ಸಮಾಜದಲ್ಲಿ ಶಾಂತಿ ನೆಮ್ಮದಿ ಬೇಕೆಂದು ಕೇಳುವವರು ಮುಖ್ಯಮಂತ್ರಿ ಹಾಗು ಬಿಜೆಪಿ ನಾಯಕರನ್ನು ಪ್ರಶ್ನಿಸಬೇಕು: ಡಿ ಕೆ ಶಿವಕುಮಾರ್

ಕೆರೂರು ಪಟ್ಟಣದಲ್ಲಿ ಹಿಂಸಾಚಾರದಲ್ಲಿ ಗಾಯಗೊಂಡಿದ್ದವರ ಕುಟುಂಬಸ್ಥರಿಗೆ ಪರಿಹಾರ ನೀಡಲು ಇಂದು ಸಿದ್ದರಾಮಯ್ಯನವರು ಹೋಗಿದ್ದಾಗ ಮುಸ್ಲಿಂ ಮಹಿಳೆ ಕೊಟ್ಟ ಹಣವನ್ನು ತೆಗೆದುಕೊಳ್ಳದೆ ಕಾರಿನತ್ತ ವಾಪಾಸ್ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್

ಮೈಸೂರು: ಬಾದಾಮಿ ತಾಲ್ಲೂಕಿನ ಕೆರೂರು ಪಟ್ಟಣದಲ್ಲಿ ಇಂದು ಸಿದ್ದರಾಮಯ್ಯನವರು ಕೆರೂರು ಹಿಂಸಾಚಾರದಲ್ಲಿ ಗಾಯಗೊಂಡಿದ್ದವರ ಕುಟುಂಬಸ್ಥರಿಗೆ ಪರಿಹಾರ ನೀಡಲು ಹೋಗಿದ್ದಾಗ ಮುಸ್ಲಿಂ ಮಹಿಳೆ ಕೊಟ್ಟ ಹಣವನ್ನು ತೆಗೆದುಕೊಳ್ಳದೆ ಕಾರಿನತ್ತ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಆಷಾಢ ಶುಕ್ರವಾರ ಪ್ರಯುಕ್ತ ಮೈಸೂರು ಚಾಮುಂಡೇಶ್ವರಿ ಬೆಟ್ಟಕ್ಕೆ ಕುಟುಂಬ ಸಮೇತ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳನ್ನು ಈ ಬಗ್ಗೆ ಕೇಳಬೇಕು. ಬಿಜೆಪಿ ನಾಯಕರಿಗೆ ಕೇಳಬೇಕು. ಶಾಂತಿ ಕದಲುತ್ತಾರೆ ಅವರಿಗೆ ಈ ಪ್ರಶ್ನೆ ಕೇಳಬೇಕು. ನಾವು ಕುವೆಂಪುರವರು ಹೇಳಿದಂತೆ ಸರ್ವಜನಾಂಗದ ಶಾಂತಿಯ ತೋಟವನ್ನು ಉಳಿಸಿ ಬೆಳೆಸಬೇಕು ಎಂದರು.

ಈ ಸಮಾಜದಲ್ಲಿ ಎಲ್ಲರೂ ಬದುಕಬೇಕು. ಯಾರೂ ಅರ್ಜಿ ಹಾಕಿಕೊಂಡು ಇದೇ ಜಾತಿ, ಧರ್ಮದಲ್ಲಿ ಹುಟ್ಟಬೇಕೆಂದು ಹುಟ್ಟಿರುವುದಲ್ಲ. ಇದೆಲ್ಲ ದೇವರ, ತಂದೆತಾಯಿ ಪ್ರೇರೇಪಣೆ, ಇಚ್ಛೆ. ಜನರು ನೆಮ್ಮದಿ, ಶಾಂತಿ, ರಕ್ಷಣೆ ಕೇಳುವುದರಲ್ಲಿ ತಪ್ಪಿಲ್ಲ. ಅದು ರಾಜ್ಯದ ನಾಯಕರಾಗಿದ್ದವರು, ಪಕ್ಷದ ನಾಯಕರಾಗಿದ್ದವರು, ಸರ್ಕಾರದಲ್ಲಿ ಎಲ್ಲರನ್ನೂ ರಕ್ಷಣೆ ಮಾಡುತ್ತೇನೆಂದು ಸಂವಿಧಾನಬದ್ಧವಾಗಿ ಪ್ರಮಾಣವಚನ ಸ್ವೀಕರಿಸಿದವರು ಮಾಡಬೇಕಾಗುತ್ತದೆ. ಅಧಿಕಾರ ಹೊಂದಿರುವವರು ಈ ಬಗ್ಗೆ ಕಾಳಜಿವಹಿಸಲಿ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com