ಚಾಮುಂಡೇಶ್ವರಿ ಜನರು ಕೈ ಹಿಡಿಯಲಿಲ್ಲ, ಬಾದಾಮಿಯಲ್ಲಿ ಬೀಳ್ಕೊಡಲು ಸಜ್ಜು: ನೀವು ಸಲ್ಲುವ ಜಾಗ ಯಾವುದು?
ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಹರಿಹಾಯ್ದಿದೆ, ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ಕಾಂಗ್ರೆಸ್ ಕಲಹ ವಿರುದ್ಧ ಟೀಕೆ ಮಾಡಿದೆ.
Published: 29th January 2022 02:32 PM | Last Updated: 29th January 2022 02:46 PM | A+A A-

ಸಿದ್ದರಾಮಯ್ಯ
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಹರಿಹಾಯ್ದಿದೆ, ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ಕಾಂಗ್ರೆಸ್ ಕಲಹ ವಿರುದ್ಧ ಟೀಕೆ ಮಾಡಿದೆ.
ವರುಣಾ ಕ್ಷೇತ್ರವನ್ನು ಪುತ್ರವ್ಯಾಮೋಹಕ್ಕಾಗಿ ಬಳಸಿಕೊಂಡಿರಿ, ಚಾಮುಂಡೇಶ್ವರಿಯಲ್ಲಿ ಜನರು ಕೈ ಹಿಡಿಯಲಿಲ್ಲ. ಬಾದಾಮಿಯಲ್ಲಿ ಬೀಳ್ಕೊಡಲು ಜನ ಸಜ್ಜಾಗಿದ್ದಾರೆ ಎಂದು ಲೇವಡಿ ಮಾಡಿದೆ.
ಹುಣಸೂರು, ಚಾಮರಾಜಪೇಟೆ, ಚಿಕ್ಕನಾಯಕನಹಳ್ಳಿ, ಮುಂದೆ ಯಾವುದು? ಜನರ ಬೆಂಬಲವಿಲ್ಲ, ಪಕ್ಷದ ಸಹಕಾರವಿಲ್ಲ, ನೀವು ಸಲ್ಲುವ ಜಾಗ ಯಾವುದು?
ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲ ಎಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಆದರೆ ಸಂವಿಧಾನ ತಜ್ಞ ಸಿದ್ದರಾಮಯ್ಯ ಅವರು ಮಾತ್ರ ಮೌನವಾಗಿದ್ದಾರೆ. ಅಂಬೇಡ್ಕರ್ ಅವರಿಗೆ ಅನ್ಯಾಯ ಮಾಡಿದ ಕಾಂಗ್ರೆಸ್ ಪಕ್ಷದ ನಾಯಕರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ? ಎಂದು ಪ್ರಶ್ನಿಸಿದೆ.
ಮಾನ್ಯ ಸಿದ್ದರಾಮಯ್ಯನವರೇ,
— BJP Karnataka (@BJP4Karnataka) January 29, 2022
ವರುಣಾ ಕ್ಷೇತ್ರವನ್ನು ಪುತ್ರವ್ಯಾಮೋಹಕ್ಕಾಗಿ ಬಳಸಿಕೊಂಡಿರಿ. ಚಾಮುಂಡೇಶ್ವರಿಯಲ್ಲಿ ಜನರು ಕೈ ಹಿಡಿಯಲಿಲ್ಲ. ಬಾದಾಮಿಯಲ್ಲಿ ಬೀಳ್ಕೊಡಲು ಜನ ಸಜ್ಜಾಗಿದ್ದಾರೆ.
ಹುಣಸೂರು, ಚಾಮರಾಜಪೇಟೆ, ಚಿಕ್ಕನಾಯಕನಹಳ್ಳಿ, ಮುಂದೆ ಯಾವುದು?
ಜನರ ಬೆಂಬಲವಿಲ್ಲ, ಪಕ್ಷದ ಸಹಕಾರವಿಲ್ಲ, ನೀವು ಸಲ್ಲುವ ಜಾಗ ಯಾವುದು?#ಕಾಂಗ್ರೆಸ್ಕಲಹ