ವಿಧಾನಸಭೆ ಚುನಾವಣೆ ಹಿನ್ನೆಲೆ: ಬಂಡೆಪ್ಪ ಕಾಶೆಂಪೂರ್ ನೇತೃತ್ವದಲ್ಲಿ ಜೆಡಿಎಸ್ ನೂತನ ಕೋರ್ ಕಮಿಟಿ
ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಪೂರ್ವ ತಯಾರಿ ಆರಂಭಿಸಿರುವ ಜಾತ್ಯಾತೀತ ಜನತಾದಳ, ಕೋರ್ ಕಮಿಟಿಯಲ್ಲಿ ಹಲವು ಬದಲಾವಣೆಯನ್ನು ಮಾಡಿದೆ.
Published: 27th January 2022 08:04 AM | Last Updated: 27th January 2022 12:56 PM | A+A A-

ಬಂಡೆಪ್ಪ ಕಾಶೆಂಪೂರ್
ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಪೂರ್ವ ತಯಾರಿ ಆರಂಭಿಸಿರುವ ಜಾತ್ಯಾತೀತ ಜನತಾದಳ, ಕೋರ್ ಕಮಿಟಿಯಲ್ಲಿ ಹಲವು ಬದಲಾವಣೆಯನ್ನು ಮಾಡಿದೆ.
ಎಲ್ಲಾ ಪ್ರಾಂತ್ಯ/ಜಾತಿ ಆಧಾರಿತವಾಗಿ ಕೋರ್ ಕಮಿಟಿಯಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ನೂತನ ಕಾರ್ಯಾಧ್ಯಕ್ಷರು ಮತ್ತು ಪರಿಶಿಷ್ಠ ಪಂಗಡಕ್ಕೆ ಹೊಸ ಅಧ್ಯಕ್ಷರನ್ನು ನೇಮಿಸಲಾಗಿದೆ. ಜೆಡಿಎಸ್ ರಾಜ್ಯಧ್ಯಕ್ಷರಾಗಿ ಎಚ್.ಕೆ. ಕುಮಾರಸ್ವಾಮಿ ಮುಂದುವರಿಯಲಿದ್ದಾರೆ.
ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ಅವರು ಮಾಧ್ಯಮಗೋಷ್ಠಿಯಲ್ಲಿ 20 ಸದಸ್ಯರ ಪಟ್ಟಿಯನ್ನು ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ. ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಇಬ್ಬರಿಗೆ ಮತ್ತು ನೂತನ ಕೋರ್ ಕಮಿಟಿ ಸದಸ್ಯರಿಗೆ ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.
ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ನೇತೃತ್ವದಲ್ಲಿ ಜೆಡಿಎಸ್ ನೂತನ ಕೋರ್ ಕಮಿಟಿ ರಚನೆಯಾಗಿದೆ. ಜೆಡಿಎಸ್ ಪರಿಶಿಷ್ಠ ಪಂಗಡದ ರಾಜ್ಯಾಧ್ಯಕ್ಷರಾಗಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮತ್ತು ಮಾಜಿ ಸಚಿವ ಎನ್.ಎಂ.ನಬಿ ಅವರನ್ನು ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ನೇಮಕ ಮಾಡಿದ್ದಾರೆ.
ಕೋರ್ ಕಮಿಟಿಯಲ್ಲಿ ವೆಂಕಟರಾವ್ ನಾಡಗೌಡ, ಸಿ ಎಸ್ ಪುಟ್ಟರಾಜು, ಪ್ರಜ್ವಲ್ ರೇವಣ್ಣ, ಕುಪೇಂದ್ರ ರೆಡ್ಡಿ, ವೈ ಎಸ್ ವಿ ದತ್ತ, ಬಿ ಎಂ ಫಾರೂಕ್ ಸೇರಿದಂತೆ ಇತರರಿದ್ದಾರೆ. ಮಾಜಿ ಪ್ರಧಾನಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್ಡಿ ದೇವೇಗೌಡ, ಕುಮಾರಸ್ವಾಮಿ, ರಾಜ್ಯ ಘಟಕದ ಅಧ್ಯಕ್ಷ ಎಚ್ಕೆ ಕುಮಾರಸ್ವಾಮಿ ಅವರು ವಿಶೇಷ ಆಹ್ವಾನಿತರ ಪಟ್ಟಿಯಲ್ಲಿದ್ದಾರೆ.