2023 ರಾಜ್ಯ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ: ವಾರ್ ರೂಮ್ ಸ್ಥಾಪಿಸಲು ಕಾಂಗ್ರೆಸ್ ಚಿಂತನೆ
2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಚಾರಕ್ಕೆ ಸಮನ್ವಯತೆ ಸಾಧಿಸಲು ರಾಜ್ಯ ಮಟ್ಟದ ವಾರ್ ರೂಂ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಹೇಳಿದ್ದಾರೆ.
Published: 03rd June 2022 08:20 AM | Last Updated: 03rd June 2022 01:10 PM | A+A A-

ಬೆಂಗಳೂರು ಹೊರವಲಯದ ದೇವನಹಳ್ಳಿಯ ಖಾಸಗಿ ರೆಸಾರ್ಟ್ನಲ್ಲಿ ಗುರುವಾರ ನಡೆದ ಪಕ್ಷದ ‘ನವ ಸಂಕಲ್ಪ ಶಿಬಿರ’ದಲ್ಲಿ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.
ಬೆಂಗಳೂರು: 2023ರ ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಚಾರಕ್ಕೆ ಸಮನ್ವಯತೆ ಸಾಧಿಸಲು ರಾಜ್ಯ ಮಟ್ಟದ ವಾರ್ ರೂಂ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಹೇಳಿದ್ದಾರೆ.
ದೇವನಹಳ್ಳಿಯ ರೆಸಾರ್ಟ್ನಲ್ಲಿ ಗುರುವಾರ ಆರಂಭವಾದ ರಾಜ್ಯ ಕಾಂಗ್ರೆಸ್ನ 'ನವ ಸಂಕಲ್ಪ ಶಿಬಿರ'ದ ಎರಡು ದಿನಗಳ ಚಿಂತನ ಮಂಥನದಲ್ಲಿ ಮಾತನಾಡಿದ ಅವರು, ಚುನಾವಣೆಗೆ ಪಕ್ಷದ ಪ್ರಚಾರಕ್ಕೆ ಸಮನ್ವಯತೆ ಸಾಧಿಸಲು ರಾಜ್ಯಮಟ್ಟದ ವಾರ್ ರೂಂ ಸ್ಥಾಪಿಸಲು ನಿರ್ಧರಿಸಲಾಗಿದೆ. 20 ದಿನಗಳಲ್ಲಿ ಈ ವಾರ್ ರೂಂಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: 'ರೈತ ಮುಖಂಡ ನಂಜುಂಡಸ್ವಾಮಿ ಬದುಕಿದ್ದರೆ ಹಸಿರು ಶಾಲಿನಲ್ಲೇ ಮಜಾವಾದಿ ಸಿದ್ದರಾಮಯ್ಯಗೆ ಕಪಾಳಮೋಕ್ಷ ಮಾಡಿರುತ್ತಿದ್ದರು'
ರಾಜ್ಯದಲ್ಲಿ ಎಂಎಲ್ಸಿ ಮತ್ತು ರಾಜ್ಯಸಭಾ ಚುನಾವಣೆಗೆ ಪಕ್ಷದ ಇತ್ತೀಚಿನ ಆಯ್ಕೆಗಳ ಬಗ್ಗೆ ಕೆಲ ನಾಯಕರು ಅತೃಪ್ತರಾಗಿದ್ದಾರೆ, ಅಂತಹ ನಿರಾಶೆಗಳು ಭಿನ್ನಾಭಿಪ್ರಾಯಗಳಾಗಿ ಬದಲಾಗಬಾರದು. ಶಿಬಿರದಲ್ಲಿ ಅಂಗೀಕರಿಸಲಾದ ನಿರ್ಣಯಗಳು ಕಾಂಗ್ರೆಸ್ ಅಧಿಕಾರಕ್ಕೆ ಮರಳಲು ದಾರಿ ಮಾಡಿಕೊಡುತ್ತವೆ ಎಂದು ತಿಳಿಸಿದರು.
ಕಾಂಗ್ರೆಸ್ನಿಂದ ಮಾತ್ರ ರಾಜ್ಯದ ಕೀರ್ತಿಯನ್ನು ಮರುಸ್ಥಾಪಿಸಲು ಸಾಧ್ಯ. ಬೊಮ್ಮಾಯಿ ಸರ್ಕಾರ ರಾಜ್ಯದ ಜನತೆಯ ಡಿಎನ್ಎಯಲ್ಲಿರುವ ಪ್ರಗತಿ, ಶಾಂತಿ ಮತ್ತು ಸಮೃದ್ಧಿಯನ್ನು ಹಾಳು ಮಾಡುವುದರ ಜೊತೆಗೆ ಉದ್ಯೋಗಕ್ಕೆ ಕಡಿವಾಣ ಹಾಕಿ ಉದ್ಯೋಗಗಳ ಮಾರಾಟಕ್ಕೆ ಪ್ರೋತ್ಸಾಹಿಸಿದೆ ಎಂದು ಸಿಎಂ ಬೊಮ್ಮಾಯಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಳಿಕ ಮಾತನಾಡಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಸ್ವಾರ್ಥಕ್ಕಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿಲ್ಲ. ಬಿಜೆಪಿಯಿಂದ ಜನರನ್ನು ರಕ್ಷಿಸಲು ಬರುತ್ತಿದೆ ಎಂದರು. ಇದೇ ವೇಳೆ ಬೆಲೆ ಏರಿಕೆ ಹಾಗೂ ಪಠ್ಯಪುಸ್ತಕಗಳಲ್ಲಿ ಕೇಸರೀಕರಣ ಮಾಡುತ್ತಿರುವ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಮತ್ತೆ ಅರಳುತ್ತಾ ಕಾಂಗ್ರೆಸ್-ಜೆಡಿಎಸ್ ನಂಟು? ರಾಜ್ಯಸಭಾ ಚುನಾವಣೆ ಸ್ಪರ್ಧೆಯಿಂದ ಕಾಂಗ್ರೆಸ್ ನ ನಾಲ್ಕನೇ ಅಭ್ಯರ್ಥಿ ಹಿಂದಕ್ಕೆ?
ಶಿಬಿರದ ಬಳಿಕ ಡಿಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರು ಇದೇ ಕಾರಿನಲ್ಲಿ ಅಜ್ಞಾತ ಸ್ಥಳಕ್ಕೆ ತೆರಳಿದ್ದರು ಎಂದು ಹೇಳಲಾಗುತ್ತಿದ್ದು, ನಾಯಕರಿಬ್ಬರು ರಾಜ್ಯಸಭಾ ಚುನಾವಣೆ ಕುರಿತು ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ.
ರಾಜ್ಯಸಭೆ ಚುನಾವಣೆಯ ನಾಲ್ಕನೇ ಸ್ಥಾನವು ಮೂರು ಪ್ರಮುಖ ರಾಜಕೀಯ ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸಿದ್ದು, ಹಲವು ಊಹಾಪೋಹಗಳಿಗೆ ಕಾರಣವಾಗಿದೆ.