ಬಿಜೆಪಿಯ ಬಿ-ಟೀಂ ಯಾವುದು ಎಂದು ಸಾಯಂಕಾಲ ಗೊತ್ತಾಗುತ್ತದೆ; ನಾಳೆಯಿಂದ ಹೊಸ ರಾಜಕೀಯ ಶಕೆ: ಹೆಚ್ ಡಿ ಕುಮಾರಸ್ವಾಮಿ

ಬಿಜೆಪಿಯ ನಿಜವಾದ ಬಿ ಟೀಂ ಯಾವುದು ಎಂದು ಈ ಚುನಾವಣೆಯ ನಂತರ ಜಗಜ್ಜಾಹೀರು ಆಗುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ ಎಂದು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

Published: 10th June 2022 10:36 AM  |   Last Updated: 10th June 2022 01:04 PM   |  A+A-


H D Kumaraswamy speaks with media members

ವಿಧಾನಸೌಧ ಬಳಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ

Online Desk

ಬೆಂಗಳೂರು: ಜೆಡಿಎಸ್ ನ 32 ಶಾಸಕರ ಮತಗಳಲ್ಲಿ 31 ಮತಗಳು ನಮ್ಮ ಪಕ್ಷದ ಅಭ್ಯರ್ಥಿ ಕುಪೇಂದ್ರ ರೆಡ್ಡಿಯವರಿಗೆ ಲಭ್ಯವಾಗಲಿದೆ ಎಂಬ ವಿಶ್ವಾಸವಿದೆ. ಗುಬ್ಬಿ ಶಾಸಕ ಶ್ರೀನಿವಾಸ್ ಗೌಡ ಅವರು ನಿನ್ನೆ ರಾತ್ರಿ ಕಾಂಗ್ರೆಸ್ ನ ರಮೇಶ್ ಕುಮಾರ್ ಅವರ ಜೊತೆ ಡಿನ್ನರ್ ಪಾರ್ಟಿ ಮಾಡಿ ಬ್ರೈನ್ ವಾಶ್ ಮಾಡಿದ್ದಾರೆ, ಇದಕ್ಕೆ ಅವರು ಮುಂದೆ ಪ್ರಾಯಶ್ತಿತ ಪಡುತ್ತಾರೆ. ಕೋಲಾರ ಜಿಲ್ಲೆ ಜನತೆ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

ಇಂದು ಜೆಡಿಎಸ್ ಶಾಸಕರೊಂದಿಗೆ ಬಸ್ಸಿನಲ್ಲಿ ವಿಧಾನಸೌಧಕ್ಕೆ ರಾಜ್ಯಸಭಾ ಚುನಾವಣೆಯ ಮತ ಚಲಾಯಿಸಲು ಆಗಮಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಡ್ಡ ಮತದಾನ ಮಾಡಿದರೆ ಪಕ್ಷದಿಂದ ಅನರ್ಹಗೊಳಿಸಿ ಏನೂ ಪ್ರಯೋಜನವಾಗುವುದಿಲ್ಲ, ಹೆಸರಿಗೆ ಪಕ್ಷದಿಂದ ಅನರ್ಹತೆ, ಪಕ್ಷಾಂತರ ನಿಷೇಧ ಕಾಯ್ದೆ ಇಟ್ಟಿದ್ದಾರೆ. ಯಾವುದೇ ರೀತಿಯಲ್ಲಿ ಉಪಯೋಗ ಬರುವುದಿಲ್ಲ, ಎರಡು ರಾಷ್ಟ್ರೀಯ ಪಕ್ಷಗಳು ತಮಗೆ ಬೇಕಾದಾಗ ಬೇಕಾದ ರೀತಿಯಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಬಳಸಿಕೊಳ್ಳುತ್ತಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಜೆಡಿಎಸ್ ಶಾಸಕರಿಗೆ ಸಿದ್ದರಾಮಯ್ಯ ಪತ್ರ; ಎಚ್ ಡಿಕೆ ಆಕ್ರೋಶ

ನಿಜವಾದ ಬಿ ಟೀಂ ಬಯಲಾಗಲಿದೆ: ಬಿಜೆಪಿಯ ನಿಜವಾದ ಬಿ ಟೀಂ ಯಾವುದು ಎಂದು ಈ ಚುನಾವಣೆಯ ನಂತರ ಜಗಜ್ಜಾಹೀರು ಆಗುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ. ಈಗಾಗಲೇ ಈಶ್ವರಪ್ಪನವರೇ ನಮ್ಮ ಮೂರನೇ ಅಭ್ಯರ್ಥಿ ಗೆಲುವಿಗೆ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನವರು ಕಾರಣರಾಗುತ್ತಾರೆ ಎಂದು ಹೇಳಿದ್ದಾರೆ. ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿಯವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಗೆ ಹೋಗಿ ಈಗಾಗಲೇ ಅಭಿನಂದನೆಯನ್ನೂ ಸಲ್ಲಿಸಿ ಹೋಗಿರುವುದು ಎಲ್ಲರಿಗೂ ಗೊತ್ತಾಗಿದೆ. ಸಿದ್ದರಾಮಯ್ಯನವರ ನಿಜವಾದ ಬಣ್ಣ ಕಳಚಿದೆ ಎಂದರು.

ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಹಗ್ಗಜಗ್ಗಾಟ; ಬಗ್ಗದ ಜೆಡಿಎಸ್, ಪಟ್ಟು ಬಿಡದ ಕಾಂಗ್ರೆಸ್

ವಿಧಾನಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಹಾಕಿದರೆ, ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಹಾಕಿರುವುದು ಬಿಜೆಪಿಯನ್ನು ಗೆಲ್ಲಿಸಲು ಎಂದು ನಮ್ಮ ಜೆಡಿಎಸ್ ಮೇಲೆ ಇಷ್ಟುದಿನ ಕಾಂಗ್ರೆಸ್ ನವರು, ಸಿದ್ದರಾಮಯ್ಯನವರು ಆರೋಪ ಮಾಡಿಕೊಂಡು ಬರುತ್ತಿದ್ದರು. ಇವತ್ತು ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಎರಡನೇ ಅಭ್ಯರ್ಥಿಯನ್ನಾಗಿ ಹಾಕಿ ಅವರು ತೋಡಿದ ಖೆಡ್ಡಾಕ್ಕೆ ಅವರೇ ಬಿದ್ದಿದ್ದಾರೆ ಎಂದು ಟೀಕಿಸಿದರು. 


Stay up to date on all the latest ರಾಜಕೀಯ news
Poll
Nitish_Kumar1

2024 ರ ಲೋಕಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಸಂಯುಕ್ತ ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಬಹುದೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp