ಗೌಡರಿಗೆ ತುಂಬಾ ವಯಸ್ಸಾಗಿದೆ, ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಆರೋಗ್ಯ ಸಹಕರಿಸುತ್ತಿಲ್ಲ: ಹೊಸ ಪೀಳಿಗೆಯಿಂದ ವರ್ಚಸ್ಸಿಗೆ ಧಕ್ಕೆ!

ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರಿಗೆ ತುಂಬಾ ವಯಸ್ಸಾಗಿದೆ. ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಆರೋಗ್ಯ ಸಹಕರಿಸುತ್ತಿಲ್ಲ ಎಂದು ಕೇಂದ್ರ ಇಂಧನ ಮತ್ತು ಭಾರಿ ಕೈಗಾರಿಕೆ ಖಾತೆ ರಾಜ್ಯ ಸಚಿವ ಕೃಷ್ಣಪಾಲ್ ಗುರ್ಜರ್ ಹೇಳಿದ್ದಾರೆ
ಎಚ್.ಡಿ ದೇವೇಗೌಡ
ಎಚ್.ಡಿ ದೇವೇಗೌಡ

ಹಾಸನ: ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡರಿಗೆ ತುಂಬಾ ವಯಸ್ಸಾಗಿದೆ. ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಆರೋಗ್ಯ ಸಹಕರಿಸುತ್ತಿಲ್ಲ ಎಂದು ಕೇಂದ್ರ ಇಂಧನ ಮತ್ತು ಭಾರಿ ಕೈಗಾರಿಕೆ ಖಾತೆ ರಾಜ್ಯ ಸಚಿವ ಕೃಷ್ಣಪಾಲ್ ಗುರ್ಜರ್ ಹೇಳಿದ್ದಾರೆ

ಹಾಸನದಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಜೆಡಿಎಸ್ ಪ್ರಮುಖ ಪಕ್ಷ. ದೇವೇಗೌಡರು ಉತ್ತಮ ಆಡಳಿತ ನೀಡಿದ್ದಾರೆ.  ಅವರ ಬಗ್ಗೆ ಜನರಿಗೆ ವಿಶ್ವಾಸವಿದೆ, ಆದರೆ, ಅವರ ಮುಂದಿನ ಪೀಳಿಗೆಯವರು ಅವರ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ’ ಎಂದರು.

‘ದೇವೇಗೌಡರ ಬಗ್ಗೆ ಮಾತನಾಡುವುದಾದರೆ, ನಾನು ಹರಿಯಾಣ ಉದಾಹರಣೆ ತೆಗೆದುಕೊಳ್ಳುತ್ತೇನೆ. ದೇವಿಲಾಲ್ ಅವರ ಬಗ್ಗೆ ಜನರಲ್ಲಿ ವಿಶ್ವಾಸವಿತ್ತು. ಅವರ ಮುಂದಿನ ಪೀಳಿಗೆ ಆ ವಿಶ್ವಾಸ ಕಳೆದಕೊಂಡಿತು. ದೇವೇಗೌಡರ ವಿಷಯದಲ್ಲೂ ಅದೇ ಅಗಿದೆ’ ಎಂದರು. ದೇವೇಗೌಡರ ನಂತರ ಹೊಸ ತಲೆಮಾರಿನವರು ಅವಕ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com