'ರಾಜಕೀಯ ಧರ್ಮ ಪಾಲನೆ ಮಾಡಿ': ಬೊಮ್ಮಾಯಿ ಸರ್ಕಾರಕ್ಕೆ ಮಲ್ಲಿಕಾರ್ಜುನ್ ಖರ್ಗೆ ಉಪದೇಶ

ಮಂಗಳೂರು ಹತ್ಯೆಗಳ ಸರಮಾಲೆ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿನ ರಾಜ್ಯ ಸರಕಾರದ ವೈಫಲ್ಯದ ಬಗ್ಗೆ ಕಾಂಗ್ರೆಸ್ನ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲ್ಲಿಕಾರ್ಜುನ್ ಖರ್ಗೆ
ಮಲ್ಲಿಕಾರ್ಜುನ್ ಖರ್ಗೆ

ಬೆಂಗಳೂರು: ಮಂಗಳೂರು ಹತ್ಯೆಗಳ ಸರಮಾಲೆ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿನ ರಾಜ್ಯ ಸರಕಾರದ ವೈಫಲ್ಯದ ಬಗ್ಗೆ ಕಾಂಗ್ರೆಸ್ನ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಚನ್ನಾಗಿದ್ರೆ ರಾಜ್ಯ ಅಭಿವೃದ್ಧಿ ಆಗತ್ತೆ. ವಿದ್ಯಾರ್ಥಿಗಳು ನಿರಾಳ ಮನಸ್ಸಿನಿಂದ ಇರ್ತಾರೆ. ನಮ್ಮ ಭಾಗದ ಅಭಿವೃದ್ಧಿ ಆಗಬೇಕು ಅಂದರೆ ಕಾನೂನು ಸುವ್ಯವಸ್ಥೆ ಸರಿ ಇರಬೇಕು. ನಾವಿಲ್ಲಿ ಕಾನೂನಿನ ವ್ಯವಸ್ಥೆ ಸರಿಯಾಗಿ ಇಲ್ಲದೆ ಹೋದರೆ ಕರ್ನಾಟಕ್ಕೆ ಮಾರಕ. ಈಗಾಗಲೇ ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ.

ಸರ್ಕಾರ ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಹಿಂದೂ ಮುಸ್ಲಿಂ ಯಾರೇ ಇರಲಿ ಸರ್ಕಾರ ನಿಷ್ಪಕ್ಷಪಾತವಾಗಿ ನೋಡಬೇಕು. ಒಬ್ಬರ ಮನೆಗೆ ಹೋಗೋದು ಇನ್ನೊಬ್ಬರ ಮನೆಗೆ ಹೋಗದೇ ಇರೋದು. ಏನಿದು? ಒಬ್ರಿಗೆ ರಕ್ಷಣೆ ಕೊಡ್ತೀರಿ ಒಬ್ಬರಿಗೆ ಪರಿಹಾರ ಕೊಡ್ತೀರಿ. ಇನ್ನೊಬ್ಬರಿಗೆ ಪರಿಹಾರವೂ ಇಲ್ಲ ಸಾಂತ್ವನವೂ ಇಲ್ಲ ಎಂದು ಸಿಎಂ ಬೊಮ್ಮಾಯಿ ನಡೆಗೆ ಖರ್ಗೆ ಕಿಡಿಕಾರಿದರು.

ಇದೊಂದು ನಿಷ್ಪಕ್ಷಪಾತ ಸರ್ಕಾರ ಅಂತ ಅನಿಸುತ್ತಿಲ್ಲ ಎಂದು ಹೇಳಿದ ಅವರು, ರಾಜಕೀಯ ಧರ್ಮ ಪಾಲನೆ ಮಾಡಬೇಕು. ಸಂದರ್ಭ ಬಂದರೆ ಸಂಸತ್ ನಲ್ಲಿ ವಿಷಯ ಪ್ರಸ್ತಾಪ ಮಾಡೋಣ. ಸರ್ಕಾರ ಒಂದಲ್ಲ ಒಂದು ವಿಷಯ ತಂದು ಸಂಸತ್ ನಲ್ಲಿ ಗದ್ದಲ ಮಾಡ್ತಿದ್ದಾರೆ. ರಾಷ್ಟ್ರದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದಕ್ಕೆ ಕೇಂದ್ರ ಸರ್ಕಾರ ಅವಕಾಶ ಕೊಡ್ತಿಲ್ಲ. ಗಂಭೀರ ಚರ್ಚೆಗೆ ಅವಕಾಶ ಕೊಡದೇ ಇರುವುದು ಬಹಳ ನೋವಾಗ್ತಾ ಇದೆ. ಈ ರೀತಿಯಾಗಿ ಹಠಮಾರಿತನ ಧೋರಣೆ ನಾನು ನೋಡಿಲ್ಲ ಎಂದರು.

ಇನ್ನು ಸಿದ್ದರಾಮೋತ್ಸವ ವಿಚಾರ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ, ಆ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com