ಪ್ರತಿಭಟನೆಗಳಿಂದ ಪ್ರಯೋಜನವಿಲ್ಲ, ಕಾಂಗ್ರೆಸ್ಸಿಗರು ಪ್ರದರ್ಶಕತೆ ತೊರೆಯಬೇಕು: ವೀರಪ್ಪ ಮೊಯ್ಲಿ
ಪ್ರತಿಭಟನೆಗಳು, ಘೋಷಣೆ ಪಕ್ಷಕ್ಕೆ ಪ್ರಯೋಜನೆ ತರುವುದಿಲ್ಲ, ಪಕ್ಷ ಕಾರ್ಯಕರ್ತರು ಪ್ರದರ್ಶಕತೆಗಳ ಬಿಟ್ಟು ಬೂತ್ ಮಟ್ಟದಲ್ಲಿ ಶ್ರಮಿಸಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಎಂ.ವೀರಪ್ಪ ಮೊಯ್ಲಿಯವರು ಹೇಳಿದ್ದಾರೆ.
Published: 25th June 2022 11:30 AM | Last Updated: 25th June 2022 02:14 PM | A+A A-

ಪುತ್ತೂರಿನ ಅಮೃತ್ ಗಾರ್ಡನ್ ಸಭಾಂಗಣದಲ್ಲಿ ಶುಕ್ರವಾರ ನಡೆದ ನವ ಸಂಕಲ್ಪ ಶಿಬಿರವನ್ನು ಮಾಜಿ ಸಿಎಂ ವೀರಪ್ಪ ಮೊಯ್ಲಿ ಮತ್ತು ಇತರ ನಾಯಕರು ಉದ್ಘಾಟಿಸಿದರು.
ಉಡುಪಿ: ಪ್ರತಿಭಟನೆಗಳು, ಘೋಷಣೆ ಪಕ್ಷಕ್ಕೆ ಪ್ರಯೋಜನೆ ತರುವುದಿಲ್ಲ, ಪಕ್ಷ ಕಾರ್ಯಕರ್ತರು ಪ್ರದರ್ಶಕತೆಗಳ ಬಿಟ್ಟು ಬೂತ್ ಮಟ್ಟದಲ್ಲಿ ಶ್ರಮಿಸಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಎಂ.ವೀರಪ್ಪ ಮೊಯ್ಲಿಯವರು ಹೇಳಿದ್ದಾರೆ.
ಉಡುಪಿಯಲ್ಲಿ ಶುಕ್ರವಾರ ನಡೆದ ನವ ಸಂಕಲ್ಪ ಶಿಬಿರದಲ್ಲಿ ಮಾತನಾಡಿದ ಮೊಯ್ಲಿ ಅವರು, ರಾಷ್ಟ್ರೀಯ, ರಾಜ್ಯ ಅಥವಾ ಜಿಲ್ಲಾ ಮಟ್ಟದಲ್ಲಿ ಕಾಂಗ್ರೆಸ್ ಘಟಕಗಳು ನಡೆಸುತ್ತಿರುವ ಯಾವುದೇ ಪ್ರತಿಭಟನೆಗಳು ಬಿಜೆಪಿ ಮಣಿಸಲು ಕೆಲಸ ಮಾಡುವುದಿಲ್ಲ. ರ್ಯಾಲಿ ಪ್ರತಿಭಟನೆಗಳು ಪಕ್ಷವನ್ನು ರಕ್ಷಣೆ ಮಾಡುವುದಿಲ್ಲ ಎಂದು ಹೇಳಿದರು.
ಮೊಯ್ಲಿಯವರು ಕಾರ್ಯಕರ್ತರನ್ನು ಟೀಕಿಸುತ್ತಿರುವ ವೇಳೆ ಕೆಲ ನಾಯಕರು ಮಧ್ಯ ಪ್ರವೇಶಿಸಿದ್ದು, ಪಕ್ಷದ ಕಾರ್ಯಕರ್ತರನ್ನು ಟೀಕಿಸುವುದು ಬೇಡ ಎಂದು ಹೇಳುವ ಪ್ರಯತ್ನ ಮಾಡಿದರು.
ಇದನ್ನೂ ಓದಿ: 'ಮೋದಿಯವರು ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು, ಆದರೆ ಆಗ ಯಾವುದೇ ಧರಣಿ, ಪ್ರತಿಭಟನೆ ಮಾಡಿರಲಿಲ್ಲ': ಅಮಿತ್ ಶಾ
ಈ ವೇಳೆ ಮಾತನಾಡಿದ ಮೊಯ್ಲಿ, ಇದರಿಂದಲೇ ನಾವು ಚುನಾವಣೆಯಲ್ಲಿ ಸೋಲುತ್ತೇವೆ. ಈ ರೀತಿಯ ಕಾರ್ಯಾಗಾರದಲ್ಲಿ ವಾಸ್ತವ ವಿಚಾರಗಳನ್ನು ಚರ್ಚಿಸುವುದು ಮುಖ್ಯವಾಗಿದೆ. ಘೋಷಣೆಗಳಿಂದ ಪ್ರತಿಭಟನೆಗಳಿಂದ ಪಕ್ಷ ಕಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದರು.
15-20 ಕಾರ್ಯಕರ್ತರು ಸೈನಿಕರಂತೆ ಬೂತ್ ಕಾಯಬೇಕು...
ಹಿಂದಿನ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸುವಲ್ಲಿ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ವಿಫಲರಾಗಿದ್ದು, ಪ್ರತಿ ಬೂತ್‌ನಲ್ಲಿ ಕನಿಷ್ಠ 15 ರಿಂದ 25 ಕಾರ್ಯಕರ್ತರನ್ನು ಸೈನಿಕರಂತೆ ಕಾಯಲು ನಿಯೋಜಿಸಬೇಕು. ಮತ್ತು ಪಕ್ಷದ ಕಾರ್ಯಕರ್ತರ ನೈತಿಕತೆಯನ್ನು ಹೆಚ್ಚಿಸಲು ಕಾರ್ಯಾಗಾರಗಳನ್ನು ನಡೆಸಬೇಕು ಎಂದರು.
ಜಿಲ್ಲಾ ಮಟ್ಟದ ಶಿಬಿರದಲ್ಲಿ ಪಕ್ಷದ ಆರು ಗುಂಪುಗಳು ಭಾಗವಹಿಸಿದ್ದವು. ಪ್ರತಿ ಬೂತ್ ಅನ್ನು ಸೂಕ್ಷ್ಮವಾಗಿ ನಿರ್ವಹಿಸುವ ಮೂಲಕ ಚುನಾವಣೆ ಎದುರಿಸಬೇಕು. ಪ್ರಾಮಾಣಿಕ ಹಾಗೂ ಕಠಿಣ ಪರಿಶ್ರಮ ಪಡುವ ಪಕ್ಷದ ಕಾರ್ಯಕರ್ತರಿಗೆ ಬೂತ್ ಮಟ್ಟದಲ್ಲಿ ತರಬೇತಿ ನೀಡದಿದ್ದಲ್ಲಿ ಅದು ಚುನಾವಣೆಯ ಸಂದರ್ಭದಲ್ಲಿ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಮಧ್ಯಪ್ರವೇಶ ಬಳಿಕ ಕಾಂಗ್ರೆಸ್ ತೊರೆಯುವ ನಿರ್ಧಾರ ಮುಂದೂಡಿದ ಎಂಆರ್. ಸೀತಾರಾಮ್
ಇದೇ ವೇಳೆ ಚಿಕ್ಕಬಳ್ಳಾಪುರದ ಉದಾಹರಣೆಯನ್ನು ಉಲ್ಲೇಖಿಸಿದ ಮೊಯ್ಲಿ ಅವರು, ಇಲ್ಲಿ ಬೂತ್ ಮಟ್ಟದ ಪಕ್ಷದ ಕಾರ್ಯಕರ್ತರು ಉತ್ತಮ ದೃಷ್ಟಿಕೋನವನ್ನು ಹೊಂದಿದ್ದರು ಎಂದರು.
ಈ ಎಲ್ಲಾ ಅಂಶಗಳ ಮೂಲಕ ಬಿಜೆಪಿಯ ತಂತ್ರಗಳನ್ನು ನಿಲ್ಲಿಸಬಹುದಾಗಿದೆ. ಈ ಹಂತದಲ್ಲಿ ಪಕ್ಷವು ತನ್ನನ್ನು ತಾನು ಮರುಸಂಘಟಿಸುವಲ್ಲಿ ವಿಫಲವಾದರೆ ಪಕ್ಷಕ್ಕೆ ಭವಿಷ್ಯವಿಲ್ಲದಂತಾಗುತ್ತದೆ. ಈಗಿನ ನರೇಂದ್ರ ಮೋದಿ ನೇತೃತ್ವದ ಎನ್'ಡಿಎ ಸರ್ಕಾರವು ಯುಪಿಎ ಸರ್ಕಾರ ಕೆಲವು ಪ್ರಮುಖ ಕಾರ್ಯಕ್ರಮಗಳನ್ನು ಮರುನಾಮಕರಣ ಮಾಡಿರುವುದನ್ನು ಹೊರತುಪಡಿಸಿ ಏನನ್ನೂ ಮಾಡಿಲ್ಲ.
ಇದನ್ನೂ ಓದಿ: ಎಸ್ಎಫ್ಐ ಕಾರ್ಯಕರ್ತರಿಂದ ರಾಹುಲ್ ಗಾಂಧಿ ವಯನಾಡ್ ಕಚೇರಿ ಧ್ವಂಸ; ಇದು ಗೂಂಡಾಗಳ ದಾಳಿ ಎಂದ ಕಾಂಗ್ರೆಸ್
ಕಾಂಗ್ರೆಸ್ ಕಾರ್ಯಕರ್ತರು ತಳಮಟ್ಟದೊಂದಿಗೆ ಸಂಪರ್ಕ ಸಾಧಿಸುವ ಹಾದಿಯಿಂದ ಎಂದಿಗೂ ವಿಚಲಿತರಾಗಬಾರದು. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಕೈಗೊಂಡಿದ್ದ ಉಪಕ್ರಮಗಳು ಯುವ ಜನರಿಗೆ ಉದ್ಯೋಗಗಳನ್ನು ಸೃಷ್ಟಿಸಿದೆ. ಇದರಿಂದ ಗ್ರಾಮೀಣ ಭಾಗದ ಜನರ ಬೆಂಬಲ ಪಡೆದುಕೊಳ್ಳಲು ಯತ್ನಿಸಬೇಕು ಎಂದು ತಿಳಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಮಾತನಾಡಿ, ಉಡುಪಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪಕ್ಷದ ಸದಸ್ಯತ್ವ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಿಲ್ಲ, ಪಕ್ಷದ ಸದಸ್ಯತ್ವ ಹೆಚ್ಚಿಸುವ ಕಾರ್ಯವನ್ನು ಪುನರಾರಂಭಿಸಲು ಇನ್ನೂ ಸಾಕಷ್ಟು ಸಮಯವಿದೆ. ಮೊದಲು ಬ್ಲಾಕ್ ಮಟ್ಟದಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಸಮಿತಿಗಳಿಗೆ ಪದಾಧಿಕಾರಿಗಳ ನೇಮಿಸುವ ತುರ್ತು ಅಗತ್ಯವಿದೆ ಎಂದು ಹೇಳಿದರು.