ಬಿಬಿಎಂಪಿ ಚುನಾವಣೆ: ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ, ಬಿಜೆಪಿ ಪೂರ್ವ ಸಿದ್ದತೆ ಕುರಿತು ಚರ್ಚೆ
ಇಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ, ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿಬಿಎಂಪಿ ಚುನಾವಣೆಗೆ ಬಿಜೆಪಿ ಪೂರ್ವಸಿದ್ಧತಾ ಸಭೆ ನಡೆದಿದ್ದು, ಈ ಸಭೆಯಲ್ಲಿ ಬೆಂಗಳೂರು ಕೇಂದ್ರ ಹಾಗೂ ದಕ್ಷಿಣ ವಿಭಾಗದ ಶಾಸಕರು, ಸಚಿವರು ಹಾಗೂ ಸಂಸದರು ಭಾಗಿಯಾಗಿದ್ದರು.
Published: 27th January 2022 12:04 AM | Last Updated: 27th January 2022 12:52 PM | A+A A-

ಬಿಜೆಪಿ ಸಭೆ
ಬೆಂಗಳೂರು: ಇಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ, ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿಬಿಎಂಪಿ ಚುನಾವಣೆಗೆ ಬಿಜೆಪಿ ಪೂರ್ವಸಿದ್ಧತಾ ಸಭೆ ನಡೆದಿದ್ದು, ಈ ಸಭೆಯಲ್ಲಿ ಬೆಂಗಳೂರು ಕೇಂದ್ರ ಹಾಗೂ ದಕ್ಷಿಣ ವಿಭಾಗದ ಶಾಸಕರು, ಸಚಿವರು ಹಾಗೂ ಸಂಸದರು ಭಾಗಿಯಾಗಿದ್ದರು.
ಸಭೆ ಬಳಿಕ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಮಾತನಾಡಿದರು. ನಿನ್ನೆ, ಇಂದು ಪದಾಧಿಕಾರಿಗಳ ಸಭೆ ನಡೆಸಲಾಯ್ತು. ಇಂದು ಬಿಬಿಎಂಪಿ ಮೂರು ಜಿಲ್ಲೆಯಾಗಿ ವಿಭಜಿಸಿದ್ದು, ಬೆಂಗಳೂರು ಉತ್ತರ, ಕೇಂದ್ರ, ದಕ್ಷಿಣ ಮೂರು ಸಭೆ ಮಾಡಲಾಗಿದೆ. ಶಾಸಕರು, ಸಚಿವರು, ಲೋಕಸಭಾ ಸದಸ್ಯರು ಚರ್ಚೆ ಮಾಡಿದ್ದೇವೆ. ಪಕ್ಷ ಸಂಘಟನೆ, ವಾರ್ಡ್, ಗ್ರೂಪ್ ಮಟ್ಟದ ಸಬಲೀಕರಣ ಮಾಡಲು ನಿರ್ಧಾರ. ಸಮಸ್ಯೆಗಳ ಬಗ್ಗೆ ಉತ್ತಮ ರೀತಿಯಲ್ಲಿ ಚರ್ಚೆಯಾಗಿದೆ. ಬಿಜೆಪಿ ಅತ್ಯಂತ ಸದೃಢವಾಗಿದೆ.. ಕಳೆದ ಬಾರಿಯೂ ಹೆಚ್ಚು ಬಿಬಿಎಂಪಿ ಸದಸ್ಯರ ಆಯ್ಕೆಯಾಗಿದೆ. ಈ ಬಾರಿಯೂ ಅಧಿಕಾರಕ್ಕೆ ಬರಲು ಎಲ್ಲಾ ತಯಾರಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ರಾಜ್ಯಾಧ್ಯಕ್ಷರಾದ ಶ್ರೀ @nalinkateel ಅವರು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSBommai ಅವರ ಉಪಸ್ಥಿತಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ಜಿಲ್ಲಾ ವ್ಯಾಪ್ತಿಯ ಜಿಲ್ಲಾ ಮತ್ತು ಮಂಡಲ ಪ್ರಭಾರಿಗಳು, ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಸಿದರು. pic.twitter.com/pkbqNup3Dx
— BJP Karnataka (@BJP4Karnataka) January 26, 2022
ಸಭೆ ಬಳಿಕ ಸಂಸದ ತೇಜಸ್ವಿ ಸೂರ್ಯ ಮಾತನಾಡಿದರು. ಸಿಎಂ ನೇತೃತ್ವದಲ್ಲಿ ಬಿಬಿಎಂಪಿ ವಿಚಾರ ಸುಧೀರ್ಘ ಚರ್ಚೆ ನಡೆದಿದೆ. ಬಿಬಿಎಂಪಿ ಚುನಾವಣೆ ಸಂಬಂಧ ಪಕ್ಷ ಮತ್ತು ಸಂಘಟನೆ ಹೇಗೆ ಮಾಡಬೇಕು ಅಂತ ಚರ್ಚೆ ಮಾಡಲಾಯ್ತು. ಬೆಂಗಳೂರಿಗೆ ಬಿಜೆಪಿ ಕೊಡುಗೆ ಅನೇಕ ಇದೆ. ಕಾವೇರಿ, ಮೆಟ್ರೋ, ಸಬ್ ಅರ್ಬನ್ ಎಲ್ಲವೂ ಬಿಜೆಪಿ ಅಧಿಕಾರದಲ್ಲಿದ್ದಾಗ ಬಂದಿದೆ. ಅಭಿವೃದ್ಧಿ ಕೆಲಸದ ವೇಗ ಹೇಗೆ ಹೆಚ್ಚಿಸೋದು ಅಂತ ಚರ್ಚೆಯಾಗಿದೆ. ಈಗಲೂ ಜನ ಹೇಗೆ ಸಮಸ್ಯೆ ಹೇಗೆ ಎದುರಿಸುತ್ತಿದ್ದಾರೆ ಅಂತ ಚರ್ಚೆ ನಡೆಸಲಾಯ್ತು. ಸಿಎಂ ಅವರೇ ಕೂತು ಸಮಸ್ಯೆ ಆಲಿಸಿದ್ರು ಎಂದು ವಿವರ ನೀಡಿದರು.
ಇದನ್ನೂ ಓದಿ: ಮುಗಿದ ಉಪಚುನಾವಣೆ ಪ್ರಚಾರ: ಸಿಎಂ ಬಸವರಾಜ ಬೊಮ್ಮಾಯಿ ಹೆಗಲಿಗೆ ಬಿಬಿಎಂಪಿ ಅಗ್ನಿ ಪರೀಕ್ಷೆ!
ಈ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಪಡೆಯಬೇಕು. ಈಗಾಗಲೇ ಪಕ್ಷದಿಂದ ಕಾರ್ಯಕರ್ತರನ್ನ ಹುರಿದುಂಬಿಸೋ ಕೆಲಸ ಆಗುತ್ತಿದೆ. ಪಕ್ಷದ ಜವಾಬ್ದಾರಿ ನೀಡಿ ಕೆಲಸ ತೆಗೆಸಲಾಗ್ತಿದೆ. ಸಮಸ್ಯೆಗಳನ್ನು ಬಗ್ಗೆ ಗಮನಕ್ಕೆ ತರಲು ಮುಖ್ಯಮಂತ್ರಿ ಸೂಚಿಸಿದ್ದಾರೆ. ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸಲು ನಿರ್ಧಾರ ಮಾಡಲಾಗಿದೆ ಎಂದರು.
ಚುನಾವಣೆ ಎಷ್ಟು ಸೀಟಿಗೆ ಆಗಬೇಕು ಅನ್ನೋದು ಕೋರ್ಟ್ ಸೂಚಿಸಲಿದೆ. ಅತಿ ಹೆಚ್ಚು ಸೀಟ್ ಗೆಲ್ಲುವುದು ನಮ್ಮ ಪಕ್ಷದ ಕೆಲಸ. ಹೀಗಾಗಿ ಪಕ್ಷ ಸಂಘಟನೆ ಮಾಡಲಾಗುವುದು. ಹಿಂದಿನ ಸರ್ಕಾರ ಅಥವಾ ಈಗಿನ ಸರ್ಕಾರ ಇರಬಹುದು. ಯಾವ್ಯಾವ ಪಕ್ಷ ಬೆಂಗಳೂರಿಗೆ ಏನು ನೀಡಿದೆ ಅಂತ ಜನರ ಮುಂದೆ ಇಡ್ತೀವಿ. ಅದರ ಮೂಲಕವೇ ಜನರಿಂದ ಮತ ಪಡೆದು ಅಧಿಕಾರ ಹಿಡಿಯುತ್ತೇವೆ ಎಂದು ತಿಳಿಸಿದರು.