‘ಹುಚ್ಚು ಹಿಡಿದವರು ಮಾತ್ರ ಕಾಂಗ್ರೆಸ್‌ಗೆ ಹೋಗುತ್ತಾರೆ, ಬುದ್ಧಿ ನೆಟ್ಟಗೆ ಇರುವವರು ಯಾರೂ ಹೋಗುವುದಿಲ್ಲ’
‘ಹುಚ್ಚು ಹಿಡಿದವರು ಮಾತ್ರ ಕಾಂಗ್ರೆಸ್‌ಗೆ ಹೋಗುತ್ತಾರೆ. ಬುದ್ಧಿ ನೆಟ್ಟಗೆ ಇರುವವರು ಯಾರೂ ಹೋಗುವುದಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
Published: 26th January 2022 02:06 PM | Last Updated: 27th January 2022 01:05 PM | A+A A-

ಆರಗ ಜ್ಞಾನೇಂದ್ರ
ತುಮಕೂರು: ‘ಹುಚ್ಚು ಹಿಡಿದವರು ಮಾತ್ರ ಕಾಂಗ್ರೆಸ್‌ಗೆ ಹೋಗುತ್ತಾರೆ. ಬುದ್ಧಿ ನೆಟ್ಟಗೆ ಇರುವವರು ಯಾರೂ ಹೋಗುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ದೇಶದಲ್ಲಿ ನರೇಂದ್ರ ಮೋದಿ ಆಡಳಿತ, ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷ ಸದೃಢವಾಗಿದೆ. ಇಂತಹ ಸಮಯದಲ್ಲಿ ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ’ ಎಂದು ಸ್ಪಷ್ಟಪಡಸಿದರು.
ಇದನ್ನೂ ಓದಿ: ನಿಮ್ಮ ಜೊತೆ ಯಾರಾದರೂ ಬಂದರೆ ತತ್ವ ಸಿದ್ದಾಂತದ ನಂಬಿಕೆಯಿಂದಲ್ಲ, ಅವಕಾಶವಾದ ಮತ್ತು ಅಧಿಕಾರ ದಾಹಕ್ಕಾಗಿ ಮಾತ್ರ!
ಕೆಲವರಿಗೆ ಸರಿಯಾದ ಪ್ರಮಾಣದಲ್ಲಿ ವೇತನ ಹೆಚ್ಚಳವಾಗಿಲ್ಲ ಎಂಬ ಅಸಮಾಧಾನ ಇದೆ. ಈ ಬಗ್ಗೆ ಆರ್ಥಿಕ ಇಲಾಖೆ ಜತೆ ಚರ್ಚಿಸಿದ್ದು, ಹೆಚ್ಚುವರಿಯಾಗಿ ಭತ್ಯೆ ನೀಡುವ ಮೂಲಕ ವ್ಯತ್ಯಾಸವನ್ನು ಸರಿಪಡಿಸಲಾಗಿದೆ. ಪೊಲೀಸರಿಗೆ ಸುಸಜ್ಜಿತವಾದ ಮನೆ, ಠಾಣೆ ನಿರ್ಮಿಸಿ ಕೊಡಲಾಗುತ್ತಿದೆ ಎಂದರು.