'ಗುಟುರು ಹಾಕಿಯೇ ಮೇಕೆದಾಟು ಯೋಜನೆ ಜಾರಿಗೊಳಿಸುತ್ತೇನೆ, ಕೈಲಾಗದ ನೀವು ಬಾಯಿ ಬಡಾಯಿಯ ಸೀಟಿ ಊದುತ್ತಾ ಇರಿ'
ಬಿಜೆಪಿ ಸರ್ಕಾರದ ವೈಫಲ್ಯವನ್ನು ಒಪ್ಪಿಕೊಂಡಿರುವುದಕ್ಕೆ ಸಿ.ಟಿ. ರವಿ ಅವರಿಗೆ ಧನ್ಯವಾದ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
Published: 02nd March 2022 11:09 AM | Last Updated: 02nd March 2022 01:10 PM | A+A A-

ಸಿದ್ದರಾಮಯ್ಯ
ಬೆಂಗಳೂರು: ಬಿಜೆಪಿ ಸರ್ಕಾರದ ವೈಫಲ್ಯವನ್ನು ಒಪ್ಪಿಕೊಂಡಿರುವುದಕ್ಕೆ ಸಿ.ಟಿ. ರವಿ ಅವರಿಗೆ ಧನ್ಯವಾದ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
'ತಮಿಳುನಾಡನ್ನು ಒಪ್ಪಿಸೋ ತಾಕತ್ತು ಸಿದ್ದರಾಮಯ್ಯ ಅವರಿಗಿದೆ. ಒಂದು ಗುಟುರು ಹಾಕಿದ್ರೆ ಸಾಕು' ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಹೇಳಿಕೆಗೆ, ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. 'ಹೆಚ್ಚು ಮಾತು ಬೇಡ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜೀನಾಮೆ ಕೊಡಲು ಹೇಳಿ ಬಿಡಿ' ಎಂದು ಟ್ಟಿಟ್ಟರ್ ನಲ್ಲಿ ತಿರುಗೇಟು ನೀಡಿದ್ದಾರೆ.
.@BJP4India ಸರ್ಕಾರದ ವೈಫಲ್ಯವನ್ನು ಒಪ್ಪಿಕೊಂಡದ್ದಕ್ಕೆ @CTRavi_BJP ಅವರಿಗೆ ಧನ್ಯವಾದ.
— Siddaramaiah (@siddaramaiah) March 2, 2022
ಹೆಚ್ಚು ಮಾತು ಬೇಡ, @narendramodi ಅವರಿಗೆ ರಾಜಿನಾಮೆ ಕೊಡಲು ಹೇಳಿ ಬಿಡಿ.
ನಾನು ಗುಟುರು ಹಾಕಿಯೇ ಮೇಕೆದಾಟು ಯೋಜನೆ ಜಾರಿಗೊಳಿಸುತ್ತೇನೆ.
ಕೈಲಾಗದ ನೀವು ಈ ರೀತಿ
ಬಾಯಿ ಬಡಾಯಿಯ ಸೀಟಿ ಊದುತ್ತಾ ಇರಿ.#Mekedatu pic.twitter.com/IqY3fV5TY3
'ನಾನು ಗುಟುರು ಹಾಕಿಯೇ ಮೇಕೆದಾಟು ಯೋಜನೆ ಜಾರಿಗೊಳಿಸುತ್ತೇನೆ. ಕೈಲಾಗದ ನೀವು ಈ ರೀತಿ ಬಾಯಿ ಬಡಾಯಿಯ ಸೀಟಿ ಊದುತ್ತಾ ಇರಿ' ಎಂದು ಸಿ.ಟಿ. ರವಿ ಅವರನ್ನು ಟ್ಟೀಟ್ ಮೂಲಕ ಸಿದ್ದರಾಮಯ್ಯ ಮೂದಲಿಸಿದ್ದಾರೆ.
ಇದನ್ನೂ ಓದಿ: ಇಂದಿನಿಂದ 3 ದಿನ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಆಗಲಿದೆ, ಕ್ಷಮೆ ಇರಲಿ- ಡಿಕೆ ಶಿವಕುಮಾರ್
ಚಿಕ್ಕಮಗಳೂರಲ್ಲಿ ಮಾತನಾಡಿದ್ದ ಸಿ.ಟಿ. ರವಿ ಅವರು, 'ತಮಿಳುನಾಡನ್ನು ಒಪ್ಪಿಸೋ ತಾಕತ್ತು ಸಿದ್ದರಾಮಯ್ಯ ಅವರಿಗೆ ಇದೆ. ಒಂದು ಮಾತು ಇಲ್ಲವೇ ಸಿದ್ದರಾಮಯ್ಯ ಅವರು ಒಂದು ಗುಟುರು ಹಾಕಿದ್ರೆ ಸಾಕು. ಸೋನಿಯಾ ಗಾಂಧಿ ಅಲರ್ಟ್ ಆಗುತ್ತಾರೆ. ಸೋನಿಯಾ ಗಾಂಧಿ ಅವರ ಮಾತನ್ನು ಚಿದಂಬರಂ ತೆಗೆದುಹಾಕಲ್ಲ. ಚಿದಂಬರಂ ಮಾತನ್ನು ಸ್ಟಾಲಿನ್ ತೆಗೆದುಹಾಕಲ್ಲ. ಇದು ಸುಲಭದಲ್ಲಿ ಆಗಲಿರುವ ಸಂಗತಿ. ಪಾದಯಾತ್ರೆ ಉದ್ದೇಶ ರಾಜಕಾರಣವೇ ಹೊರತು ಬೇರೆನಿಲ್ಲ' ಎಂದಿದ್ದರು.