ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುವ ವಿಷಯ ದೇವೇಗೌಡರಿಗೆ ತಿಳಿದಿತ್ತು: ಸಿ ಎಸ್ ಪುಟ್ಟರಾಜು
ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಹೆಜ್ಜೆ ತುಳಿದು, ಅವರ ಹಾದಿಯಲ್ಲಿಯೇ ರಾಜಕಾರಣ ಮಾಡುತ್ತಿದ್ದೇನೆ. ಅವರು ಎಲ್ಲಿವರೆಗೆ ಸಕ್ರಿಯ ರಾಜಕಾರಣದಲ್ಲಿ ಇರುವರೋ, ಅಲ್ಲಿಯವರೆಗೂ ಪಕ್ಷ ಬಿಡುವ ಮಾತೇ ಇಲ್ಲ,
Published: 29th January 2022 11:11 AM | Last Updated: 29th January 2022 01:00 PM | A+A A-

ಸಿಎಸ್ ಪುಟ್ಟರಾಜು
ಬೆಂಗಳೂರು: ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಹೆಜ್ಜೆ ತುಳಿದು, ಅವರ ಹಾದಿಯಲ್ಲಿಯೇ ರಾಜಕಾರಣ ಮಾಡುತ್ತಿದ್ದೇನೆ. ಅವರು ಎಲ್ಲಿವರೆಗೆ ಸಕ್ರಿಯ ರಾಜಕಾರಣದಲ್ಲಿ ಇರುವರೋ, ಅಲ್ಲಿವರೆಗೂ ಪಕ್ಷ ಬಿಡುವ ಮಾತೇ ಇಲ್ಲ, ಎಂದು ಮೇಲುಕೋಟೆ ಕ್ಷೇತ್ರದ ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರನ್ನು ಪುಟ್ಟರಾಜು ಬೆಂಗಳೂರಿನಲ್ಲಿ ಭೇಟಿ ಮಾಡಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಸೇರಲಿದ್ದಾರೆಂಬ ಮಾತುಗಳು ಕಳೆದೊಂದು ವರ್ಷದಿಂದಲೂ ಹರಿದಾಡುತ್ತಲೇ ಇವೆ.
ಇದನ್ನೂ ಓದಿ: ಜೆಡಿಎಸ್ ಮತ್ತೊಂದು ವಿಕೆಟ್ ಪತನ? ಸಿದ್ದರಾಮಯ್ಯ- ಸಿಎಸ್ ಪುಟ್ಟರಾಜು ಭೇಟಿ: ಜಮೀರ್ ಸಾರಥ್ಯ!
ಈ ಸಂಬಂಧ ಸ್ಪಷ್ಟನೆ ನೀಡಿರುವ ಶಾಸಕ ಸಿಎಸ್ ಪುಟ್ಟರಾಜು,‘ಸಿದ್ದರಾಮಯ್ಯ ಅವರನ್ನು ಭೇಟಿಯಾಗುವ ವಿಷಯವನ್ನು ಎಚ್.ಡಿ.ದೇವೇಗೌಡ ಅವರಿಗೆ ತಿಳಿಸಿದ್ದೆ. ನನ್ನ ಕ್ಷೇತ್ರದ ಡಿಂಕಾ ಮಲ್ಲಿಗೆರೆ ಗ್ರಾಮದಲ್ಲಿ ಕುರುಬ ಸಮುದಾಯ ಪ್ರಬಲವಾಗಿದೆ. ಅಲ್ಲಿ ಸಿದ್ದರಾಮೇಶ್ವರ ದೇವಾಲಯದ ಉದ್ಘಾಟನೆಗೆ ಆಹ್ವಾನಿಸಲು ತೆರಳಿದ್ದೆ, ಅಷ್ಟಕ್ಕೇ ಕಾಂಗ್ರೆಸ್ ಸೇರುತ್ತಿದ್ದೇನೆ ಎಂದು ಸುದ್ದಿ ಹರಡಿದ್ದಾರೆ. 1978ರಲ್ಲಿ ಜನತಾ ಪಕ್ಷದಿಂದ ರಾಜಕಾರಣಕ್ಕೆ ಬಂದೆ. ಇಂದಿನವರೆಗೂ ಪಕ್ಷ ಬಿಡುವ ಬಗ್ಗೆ ಯೋಚಿಸಿಲ್ಲ’ ಎಂದರು.