲ ಎಂದಿದ್ರು. ಈಗ ಯಾಕೆ ಬೇಕು ಇವರಿಗೆ ಎಂದು ಪ್ರಶ್ನಿಸಿದರು. 

ಅಂತೆಯೇ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗೋಕೆ ಮತ್ತೆ ಕರೆಯುತ್ತಿದ್ದಾರಾ?. ಯಾವುದೇ ಕಾರಣಕ್ಕೂ ಇದು ಸಾಧ್ಯವಿಲ್ಲ. ಮತ್ತೆ ಬೊಮ್ಮಯಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಬರುತ್ತೆ. ನನ್ನ ಜತೆ 36 ಜನ ಇದ್ರು, 17 ಜನ ನನ್ನ ಜತೆ ಬಿಜೆಪಿಗೆ ಬಂದ್ರು.. ಕೆಲವರು ತಾಂತ್ರಿಕ ಕಾರಣದಿಂದ ಅಲ್ಲಿಯೇ ಇದ್ದಾರೆ. ಆ  ಸಂದರ್ಭದಲ್ಲಿ ನಮ್ಮ ಜತೆ ಬರಲಿಲ್ಲ. ಕಾಂಗ್ರೆಸ್‌ನ 16 ಶಾಸಕರು ನನ್ನ ಸಂಪರ್ಕದಲ್ಲಿರುವುದು ನಿಜ. ಬಿಜೆಪಿ ಹೈಕಮಾಂಡ್ ಒಪ್ಪಿದರೆ ಅವರನ್ನು ಪಕ್ಷಕ್ಕೆ ಕರೆತರುವೆ ಎಂದು ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು. 

ಜೆಡಿಎಸ್‌ನ ಮೂವರು ಶಾಸಕರು ಕೂಡ ಸಂಪರ್ಕದಲ್ಲಿದ್ದಾರೆ. ಕುಮಾರಸ್ವಾಮಿ ಒಳ್ಳೆಯವರು, ಜೆಡಿಎಸ್‌ನವರನ್ನು ಸೆಳೆಯಲ್ಲ. ಬೆಳಗಾವಿ ಜಿಲ್ಲೆಯ ಮೂವರು ಶಾಸಕರು ಸಂಪರ್ಕದಲ್ಲಿದ್ದಾರೆ. ಮೂವರ ಪೈಕಿ ಇಬ್ಬರು ಬಿಜೆಪಿಗೆ ಬಂದರೆ ಅಭ್ಯಂತರವಿಲ್ಲ. ಅವನೊಬ್ಬ ಬಿಜೆಪಿಗೆ ಬಂದರೆ ನಾನೇ ಬೇರೆ ಕಡೆ ಹೋಗುತ್ತೇನೆ.

ನಮ್ಮ ಜತೆ ಬಿಜೆಪಿಗೆ ಬಂದವರು ಯಾರೂ ಪಕ್ಷ ಬಿಡುವುದಿಲ್ಲ. ವಿಧಾನಸಭಾ ಚುನಾವಣೆ ಹತ್ತಿರ ಬಂದಾಗ ಎಲ್ಲಾ ಗೊತ್ತಾಗುತ್ತೆ. ನಾನು ಸಚಿವಸ್ಥಾನದ ಆಕಾಂಕ್ಷಿಯಲ್ಲ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ. ನಮ್ಮ ಹೈಕಮಾಂಡ್ ಅಮಿತ್ ಶಾ, ನಮ್ಮ ಜತೆ ಚೆನ್ನಾಗಿದ್ದಾರೆ. ನಾನು ಇಲ್ಲೇ ಇದ್ದು ಪಕ್ಷ  ಸಂಘಟನೆ ಮಾಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು. 

ಈ ಹೇಳಿಕೆಗೆ ಇಂಬು ನೀಡುವಂತೆ, ರಮೇಶ್ ಜಾರಕಿಹೊಳಿ ಅವರು, ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ತಮ್ಮ ನಿವಾಸದಲ್ಲಿ ಬಿಜೆಪಿಯ ಕೆಲವು ಶಾಸಕರೊಂದಿಗೆ ಸಭೆ ನಡೆಸುತ್ತಿದ್ದರು. ಸಭೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜಾರಕಿಹೊಳಿ  ಅವರ ನಿವಾಸದಲ್ಲಿ ಕಾಂಗ್ರೆಸ್ ಮುಖಂಡ ರಾಜಣ್ಣ ಮತ್ತು ಎಂಎಲ್ಸಿ ರಾಜೇಂದ್ರ ಕೂಡ ಬುಧವಾರ ಭೇಟಿಯಾಗಿದ್ದರು ಎನ್ನಲಾಗಿದೆ.

ಇನ್ನು ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ನಿರ್ಗಮಿಸಿದ ನಂತರ ರಾಜ್ಯದಲ್ಲಿ ಆಡಳಿತ ಪಕ್ಷವು ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿರುವುದರಿಂದ ಜಾರಕಿಹೊಳಿ ಅವರಿಗೆ ಮತ್ತೊಂದು ಆಪರೇಷನ್ ಕಮಲ ನಡೆಸುವುದು ಕಷ್ಟ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. 
 


Stay up to date on all the latest ರಾಜಕೀಯ news
Poll
MoE to launch bachelor degree programme for Agniveers

ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ಸರಿಯಾಗಿ ಯೋಜಿಸಲಾಗಿಲ್ಲ ಎಂಬ ಟೀಕೆಗಳನ್ನು ನೀವು ಒಪ್ಪುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp