ಬಿಜೆಪಿಯ ನಾಯಕರು 3 ತಲೆಮಾರುಗಳಿಂದ ಆಸ್ತಿ ಮಾಡಿದ್ದಾರೆ; ಪರ್ಯಾಯ ಹಿಂದೂ ಪಕ್ಷ ಹುಟ್ಟುಹಾಕಲು ನೀವೇ ಕಾರಣರಾಗುತ್ತೀರಿ: ಮುತಾಲಿಕ್
ಪ್ರವೀಣ್ ಹತ್ಯೆ ಹಿನ್ನೆಲೆ ಪ್ರಚೋದನಾಕಾರಿ ಹೇಳಿಕೆ ನೀಡುತ್ತಾರೆ ಎನ್ನುವ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಮೋದ್ ಮುತಾಲಿಕ್ ಬರದಂತೆ ನಿರ್ಬಂಧ ಹೇರಲಾಗಿತ್ತು
Published: 30th July 2022 10:18 AM | Last Updated: 30th July 2022 01:12 PM | A+A A-

ಪ್ರಮೋದ್ ಮುತಾಲಿಕ್
ಉಡುಪಿ: ಪ್ರವೀಣ್ ಹತ್ಯೆ ಹಿನ್ನೆಲೆ ಪ್ರಚೋದನಾಕಾರಿ ಹೇಳಿಕೆ ನೀಡುತ್ತಾರೆ ಎನ್ನುವ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಮೋದ್ ಮುತಾಲಿಕ್ ಬರದಂತೆ ನಿರ್ಬಂಧ ಹೇರಲಾಗಿತ್ತು. ಆದರೆ ಪ್ರವೇಶ ಗಡಿಭಾಗದಲ್ಲೇ ಕುಳಿತು ಮುತಾಲಿಕ್ ಪ್ರವೇಶ ನಿರ್ಬಂಧವನ್ನು ವಿರೋಧಿಸಿದ್ದಾರೆ.
ಜಿಲ್ಲೆಗೆ ಪ್ರಮೋದ್ ಮುತಾಲಿಕ್ ಪ್ರವೇಶ ಮಾಡದಂತೆ ಸೂಚನೆ ನೀಡಿದ್ದರು. ಸುಳ್ಯ ತಾಲೂಕಿನ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಮನೆಗೆ ಹೊರಟಿದ್ದ ಅವರನ್ನು ಉಡುಪಿ-ಮಂಗಳೂರು ಗಡಿಭಾಗದ ಹೆಜಮಾಡಿಯಲ್ಲಿ ಮಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ನೀವು ಮುತಾಲಿಕ್‌ನನ್ನು ಬ್ಯಾನ್ ಮಾಡುತ್ತಿಲ್ಲ. ಹಿಂದುತ್ವವನ್ನು ಬ್ಯಾನ್ ಮಾಡುತ್ತಿದ್ದೀರಿ. ಹಿಂದೂ ವಿರೋಧಿ ಕಾಂಗ್ರೆಸ್ ಬ್ಯಾನ್ ಮಾಡಿದ್ದರೆ ಒಪ್ಪಿಕೊಳ್ಳಬಹುದಿತ್ತು. ಬಿಜೆಪಿಯವರು ಹಿಂದೂ ವಿರೋಧಿಗಳಾಗಿದ್ದಾರೆ. ನೂರಾರು ಜನ ರಾಜೀನಾಮೆ ಕೊಟ್ಟು ನಿಮ್ಮ ಮುಖಕ್ಕೆ ಉಗಿದಿದ್ದಾರೆ. ನಾನು ಯಾವುದೇ ಸಮಾವೇಶ ಸಭೆಗೆ ಹೋಗುತ್ತಿಲ್ಲ. ಸಾಂತ್ವನ ಹೇಳಲು ಹೋಗುತ್ತಿದ್ದೇನೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ನೀವು ಅಧಿಕಾರದಲ್ಲಿರೋಕೆ ನಾಲಾಯಕ್; ಪ್ರಮೋದ್ ಮುತಾಲಿಕ್ ಆಕ್ರೋಶ
ಇದಕ್ಕೂ ಮೊದಲು ಉಡುಪಿಯಲ್ಲಿ ಮಾತನಾಡಿದ ಮುತಾಲಿಕ್, ಬಿಜೆಪಿಯ ನಾಯಕರು ಮೂರು ತಲೆಮಾರುಗಳಿಂದ ಆಸ್ತಿ ಮಾಡಿದ್ದಾರೆ. ಈಗ ರಾಜೀನಾಮೆ ನೀಡುತ್ತಿರುವವರು ನಿಜವಾದ ಹಿಂದೂ ವಿಚಾರವಾದಿಗಳು. ಈ ಸೂಕ್ಷ್ಮ ಕಾಲದಲ್ಲಿ ಯಾವುದೇ ಕ್ರಿಯೆ-ಪ್ರತಿಕ್ರಿಯೆ ವಿಧಾನ ಇರಬಾರದು. ಎಲ್ಲ ಸಮುದಾಯದ ಮುಖಂಡರು ಒಟ್ಟಾಗಿ ಕುಳಿತು ಶಾಂತಿ ಮಾತುಕತೆ ನಡೆಸಬೇಕು ಎಂದರು.