ರಾಜ್ಯದಲ್ಲಿ ನೆಲೆ ವಿಸ್ತರಿಸಲು ಜೆಡಿಎಸ್- ಕಾಂಗ್ರೆಸ್ ಘಟಾನುಘಟಿ ನಾಯಕರಿಗೆ ಎಎಪಿ ಗಾಳ: ಲಿಸ್ಟ್ ನಲ್ಲಿ ಕಿಮ್ಮನೆ, ವಿಆರ್ ಸುದರ್ಶನ್, ವೈಎಸ್ ವಿ ದತ್ತ!
2023ರ ವಿಧಾನಸಭೆ ಚುನಾವಣೆಗೆ ಪೂರ್ವಭಾವಿಯಾಗಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ನ ಹಿರಿಯ ನಾಯಕರನ್ನು ಸಂಪರ್ಕಿಸುವ ಮೂಲಕ ಎಎಪಿ ತನ್ನ ನೆಲೆಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ.
Published: 07th June 2022 11:24 AM | Last Updated: 07th June 2022 01:41 PM | A+A A-

ನೆಲೆ ವಿಸ್ತರಿಸಲು ಘಟಾನುಘಟಿ ನಾಯಕರಿಗೆ ಎಎಪಿ ಗಾಳ
ಬೆಂಗಳೂರು: 2023ರ ವಿಧಾನಸಭೆ ಚುನಾವಣೆಗೆ ಪೂರ್ವಭಾವಿಯಾಗಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ನ ಹಿರಿಯ ನಾಯಕರನ್ನು ಸಂಪರ್ಕಿಸುವ ಮೂಲಕ ಎಎಪಿ ತನ್ನ ನೆಲೆಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ.
ಇತ್ತೀಚೆಗೆ ಕಾಂಗ್ರೆಸ್ ತೊರೆದ ನಟ-ರಾಜಕಾರಣಿ ಮುಖ್ಯಮಂತ್ರಿ ಚಂದ್ರು ಬೆಂಗಳೂರಿನಲ್ಲಿ ಮಂಗಳವಾರ ಎಎಪಿ ಸೇರಲಿದ್ದಾರೆ, ಆದರೆ ಮಾಜಿ ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಅವರು ಜೂನ್ 15 ನಂತರ ತಮ್ಮ ನಿರ್ಧಾರ ತಿಳಿಸುವ ಸಾಧ್ಯತೆಯಿದೆ.
ಈ ಸಂಬಂಧ ಭಾನುವಾರ ಎಎಪಿ ರಾಜ್ಯಾಧ್ಯಕ್ಷರಾಗಿ ಪುನರಾಯ್ಕೆಯಾದ ಪೃಥ್ವಿರೆಡ್ಡಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ್ದಾರೆ. ಮಾಜಿ ವಿಧಾನ ಪರಿಷತ್ ಅಧ್ಯಕ್ಷ ವಿಆರ್ ಸುದರ್ಶನ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಹಿರಿಯ ನಾಯಕ ಬಿಎಲ್ ಶಂಕರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರನ್ನು ಎಎಪಿ ಸಂಪರ್ಕಿಸಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಕಾಂಗ್ರೆಸ್ ತೊರೆದಿದ್ದ ಚಿತ್ರನಟ ಮುಖ್ಯಮಂತ್ರಿ ಚಂದ್ರು ಎಎಪಿ ಸೇರ್ಪಡೆ
ಕರ್ನಾಟಕ ರಾಜಕೀಯದಲ್ಲಿ ಬದಲಾವಣೆ ತರಬಹುದು ಎಂದು ಭಾವಿಸಿದ್ದೇವೆ, ಹೀಗಾಗಿ ನಾವು ಬದಲಾವಣೆ ತರಬಲ್ಲ ನಾಯಕರನ್ನು ಹುಡುಕುತ್ತಿದ್ದೇವೆಯೇ ಹೊರತ್ತು ತೋಳ್ಬಲ ಇರುವ ವ್ಯಕ್ತಿಗಳು ನಮಗೆ ಬೇಕಿಲ್ಲ ಎಂದು ಹೇಳಿದ್ದಾರೆ. ಈ ನಾಯಕರು ಬಹುಕಾಲದಿಂದ ಪಕ್ಷದೊಂದಿಗೆ ಸಂಬಂಧ ಹೊಂದಿದ್ದಾರೆ, ಅವರು ತಮ್ಮ ಅನುಯಾಯಿಗಳೊಂದಿಗೆ ಚರ್ಚಿಸಿ ನಂತರ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಜೆಡಿಎಸ್ ಮಾಜಿ ಶಾಸಕ ವೈಎಸ್ವಿ ದತ್ತ ಮತ್ತು ಶಾಸಕ ಎಟಿ ರಾಮಸ್ವಾಮಿ ಅವರನ್ನೂ ಆಪ್ ಸಂಪರ್ಕಿಸಿದೆ. ಮಾಜಿ ಸ್ಪೀಕರ್ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಕೆಆರ್ ರಮೇಶ್ ಕುಮಾರ್ ಅವರನ್ನು ಎಎಪಿ ಸಂಪರ್ಕಿಸಿದೆ. ರಮೇಶ್ ಕುಮಾರ್ ನಮ್ಮ ಕಚೇರಿಗೆ ಭೇಟಿ ನೀಡಿದ್ದರು, ದೆಹಲಿಯಲ್ಲಿ ನಮ್ಮ ಸರ್ಕಾರದ ಒಳ್ಳೆಯ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಆದರೆ ಅವರು ನಮ್ಮ ಪಕ್ಷದ ಕಡೆಗೆ ಒಲವು ತೋರಿಲ್ಲ ಎಂದು ಅವರು ಹೇಳಿದರು.