
ಸಿಟಿ ರವಿ
ಬೆಂಗಳೂರು: ಮೇವು ತಿಂದವರು ಜೈಲಿನಲ್ಲಿದ್ದಾರೆ. ಈಗ ಪೇಪರ್ ತಿಂದವರು ಜೈಲಿಗೆ ಹೋಗ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಸೆವೆನ್ ಮಿನಿಸ್ಟರ್ ಕ್ವಾಟರ್ಸ್ ನಲ್ಲಿ ಮಾತನಾಡಿದ ಅವರು, ಇ.ಡಿ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡ್ತಾ ಇದೆ. ಕಾಂಗ್ರೆಸ್ ನಾಯಕರು ಸಂವಿಧಾನಕ್ಕಿಂತ ಮೇಲಿನವರಾ? ನಿಮಗೆ ಯಾಕೆ ಭಯ? ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ ಎನ್ನುವಂತೆ ಭ್ರಷ್ಟಾಚಾರ ನಡೆಸಿದವರಿಗೆ ಭ್ರಷ್ಟಾಚಾರ ನಡೆಸುವವರಿಗೆ ಕಾಂಗ್ರೆಸ್ ಬೆಂಬಲ ಕೊಡ್ತಿದೆ ಎಂದು ಆರೋಪಿಸಿದರು.
ಆಡು ಮುಟ್ಟದ ಸೊಪ್ಪಿಲ್ಲ ಕಾಂಗ್ರೆಸ್ ನಡೆಸದಿರುವ ಭ್ರಷ್ಟಾಚಾರ ಇಲ್ಲ ಎಂದು ಆರೋಪ ಮಾಡಿದ ಸಿ ಟಿ ರವಿ, ಇಂಡಿಯನ್ ಆಯಿಲ್ ಸ್ಕ್ಯಾಮ್, 2g, ಆಗಸ್ಟಾ ವೆಸ್ಟ್ ಲ್ಯಾಂಡ್, ಕೆಜಿ ಬೇಸಿನ್ ಹಗರಣ ಹೀಗೆ ಕಾಂಗ್ರೆಸ್ ಭ್ರಷ್ಟಾಚಾರ ಮಾಡಿದೆ. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಸರದಾರ ಆಗಿದೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಪ್ರತಿಭಟನೆ ವೇಳೆ ಹೈಡ್ರಾಮಾ: ಹರಿದ ಅಂಗಿ ಸಮೇತ ಕೆಸಿ ವೇಣುಗೋಪಾಲ್, ಇತರೆ ನಾಯಕರು ಪೊಲೀಸ್ ವಶಕ್ಕೆ!
1937 ರಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಸೇರಿ ನ್ಯಾಷನಲ್ ಹೆರಾಲ್ಡ್ ಸಂಸ್ಥೆ ಹುಟ್ಟು ಹಾಕಿದರು. ನೆಹರುದು 300 ರೂಪಾಯಿ ಶೇರ್ ಇತ್ತು. ಆ ಕಂಪನಿ ದೇಶದಾದ್ಯಂತ ಎರಡು ಸಾವಿರ ಆಸ್ತಿ ಮೌಲ್ಯ ಹೊಂದಿದೆ. ಇನ್ನೊಂದು ಯಂಗ್ ಇಂಡಿಯಾ ಕಂಪನಿ ಸ್ಥಾಪಿಸಿ ಕೇವಲ ಐವತ್ತು ಲಕ್ಷಕ್ಕೆ ಕೊಂಡುಕೊಂಡರು. ಮೂಲ ಷೇರುದಾರರಿಗೆ ಗೊತ್ತಿಲ್ಲದೇ ಹಣ ವರ್ಗಾವಣೆ ಮಾಡಿಕೊಂಡಿದೆ. ಇವರು ಏನೆ ಮಾಡಿದ್ರು ಕೇಳಬಾರದಾ? ಇವರು ದೇಶಕ್ಕಿಂತ ದೊಡ್ಡವರಾ? ಹಾಗೆ ಅದುಕೊಂಡಿದ್ದೆ ದುರಂತ. ಆಲೂನಲ್ಲಿ ಚಿನ್ನ ತೆಗೆಯೋದು ಹೇಗೆ ಅಂತ ರಾಹುಲ್ ಹೇಳಿದ್ರು. ಐವತ್ತು ಲಕ್ಷ ಹಾಕಿ ಸಾವಿರಾರು ಕೋಟಿ ಹಣ ಪಡೆಯೋದು ಹೀಗೆ ಇರಬೇಕು ಎಂದರು.
ಇನ್ನೊಬ್ಬರು ಕೃಷಿ ಮಾಡಿ ಆಸ್ತಿ ಮಾಡಿದವರು( ಡಿಕೆಶಿ). ಅವರ ಹೆಸರು ಬೇಡ. ಅವರು ಬೇಲ್ ಮೇಲೆ ಹೊರಗೆ ಇದ್ದಾರೆ. ರೈತರು ಕಷ್ಟದಲ್ಲಿದ್ದಾಗ ಇವರು ಮಾತ್ರ ಕೃಷಿಯಲ್ಲಿ ಸಾವಿರಾರು ಕೋಟಿ ಹಣ ಮಾಡಿದವರು. ಅವರು ಕಾಂಗ್ರೆಸ್ ನಾಯಕರು ಎಂದು ಡಿಕೆಶಿ ಹೆಸರೇಳದೆ ಆಕ್ರೋಶ ವ್ಯಕ್ತಪಡಿಸಿದರು. ಮೇವು ತಿಂದವರು ಜೈಲಿನಲ್ಲಿ ಇದ್ದಾರೆ. ಈಗ ಪೇಪರ್ ತಿಂದವರು ಜೈಲಿಗೆ ಹೋಗ್ತಾರೆ. ಹಾಗಲಕಾಯಿಗೆ ಬೇವಿನ ಸಾಕ್ಷಿ ಎಂಬಂತೆ. ಭ್ರಷ್ಟಾಚಾರಿಗಳಿಗೆ ಭ್ರಷ್ಟರೇ ಬೆಂಬಲ ಕೊಡ್ತಿದ್ದಾರೆ. ಇವರಿಂದ ಜನರಿಗೆ ಇನ್ನೇನು ಸಂದೇಶ ಹೋಗಲು ಸಾಧ್ಯ..? ಪರೋಕ್ಷವಾಗಿ ಡಿಕೆಶಿಗೆ ಸಿ ಟಿ ರವಿ ಟಾಂಗ್ ಕೊಟ್ಟರು.
ಇದನ್ನೂ ಓದಿ: ರಾಹುಲ್ ಗಾಂಧಿ ಇಡಿ ವಿಚಾರಣೆ: ಬೆಂಗಳೂರಿನಲ್ಲೂ ಕಾಂಗ್ರೆಸ್ ಪ್ರತಿಭಟನೆ; ಇಡಿ ಕಚೇರಿ ಮುಂದೆ ಕಾರ್ಯಕರ್ತರ ಧರಣಿ
ದೆಹಲಿಯಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಓಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ರವಿ, ಮುಖಂಡನೇ ಶಿಖಂಡಿಯಾದರೆ ಹಿಂಬಾಲಕರ ಗತಿ ಏನಯ್ಯ ಎಂಬಂತೆ ಅವರ ನಾಯಕರು ಈ ರೀತಿ ಓಡಿ ಹೋದ್ರೆ ಅವರ ಹಿಂಬಾಲಕರ ಕಥೆ ಏನು ಎಂದು ಸಿಟಿ ರವಿ ವ್ಯಂಗ್ಯ ಮಾಡಿದರು.