ಕರ್ನಾಟಕ ವಿಧಾನಸಭಾ ಕ್ಷೇತ್ರಗಳನ್ನು ಬಲಪಡಿಸಲು ರಾಜ್ಯದ 25 ಬಿಜೆಪಿ ಸಂಸದರ ಪಣ!

ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ 8 ತಿಂಗಳು ಸಮಯವಿದ್ಗು, ಈಗಾಗಲೇ ಬಿಜೆಪಿ ತಳಮಟ್ಟದ  ಸಂಘಟನೆ ಆರಂಭಿಸಿದೆ. ಪಕ್ಷ ಸಂಘಟನೆಗಾಗಿ ಬಿಜೆಪಿ ಮತ್ತೊಂದು ತಂತ್ರ ರೂಪಿಸಿದೆ.
ಪಿಸಿ ಮೋಹನ್, ರಾಘವೇಂದ್ರ ಮತ್ತು ರವಿ ಕುಮಾರ್
ಪಿಸಿ ಮೋಹನ್, ರಾಘವೇಂದ್ರ ಮತ್ತು ರವಿ ಕುಮಾರ್

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ 8 ತಿಂಗಳು ಸಮಯವಿದ್ಗು, ಈಗಾಗಲೇ ಬಿಜೆಪಿ ತಳಮಟ್ಟದ  ಸಂಘಟನೆ ಆರಂಭಿಸಿದೆ.

ಪಕ್ಷ ಸಂಘಟನೆಗಾಗಿ ಬಿಜೆಪಿ ಮತ್ತೊಂದು ತಂತ್ರ ರೂಪಿಸಿದೆ. ವಿಧಾನಸಭಾ ಕ್ಷೇತ್ರಗಳನ್ನು ಬಲಪಡಿಸಲು ರಣತಂತ್ರ ಸಿದ್ದಪಡಿಸುತ್ತಿದೆ. ಬಿಜೆಪಿ ತನ್ನ 25 ಸಂಸದರಿಗೆ ತಮ್ಮ ವ್ಯಾಪ್ತಿಗೆ ಬರುವ ಅಸೆಂಬ್ಲಿ ಕ್ಷೇತ್ರಗಳ ಕುರಿತು ಸಮಗ್ರ ಟಿಪ್ಪಣಿಗಳನ್ನು ಮಾಡಲು  ದುರ್ಬಲವಾಗಿರುವ ಕಡೆ ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಸೂಚಿಸಿದೆ.

ಸದ್ಯ ಬಿಜೆಪಿ ಸುಮಾರು 100 ಕ್ಷೇತ್ರಗಳಲ್ಲಿ ಪ್ರಬಲವಾಗಿದೆ. ಉಳಿದ 124 ವಿಧಾನಸಭೆ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸೂಚಿಸಿದೆ, ಕ್ಷೇತ್ರದ ಕೊನೆಯ ಮತದಾರರನ್ನು ತಲುಪುವುದು ಹಾಗೂ ಪಕ್ಷದ ಅಸ್ತಿತ್ವವನ್ನು ಖಚಿತಪಡಿಸಿಕೊಳ್ಳುವುದು ಸಂಸದರ ಕೆಲಸವಾಗಿದೆ.

ಮಂಡ್ಯ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಹಾಸನ, ಮೈಸೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪಕ್ಷವು ಹೆಚ್ಚಿನ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ. ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ.ಮೋಹನ್ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಐದು ಸ್ಥಾನಗಳಿದ್ದು, ನಮ್ಮ ಪಕ್ಷದ ಶಾಸಕರು ಪ್ರತಿನಿಧಿಸದ ಕ್ಷೇತ್ರಗಳಲ್ಲಿ ನಾನು ಕೆಲಸ ಮಾಡಬೇಕಿದೆ. ನಮ್ಮ ಶಾಸಕರಿಲ್ಲದ ಕ್ಷೇತ್ರಗಳಲ್ಲೂ ಬೂತ್ ಮಟ್ಟದಲ್ಲಿ ನಮ್ಮ ಸಂಘಟನೆ ಬಲಿಷ್ಠವಾಗಿದೆ. ನಾವು ಯಾವಾಗ ಬೇಕಾದರೂ ಚುನಾವಣೆಗೆ ಸಿದ್ಧರಿದ್ದೇವೆ. ನಮ್ಮಲ್ಲಿ ಚುನಾಯಿತ ಶಾಸಕರು ಇಲ್ಲದ ಕಡೆ ಸಂಸದರು ಹೆಚ್ಚಿನ ಜವಾಬ್ದಾರಿ ವಹಿಸುತ್ತಿದ್ದಾರೆ. ಪಕ್ಷದ ಎಂಎಲ್‌ಸಿಗಳನ್ನೂ ಕಣಕ್ಕಿಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಪಕ್ಷಕ್ಕೆ ಸಂಸದರು ಇಲ್ಲದ ಬೆಂಗಳೂರು ಗ್ರಾಮಾಂತರ, ಹಾಸನ ಮತ್ತು ಮಂಡ್ಯದಲ್ಲಿ ಪಕ್ಷದ ಪದಾಧಿಕಾರಿಗಳು, ಎಂಎಲ್‌ಸಿಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ‘ಸಂಸದರನ್ನು ಹೆಚ್ಚಿನ ಪ್ರಮಾಣದಲ್ಲಿ ಪಕ್ಷ ಸಂಘಟನೆ ತೊಡಗಿಸಿಕೊಳ್ಳುವ ಆಲೋಚನೆ ಇದ್ದು, ಅದರಿಂದ ಪಕ್ಷಕ್ಕೆ ಲಾಭವಾಗಲಿದೆ’ ಎಂದರು.

ಸಂಸದರಿಗೆ ತಮ್ಮ ವ್ಯಾಪ್ತಿಗೆ ಒಳಪಡುವ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಲು ಸಮಯಾವಕಾಶವಿದೆ ಎಂದು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಂಸದ ಬಿವೈ ರಾಘವೇಂದ್ರ ತಿಳಿಸಿದ್ದಾರೆ. ನಾನು ಸ್ವತಂತ್ರ್ಯ ಸಂಸದೆಯಾಗಿರುವುದರಿಂದ ಈ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ, ಹೀಗಾಗಿ ನಾನು ಪ್ರತ್ರಿಕ್ರಿಯಿಸುವುದಿಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com